ಬಳ್ಳಾರಿ; ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಉದ್ಘಾಟನೆ ತಪ್ಪದೇ ಜಾನುವಾರುಗಳಿಗೆ ಲಸಿಕೆ ಹಾಕಿ: ಶಾಸಕ ಸೋಮಶೇಖರ್

ಬಳ್ಳಾರಿ 14: ಜಾನುವಾರುಗಳಿಗೆ ಬರುವ ಕಾಲುಬಾಯಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆಯಿಂದ ಕೈಗೊಳ್ಳಲಾದ ಕಾಲುಬಾಯಿಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಪ್ರತಿಯೊಂದು ಜಾನುವಾರುವಿಗೆ ಲಸಿಕೆಯನ್ನು ಹಾಕಿಸಬೇಕು ಎಂದು ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಕರೆ ಕೊಟ್ಟರು. 

ನಗರದ ಶಾಂತಿನಗರದಲ್ಲಿ ಹಮ್ಮಿಕೊಂಡಿದ್ದ 16ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾಡಿದರು. 

ಪ್ರಸ್ತುತ ಜಿಲ್ಲೆಯಾದ್ಯಂತ ಕಾಲು ಬಾಯಿ ಜ್ವರ ರೋಗ ನಿಯಂತ್ರಣಕ್ಕಾಗಿ ಜಾನುವಾರುಗಳಿಗೆ ಮೇಲಿನ ಅವಧಿಯಲ್ಲಿ ಲಸಿಕೆಯನ್ನು ಉಚಿತವಾಗಿ ಪಶುಪಾಲನ ಮತ್ತು ಪಶುವೈದ್ಯಸೇವಾ ಇಲಾಖೆಯಿಂದ ಹಾಕಲಾಗುತ್ತಿದ್ದು, ಜಾನುವಾರು ಮಾಲೀಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು. 

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ.ಎಂ.ಎಸ್.ಗೂಳಪ್ಪಗೋಳ್ ಮಾತನಾಡಿ, ಜಿಲ್ಲೆಯಲ್ಲಿ ಇಂದಿನಿಂದ ಸದರಿ ಲಸಿಕಾ ಕಾರ್ಯಕ್ರಮವನ್ನು 22 ದಿನಗಳ ಕಾಲ ಹಮ್ಮಿಕೊಳ್ಳಲಾಗಿದ್ದು, 39 ಲಸಿಕಾ ತಂಡಗಳು ಲಸಿಕಾ ವೇಳಾಪಟ್ಟಿಯಂತೆ ಜಿಲ್ಲೆಯ ಪ್ರತಿ ಹಳ್ಳಿಗಳಿಗೆ ತೆರಳಿ ಬೆಳಿಗ್ಗೆ 6ರಿಂದ 10ರವರೆಗೆ ಮನೆಗಳಿಗಳಲ್ಲಿರುವ ಜಾನುವಾರುಗಳಿಗೆ ಉಚಿತವಾಗಿ ಲಸಿಕೆ ಹಾಕಲಾಗುತ್ತಿದೆ ಎಂದರು. 

ರಾಬಕೊ ಹಾಲು ಒಕ್ಕೂಟದ ವ್ಯವಸ್ಥಾಪಕ ನಿದರ್ೆಶಕರಾದ ಡಾ.ಬುಕ್ಕಾ ಮಲ್ಲಿಕಾರ್ಜುನ ಅವರು ಪ್ರಾಸ್ತಾವಿಕ ಮಾತನಾಡಿ, ಲಸಿಕೆ ಕಾರ್ಯಕ್ರಮದ ಮಹತ್ವದ ಬಗ್ಗೆ ವಿವರಿಸಿ, ಕಾಲುಬಾಯಿರೋಗವನ್ನು ನಿಯಂತ್ರಿಸಲು ಲಸಿಕೆ ಮೂಲಕ ಮಾತ್ರವೇ ಸಾಧ್ಯವೆಂದು ತಿಳಿಸಿದರು ಹಾಗೂ ಕಾಲುಬಾಯಿ ರೋಗದಿಂದ ದೇಶಕ್ಕೆ ಪ್ರತಿವರ್ಷ ಕೋಟ್ಯಾಂತರ ವರಮಾನ ನಷ್ಟವಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು. 

ಸಹಾಯಕ ನಿರ್ದೇಶಕರಾದ ಡಾ. ಕೆ.ಆರ್.ಶ್ರೀನಿವಾಸ್ವಂದಿಸಿದರು. ರಾಬಕೊ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಡಾ.ಸುನೀಲ್, ಎಯ್ರಿಸ್ವಾಮಿ, ಪ್ರಾದೇಶಿಕ ಸಂಶೋಧನಾಧಿಕಾರಿ ಡಾ.ರಾಜಶೇಖರ್, ಸಹಾಯಕ ನಿರ್ದೇಶಕರುಗಳಾದ ಡಾ.ಟಿ.ಮರಿಬಸವನಗೌಡ, ಡಾ. ಕೆ.ಆರ್.ಶ್ರೀನಿವಾಸ್ ಹಾಗೂ ಮಹಿಳಾ ಹಾಲು ಉತ್ಪಾದಕರ  ಸಹಕಾರ ಸಂಘದ ಅಧ್ಯಕ್ಷ ನೇತ್ರಾವತಿ ಉಪಸ್ಥಿತರಿದ್ದರು.