ರಾಜ್ಯಮಟ್ಟದಲ್ಲಿ ಉತ್ತಮ ನಲಿ ಕಲಿ ಶಾಲೆ ಪ್ರಶಸ್ತಿಗೆ ಭಾಜನ

ಲೋಕದರ್ಶನ ವರದಿ

ಮಾಂಜರಿ ದಿ 31: ಕಲಿಕೆಯಲ್ಲಿ ವಿನೂತನ ಪ್ರಯೋಗಗಳನ್ನು ಅಳವಡಿಸಿಕೊಳ್ಳುವ ಜೊತೆಗೆ ಮಕ್ಕಳಿಗೆ ಆಟದೊಂದಿಗೆ ಪಾಠ ಬೋಧಿಸಿ ಗುಣಾತ್ಮಕ ಶಿಕ್ಷಣ ನೀಡುವ ಮೂಲಕ ಗಮನ ಸೆಳೆಯುವ ಗ್ರಾಮೀಣ ಪ್ರದೇಶದ ಶಾಲೆಯೊಂದು ರಾಜ್ಯಮಟ್ಟದಲ್ಲಿ ಉತ್ತಮ ನಲಿ ಕಲಿ ಶಾಲೆ ಎಂಬ ಪ್ರಶಸ್ತಿಗೆ ಭಾಜನವಾಗಿದ್ದು. ಯಕ್ಸಂಬಾ ಪಟ್ಟಣದ ಪಂಚಾಯ್ತಿ ವ್ಯಾಪ್ತಿಯ ಉಳ್ಳಾಗಡ್ಡಿವಾಡಿಯ ಸಕರ್ಾರಿಕಿರಿಯಕನ್ನಡ ಪ್ರಾಥಮಿಕ ಶಾಲೆಯೇ ಈ ಸಾಧನೆಗೈದಿದೆ.

ಸುಮಾರು 800 ಜನಸಂಖ್ಯೆ ಹೊಂದಿರುವ ಉಳ್ಳಾಗಡ್ಡಿವಾಡಿಯಲ್ಲಿ 1967ರಲ್ಲಿ ಸಕರ್ಾರಿಕನ್ನಡಕಿರಿಯ ಪ್ರಾಥಮಿಕ ಶಾಲೆ ಸ್ಥಾಪನೆಯಾಗಿದ್ದು, ಕೇಸ್ತೆ ಮತ್ತುಖೋತ್ ಬಂಧುಗಳು ದಾನವಾಗಿ ನೀಡಿರುವ 7 ಗುಂಟೆ ಭೂಮಿಯಲ್ಲಿಕಟ್ಟಡ ನಿಮರ್ಿಸಲಾಗಿದೆ.ಶಾಲೆಯಲ್ಲಿಒಂದರಿಂದಐದನೇತರಗತಿಯಲ್ಲಿ 30 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.ಶಾಲೆಯಆರಂಭದ ವರ್ಷಗಳಲ್ಲಿ ಪಟಸಂಖ್ಯೆ ಹೆಚ್ಚಿತ್ತು.ಇತ್ತೀಚಿನ ವರ್ಷಗಳಲ್ಲಿ ಕಾನ್ವೆಂಟ್ಗಳತ್ತ ಸಮುದಾಯಆಕಷರ್ಿತವಾಗಿರುವುದರಿಂದ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕುಸಿಯಿತು.20 ರಷ್ಟಿದ್ದ ಪಟಸಂಖ್ಯೆಅಲ್ಲಿನ ಶಿಕ್ಷಕರ ಪ್ರಯತ್ನದಿಂದ 30ಕ್ಕೆ ಏರಿದೆ.

ಶಾಲೆಯತ್ತ ಮಕ್ಕಳನ್ನು ಸೆಳೆಯಲು ಚಟುವಟಿಕೆಯುಕ್ತ ಕಲಿಕೆಗೆ ಶಿಕ್ಷಕರು ಆದ್ಯತೆ ನೀಡಿದ್ದಾರೆ. ನಲಿ ಕಲಿ ಶಿಕ್ಷಣದ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿರುವ ಶಿಕ್ಷಕ ಮಹೇಶ ಮಗದುಮ್ ಮತ್ತು ಸಹ ಶಿಕ್ಷಕ ಶಾಂತಿನಾಥ ಹತ್ತಿಯವರಅವರು ಪಾಲಕರು ಮತ್ತು ಸಮುದಾಯದ ಸಹಭಾಗಿತ್ವದೊಂದಿಗೆ ಸ್ಮಾಟರ್್ಕ್ಲಾಸ್ ರೂಪಿಸಿದ್ದಾರೆ.ಟಿವಿಯಲ್ಲಿ ಬಗೆ ಬಗೆಯಕಥೆ, ಹಾಡು, ರೂಪಕಗಳನ್ನು ಪ್ರದಶರ್ಿಸುವ ಮೂಲಕ ಮಕ್ಕಳಿಗೆ ಅಕ್ಷರಜ್ಞಾನ, ಸಾಮಾನ್ಯಜ್ಞಾನ, ನೈತಿಕ ಮೌಲ್ಯಗಳು ಮತ್ತು ಸಂಸ್ಕಾರ ಮೂಡಿಸುತ್ತಿದ್ದಾರೆ.ನಿತ್ಯವೂ ಶಾಲೆಯ ಮಕ್ಕಳು ನಾಡಗೀತೆ, ರಾಷ್ಟ್ರಗೀತೆಗಳನ್ನು ಟ್ರ್ಯಾಕ್ ಮೂಲಕ ಹಾಡುತ್ತಾರೆ.ಪರದೆ ಮೇಲೆ ನೆರಳು ಬೆಳಕಿನಾಟ ಆಡುವಕಲೆಯನ್ನೂ ಮಕ್ಕಳಿಗೆ ಕರಗತ ಮಾಡಿಕೊಡಲಾಗಿದೆ.

ಮಕ್ಕಳು ಚಿತ್ತಾಕರ್ಷಕವಾಗಿ ಕೈ ಬೆರಳುಗಳಿಂದ ಪರದೆ ಮೇಲೆ ಪ್ರಾಣಿಪಕ್ಷಿ, ಮಹಾತ್ಮರು ಹಾಗೂ ಗೀತೆಗಳಿಗೆ ತಕ್ಕ ಚಿತ್ರಗಳನ್ನು ನೆರಳು ಬೆಳಕಿನಲ್ಲಿ ಮೂಡಿಸುತ್ತಾರೆ.

ಗ್ರಾಮದ ಶಿವಾಜಿ ರಾಯಜಾಧವ, ಸುಭಾಷರಾಯಜಾಧವ, ಏಕನಾಥರಾಯಜಾಧವ, ಪುರುಷೋತ್ತಮರಾಯಜಾಧವ, ಬಾಳಕೃಷ್ಣ ರಾಯಜಾಧವ, ರಂಜೀತ್ರಾಯಜಾಧವ, ಪ್ರಭಾಕರಖೋತ್, ಸುರೇಶಖೋತ್, ಬಾಳು ಮಾಳಿ, ಉಮೇಶ ಡೊಂಗರೆ, ಮಹಾದೇವ ಬಾಕಳೆ, ಅನ್ನಪ್ಪಖೋತ್ಅವರು ಶಾಶ್ವತ ನಿಧಿಯನ್ನು ಬ್ಯಾಂಕ್ನಲ್ಲಿಟ್ಟಿದ್ದು, ಅದರ ಬಡ್ಡಿ ಹಣದಲ್ಲಿ ಶಾಲೆಯ ಪ್ರತಿಭಾವಂತ ಮಕ್ಕಳಿಗೆ ಪ್ರತಿ ವರ್ಷ ಪ್ರೋತ್ಸಾಹಧನ ನೀಡುತ್ತಾರೆ. 

ಶಾಲೆಯ ಹಳೆಯ ವಿದ್ಯಾಥರ್ಿರೂಪಾಲಿ ಖೋತ್ಎಂಬುವವರು 30 ಮಕ್ಕಳಿಗೆ ಟ್ರ್ಯಾಕ್ ಪ್ಯಾಂಟ್ ಮತ್ತುಟೀ ಶಟರ್್ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.ಬಾಳೇಶ ಖೋತ್ಎಂಬುವವರು ಶಾಲೆಯ ವೇದಿಕೆಗೆ ಬಣ್ಣದಚಿತ್ತಾರ ಬರೆಸಿದ್ದಾರೆ.

ಸಕರ್ಾರಿ ಶಾಲೆಗಳಲ್ಲಿ ದಾಖಲಾತಿ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಉಳ್ಳಾಗಡ್ಡಿವಾಡಿಯ ಕಿರಿಯ ಶಾಲೆಯ ಶಿಕ್ಷಕರು ಮನೆ ಮನೆಗೆ ತೆರಳಿ ಪಾಲಕರ ಮನವೊಲಿಸಿ ಮಕ್ಕಳ ದಾಖಲಾತಿ ಹೆಚ್ಚಿಸುತ್ತಿದ್ದಾರೆ. ಶಾಲೆಯಕೊಠಡಿಯೊಂದು ಶಿಥಿಲಗೊಂಡಿದ್ದು, ಶಿಕ್ಷಣ ಇಲಾಖೆ ಶೀಘ್ರ ಹೊಸ ಕೊಠಡಿಯೊಂದನ್ನು ನಿಮರ್ಿಸಿಕೊಡಬೇಕು ಎಂಬುದು ಪಾಲಕರ ಬೇಡಿಕೆಯಾಗಿದೆ.