ಲೋಕದರ್ಶನ ವರದಿ
ಬಳ್ಳಾರಿ 01: ಅರಣ್ಯ ಒತ್ತುವರಿ ಮಾಡಿರುವ ವಿಜಯನಗರ ವಿಧಾನಸಭಾ ಕ್ಷೇತ್ರದ ಶಾಸಕ ಆನಂದ್ ಸಿಂಗ್ಗೆ ಅರಣ್ಯ ಖಾತೆ ನೀಡಿರುವುದು ಕುರಿಗಳಿಗೆ ತೋಳ ಕಾವಲು ಇಟ್ಟಂತಾಗಿದೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಆರೋಪಿಸಿದರು.
ಗಣಿಗಾರಿಕೆ ವೇಳೆ ಅರಣ್ಯ ಕಾಯ್ದೆ ಉಲ್ಲಂಘನೆಯಡಿ ಆನಂದ್ ಸಿಂಗ್ ವಿರುದ್ಧ 8ಪ್ರಕರಣ ದಾಖಲಾಗಿದ್ದು, ಸುಪ್ರೀಂಕೋರ್ಟ ನಿರ್ದೇಶನದ ಮೇರೆಗೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.ಜಾಜರ್್ಶೀಟ್ನಲ್ಲಿ ದಾಖಲಿಸಿದಂತೆ ಸರ್ಕಾರದ ಬೊಕ್ಕಸಕ್ಕೆ ಒಟ್ಟು 23,20 ಕೋಟಿ ರೂ.ನಷ್ಟ ಉಂಟು ಮಾಡಿದ್ದಾರೆ.ಈ ರೀತಿ ಹಲವು ಪ್ರಕರಣಗಳಲ್ಲಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿ ನಂಬಿಕೆ ದ್ರೋಹ ವೆಸಗಿದವರಿಗೆ ಅರಣ್ಯ ಖಾತೆ ನೀಡಿದರೆ, ಪ್ರಕರಣಗಳ ವಿಚಾರಣೆ ವೇಳೆ ಸಾಕ್ಷೃಗಳು ಹೇಳಲು ಮುಂದೆ ಬರುತ್ತವೆಯೇ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ರಾಮಾಯಣ ಬರೆದಿರುವ ವಾಲ್ಮೀಕಿಯಂತೆ ನನಗೂ ಬದಲಾವಣೆಯಾಗಲು ಅವಕಾಶ ಕೊಡಿ ಎಂದಿರುವ ಆನಂದ್ಸಿಂಗ್ ಹೇಳಿಕೆ ಖಂಡಿಸಿಯ.ವಾಲ್ಮೀಕಿ ಸುಳ್ಳನೂ ಅಲ್ಲ, ಕಳ್ಳನೂ ಅಲ್ಲ.ಈ ಬಗ್ಗೆ ವಾಲ್ಮೀಕಿಯವರೇ ರಾಮಾಯಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.ವಾಲ್ಮೀಕಿ ಹೆಸರಲ್ಲಿ ನಾಯಕ ಸಮುದಾಯಕ್ಕೆ ಆನಂದ್ಸಿಂಗ್ ಅಪಮಾನ ಮಾಡಿದ್ದು, ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ವಿರುದ್ಧ ಅವಹೇಳನಕಾರಿಯಾಗಿ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿರುವುದು ಸರಿಯಲ್ಲ.ದೊರೆಸ್ವಾಮಿ ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ಸರ್ಕಾರಗಳ ವಿರುದ್ಧವೂ ಹೋರಾಟ ಮಾಡಿದ್ದಾರೆ.ಸ್ವಾತಂತ್ರೃ ಹೋರಾಟಗಾರರ ವಿರುದ್ಧ ಮಾತನಾಡಬಾರದು ಎಂಬ ಅಧಿನಿಯಮವೇ ಇದೆ.ಹಾಗಾಗಿ ಯತ್ನಾಳ್ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಉಗ್ರಪ್ಪ ಒತ್ತಾಯಿಸಿದರು.
ಮುಖಂಡರಾದ ಕಲ್ಲುಕಂಬ ಪಂಪಾಪತಿ, ಎಂ.ಬಿ ಪಾಟೀಲ್, ಮಾರೆಣ್ಣ, ಲೋಕೇಶ್, ವೆಂಕಟೇಶ್ ಹೆಗಡೆ ಇದ್ದರು.