ಲೋಕದರ್ಶನ ವರದಿ
ಬಳ್ಳಾರಿ 22: ಜಂತು ಹುಳು ನಿವಾರಣ ಮಾತ್ರೆಯನ್ನು ಮಕ್ಕಳಿಗೆ ತಪ್ಪದೆ ನೀಡಿ ಮಾತ್ರೆಗಳನ್ನು ಚೀಪಿಸಿ ಸೇವಿಸುವ ಮೂಲಕ ರಕ್ತ ಹೀನತೆಯನ್ನು ಹಾಗೂ ಮಕ್ಕಳ ಬೆಳವಣಿಗೆ ಕುಂಟಿತವಾಗುವ ಜಂತು ಹುಳುವನ್ನು ನಾಶಗೊಳಿಸಲು ಎಲ್ಲಾರು ಸಹಕರಿಸಬೇಕು ಎಂದು ತಾಲೂಕು ಆರೋಗ್ಯ ಆಧಿಕಾರಿ ಡಾ.ವಿರೇಂದ್ರ ಕುಮಾರ್ ಹೇಳಿದರು.
ನಗರದ 'ಬಿ.ಪಿ.ಎಸ್.ಸಿ' ಶಾಲೆಯಲ್ಲಿ ಶನಿವಾರದಂದು ತಾಲೂಕಿನ ಶಾಲಾ ಶಿಕ್ಷಕರಿಗೆ ಜಂತು ಹುಳು ನಿವಾರಣೆ ಮತ್ತು ಮಾತ್ರೆಯ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾಯರ್ಾಗಾರವನ್ನು ಉದ್ಘಾಟಿಸಿ ಮಾತನಾಡಿದ ಎಲ್ಲಾ ಶಾಲೆ ಕಾಲೇಜುಗಳಲ್ಲಿ, ಅಂಗನವಾಡಿಗಳಲ್ಲಿ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು ಮಕ್ಕಳು ಊಟ ಮಾಡಿದ ನಂತರ ಮಕ್ಕಳಿಗೆ ಮಾತ್ರೆಗಳನ್ನು ಚೀಪಿಸಬೇಕು ಎಂದು ಅವರು ಹೇಳಿದರು.
ನಂತರ ಮಾತನಾಡಿದ ಅವರು ಯಾವುದೇ ಮಗು ಮಾತ್ರೆಯಿಂದ ವಂಚಿತರಾಗದಂತೆ ಗಮನ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮಾತ್ರೆ ವಂಚಿತರಾದ ಮಕ್ಕಳಿಗೆ ಸೆ.30 ವರೆಗೂ ಕೊಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಆರ್.ಬಿ.ಎಸ್.ಕೆ.ವೈದ್ಯಾಧಿಕಾರಿ ಡಾ.ಜ್ಯೋತಿ ಮತ್ತು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್ ಅವರು ತರಬೇತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಎನ್.ಡಿ.ಡಿ ಸಂಯೋಜಕ ಷಡಕ್ಷರಿ, ಹಿರಿಯ ಆರೋಗ್ಯ ಸಹಾಯಕ ಗಿರಿಶ್, ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಾಂತಮ್ಮ, ಕಿರಿಯಾ ಆರೋಗ್ಯ ಸಹಾಯಕ ಹೆಚ್.ಎಂ. ನಾಗರಾಜ್ ಹಾಗೂ ಇತರರು ಇದ್ದರು.