ಲೋಕದರ್ಶನ ವರದಿ
ಬಳ್ಳಾರಿ 11: ವಿದ್ಯಾಥರ್ಿಗಳು ಅಂಕಗಳಿಗಿಂತ ಜ್ಞಾನಗಳಿಕೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಇಸ್ರೋ ನಿವೃತ್ತ ವಿಜ್ಞಾನಿ ಪ್ರೊ.ಸಿ.ಡಿ.ಪ್ರಸಾದ್ ಹೇಳಿದರು.
ರಾಜ್ಯ ವಿಜ್ಞಾನ ಪರಿಷತ್, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ವೀರಶೈವ ವಿದ್ಯಾವರ್ಧಕ ಸಂಘ ನಗರದ ಹೊರವಲಯದ ಎಸ್.ಕೆ.ಮೋದಿ ನ್ಯಾಷನಲ್ ಸ್ಕೂಲ್ನಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯಮಟ್ಟದ ಯುವ ವಿಜ್ಞಾನಿಗಳ ಸಮಾವೇಶಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ಶಿಕ್ಷಕರು, ಪಾಲಕರು ಮತ್ತು ವಿದ್ಯಾಥರ್ಿಗಳು ಸಹಯೋಗದಲ್ಲೇ ಶಿಕ್ಷಣ ಉತ್ತಮಗೊಳ್ಳುತ್ತದೆ. ಪಠ್ಯದಲ್ಲಿ ಇರುವುದನ್ನು ಸುಮ್ಮನೆ ಹೇಳಿದರಷ್ಟೇ ಸಾಲದು, ವಿಭಿನ್ನ, ಹೊಸದನ್ನು ಹೇಳುವ ಕಲೆ ಶಿಕ್ಷಕರು ಕರಗತ ಮಾಡಿಕೊಳ್ಳಬೇಕು. ಪಾಲಕರು ಮನೆಯಲ್ಲಿ ಕಲಿಕೆಯ ವಾತಾವರಣ ನಿಮರ್ಿಸಬೇಕು. ವಿದ್ಯಾಥರ್ಿಗಳು ಶಾಲೆಗೆ ಬಂದು ಓದಿ ಪರೀಕ್ಷೆ ಪಾಸಾದರೆ ಸಾಲದು, ಜ್ಞಾನಾರ್ಜನೆಯನ್ನೇ ಪ್ರಮುಖ ಗುರಿಯಾಗಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ವೀವಿ ಸಂಘದ ಗೌರವ ಕಾರ್ಯದಶರ್ಿ ಚೋರನೂರು ಕೊಟ್ರಪ್ಪ ಮಾತನಾಡಿದರು. ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದಶರ್ಿ ಗಿರೀಶ್ ಕಡ್ಲೆವಾಡ, ಸಮಾವೇಶದ ಸಂಚಾಲಕ ಎಚ್.ಜಿ.ಹುದ್ದಾರ್, ಸ್ಕೂಲ್ನ ಆಡಳಿತ ಮಂಡಳಿ ಅಧ್ಯಕ್ಷ ಏಚರೆಡ್ಡಿ ಸತೀಶ್ ಇತರರಿದ್ದರು.