20ಕ್ಕೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
Best Teacher Award presented to 20
20ಕ್ಕೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಹೂವಿನ ಹಡಗಲಿ 14: ಪಟ್ಟಣದ ಸರ್ಕಾರಿನೌಕರರ ಭವನದಲ್ಲಿ 2025 ನೇ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭಆಯೋಜನೆ ಕುರಿತು ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಪೂರ್ವಭಾವಿ ಸಭೆ ಜರುಗಿತು.ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗದ ಅಧ್ಯಕ್ಷ ಸುರೇಶ ಅಂಗಡಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೆ.20 ರಂದು ಪ್ರಸಕ್ತ ಸಾಲಿನ ಡಾಽರಾಧಾಕೃಷ್ಣನ್ ನೆನಪಿನಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭನಿರ್ಧರಿಸಲಾಯಿತು. ನಡೆಸಲುಬೀಚಿ ಬಳಗದ ಹಿರಿಯ ಸದಸ್ಯರಾದ ಬೀರಬ್ಬಿ ಬಸವರಾಜ ಸದಸ್ಯತ್ವ ಅಭಿಯಾನ ಕಾಠ್ಯಕ್ರಮ ಮುಂದುವರೆಸಲು ಅಭಿ ಪ್ರಾಯ ವ್ಯಕ್ತಪಡಿಸಿದರು. ವರ್ಷಪೂರ್ತಿ ವಿಭಿನ್ನ ಕಾಠ್ಯಕ್ರಮಗಳನ್ನು ಆಯೋಜಿಸುವಕುರಿತು ಆದ್ಯತೆ ನೀಡಬೇಕು ಎಂದರು.ಬಳಗದ ಮಾಜಿ ಅಧ್ಯಕ್ಷ ಎಲ್ ಖಾದರಭಾಷಾ ಬಳಗದ ಬೈಲಾ ಕುರಿತು ಮಾಹಿತಿ ನೀಡಿದರು. ಕನಿಷ್ಟ 5 ಸಾವಿರ, ಅದಕ್ಕೂ ಹೆಚ್ಚು ಹಣ ದತ್ತಿ ನೀಡುವ ದಾನಿಗಳನ್ನು ವನಿಗಳನ್ನು ಸಂಪರ್ಕಿಸಿ ಸ್ಥಿರ ಠೇವಣಿ ಬ್ಯಾಂಕ್ ನಲ್ಲಿ ತೆರೆಯಲು ಸಭೆ ಒಪ್ಪಿಗೆ ಸೂಚಿಸಿತು.?. ಸಭೆಯಲ್ಲಿ ಬೀಚಿ ಗ್ರಂಥಾಲಯ ಬೆಂಬಲಿಗರ ಬಳಗಕ್ಕೆ ನೂತನ ಕೋಶಾಧ್ಯ ಕ್ಷರಾಗಿ ಗ್ರಂಥಾಲಯಾಧಿಕಾರಿ ನಾರಾಯಣ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.ಬೋವಿ ಹುಲುಗಪ್ಪ ಸಂಘಟನಾ ಕಾವ್ಯದರ್ಶಿ ಬಿಚ್ಚುಗತ್ತಿ ಖಾಜಾ ಹುಸೇನ್, ಶಿಕ್ಷಕರಾದ ಚಿಂತಿ ವಿಶ್ವನಾಥ್, ಎಂ.ಸಿದ್ದೇಶ್ ಮತ್ತಿತರರು ಇದ್ದರು. ಬಳಗದ ಗೌರವ ಕಾಯದರ್ಶಿ ನಾಗರಾಜ್ ಮಲ್ಟಿ ಒಡೆಯರ್ ಸ್ವಾಗತಿಸಿ, ವಂದಿಸಿದರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 