ಬಾಗಲಕೋಟೆ: ಕೇಂದ್ರ ಸರಕಾರದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಬಾಗಲಕೋಟೆ ಜಿಲ್ಲೆಯಲ್ಲಿ 2017 ರಿಂದ ಇಲ್ಲಿಯವರೆಗೆ ಒಟ್ಟು 23,044 ಫಲಾನುಭವಿಗಳಿಗೆ ಒಟ್ಟು 9.61 ಕೋಟಿ ರೂ. ಸಹಾಯಧನ ನೀಡಲಾಗಿದೆ ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯು ಜನವರಿ 1, 2017 ರಿಂದ ಜಾರಿಗೆ ಬಂದಿದ್ದು, ಈ ಯೋಜನೆಯಡಿ ಮೊದಲನೇ ಗಭರ್ಿಣಿ ತಾಯಂದಿರಿಗೆ ಹೆರಿಗೆಯ ಮೊದಲ ಹಾಗೂ ನಂತರದ ವಿಶ್ರಾಂತಿಗಾಗಿ ಆಥರ್ಿಕ ಸಹಾಯಧನದ ರೂಪದಲ್ಲಿ 3 ಹಂತಗಳಲ್ಲಿ 5 ಸಾವಿರ ರೂ.ಗಳನ್ನು ನೇರ ನಗದು ವಗರ್ಾವಣೆ ಮೂಲಕ ಫಲಾನುಭವಿಗಳ ಖಾತೆಗೆ ವಗರ್ಾಯಿಸಲಾಗುತ್ತಿದೆ.
ಆರೋಗ್ಯವಂತ ತಾಯಿಯಿಂದ ಆರೋಗ್ಯವಂತ ಮಗು ಜನಿಸಬೇಕು ಎಂಬ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಗಭರ್ಿಣಿ ಮತ್ತು ಬಾಣಂತಿಯರಿಗೆ ಉಂಟಾಗುವ ಆಥರ್ಿಕ ತೊಂದರೆ, ಅಪೌಷ್ಟಿಕತೆ, ಶಿಶು ಮರಣ, ಬಾಣಂತಿಯರ ಮರಣ ತಡೆಯಲು ಮಾತೃವಂದನಾ ಯೋಜನೆ ರೂಪಿಸಲಾಗಿದೆ.
ಮೊದಲ ಹೆರಿಗೆ ಸಂದರ್ಭದಲ್ಲಿ ಮಾತ್ರ ನೀಡಲಾಗುವ ಮಾತೃವಂದನಾ ಯೋಜನೆಗೆ ಒಟ್ಟು 3 ಹಂತಗಳಲ್ಲಿ ಅಂಗನವಾಡಿ ಕಾರ್ಯಕತರ್ೆಯರ ಮೂಲಕ ಅಜರ್ಿ ಸಲ್ಲಿಸಬೇಕು. ಅಜರ್ಿ ಸಲ್ಲಿಸಿದ ನಂತರ ಗಭರ್ಿಣಿ ತಾಯಂದಿರ ಖಾತೆಗೆ ನೇರವಾಗಿ ಸಹಾಯಧನ ಜಮಾ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2221 ಅಂಗನವಾಡಿ ಕೇಂದ್ರಗಳಿದ್ದು, ಆ ಮೂಲಕ 2017 ರಿಂದ ಇಲ್ಲಿಯವರೆಗೆ ಒಟ್ಟು 63,984 ಅಜರ್ಿಗಳು ಸಲ್ಲಿಕೆಯಾಗಿವೆ. ಗಭರ್ಿಣಿ ತಾಯಂದರಿಗೆ 9.61 ಕೋಟಿ ಸಹಾಯಧನ ನೀಡಲಾಗಿದೆ. ಮೊದಲನೇ ಹೆರಗೆಯ ಗಭರ್ಿಣಿಯರು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಗಭರ್ಿಣಿ ದಾಖಲೆಯೊಂದಿಗೆ ಮೊದನೇ ಕಂತಿನ ಅಜರ್ಿಯನ್ನು ಆಧಾರ ಮತ್ತು ಬ್ಯಾಂಕ್ ಖಾತೆಯೊಂದಿಗೆ ಸಲ್ಲಿಸಬೇಕು. ನಂತರ 6 ತಿಂಗಳಿಗೆ 2ನೇ ಕಂತಿನ ಅಜರ್ಿಯನ್ನು ಸಲ್ಲಿಸಬೇಕು. ಹೆರಿಗೆಯ ನಂತರ ಮೊದಲನೇ ಸುತ್ತಿನ ಚುಚ್ಚುಮದ್ದು ಹಾಕಿಸಿದ ನಂತರ 3ನೇ ಕಂತಿನ ಅಜರ್ಿ ಸಲ್ಲಿಸಬೇಕು. ಒಟ್ಟು 3 ಹಂತದಲ್ಲಿ ಅಜರ್ಿ ಸಲ್ಲಿಸಿದ ನಂತರ ನೇರ ನಗದು ಮೂಲಕ 5 ಸಾವಿರ ರೂ.ಗಳ ಸಹಾಯಧನವನ್ನು ಜಮಾ ಮಾಡಲಾಗುತ್ತದೆ ಎಂದು ಸಿಇಓ ತಿಳಿಸಿದ್ದಾರೆ.
ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಗನವಾಡಿ ಕೇಂದ್ರ, ಮೇಲ್ವಿಚಾರಕಿಯರಿಗೆ ಹಾಗೂ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ಕಚೇರಿಗಳಿಗೆ ಭೇಟ ನೀಡಿ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು ಕೋರಿದ್ದಾರೆ.