ಬಳ್ಳಾರಿ: ಉಕ್ಕಿನ ನಗರದಲ್ಲಿ ಇಂದಿನಿಂದ 10ನೇ ರಾಜ್ಯಮಟ್ಟದ ಮಕ್ಕಳ ತಜ್ಞರ ಸಮ್ಮೇಳನ

ಲೋಕದರ್ಶನ ವರದಿ

ಬಳ್ಳಾರಿ 20: ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿ, ಬಳ್ಳಾರಿ ಶಾಖೆ, ಮಕ್ಕಳ ವೈದ್ಯಕೀಯ ವಿಭಾಗ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬಳ್ಳಾರಿ ಇವರ ಸಂಯುಕ್ತಾಶ್ರಯದಲ್ಲಿ ಕರ್ನಾಟಕ  ರಾಜ್ಯ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ  ರಾಜ್ಯಮಟ್ಟದ 10ನೇ ಮಕ್ಕಳ ತೀವ್ರನಿಗಾ ಪಾಲನೆಯ  "ಉಕ್ಕಿನ ನಗರ ಪೆಡಿಕ್ರಿಟಿಕಾನ್-2019" ರಾಜ್ಯ ವೈದ್ಯಕೀಯ ಸಮ್ಮೇಳನವು ಬಳ್ಳಾರಿಯ ತೋರಣಗಲ್ಲಿನ ಜಿಂದಾಲ್ ಟೌನ್ಶಿಪ್ ಆರ್ ಅಂಡ್ ಡಿ ಸಭಾಂಗಣದಲ್ಲಿ ಜೂನ್ ತಿಂಗಳ ದಿನಾಂಕ 21, 22 ಮತ್ತು 23 ರಂದು ನಡೆಯಲಿದೆ ಎಂದು ತಿಳಿಸಿದರು. 

ಈ ಕುರಿತು ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಮಕ್ಕಳ ತಜ್ಞವಿಭಾಗದ ವೈದ್ಯರಾದ ಯೋಗಾನಂದರೆಡ್ಡಿ.ವೈ.ಸಿ ಮತ್ತಿತರರು ಮಾತನಾಡಿ ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯು ಮಕ್ಕಳ ತಜ್ಙರ ಅತಿ ದೊಡ್ಡ ಸಂಘವಾಗಿದ್ದು ಸುಮಾರು 30000 ಕ್ಕೂ ಹೆಚ್ಚು ಸದಸ್ಯರುಗಳನ್ನು ಹೊಂದಿದೆ. ನಿರಂತರ ವೈದ್ಯ ಶಿಕ್ಞಣವು ಅದರ ಮುಖ್ಯ ಕಾರ್ಯ ಚಟುವಟಿಕೆಯಾಗಿದ್ದು  ಸಮ್ಮೇಳನಗಳು,ಸಂವಾದಗಳು, ಹಾಗೂ ಹಲವಾರು ಗೋಷ್ಠಿಗಳ ಮುಖಾಮತರ ಇವುಗಳನ್ನು ನಡೆಸಿಕೊಂಡು ಬರುತ್ತಿದೆ. ಮಕ್ಕಳ ತೀರ್ವನಿಗಾ ಪಾಲನೆಯು ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯ ಅತಿ ಮುಖ್ಯ [ಉಪ ವಿಭಾಗ] ಉಪಸ್ಪೆಷಾಲಿಟಿಯಾಗಿದ್ದು ಕಳೆದೊಂದು ದಶಕದಿಂದ ಮಕ್ಕಳ ತೀರ್ವ ನಿಗಾಪಾಲನೆಯ ವಿಭಾಗವು ತ್ವರಿತಗತಿಯಲ್ಲಿ ಪ್ರಗತಿ ಸಾಧಿಸುತ್ತಾ ಬಂದಿದೆ.  

ಸಮ್ಮೇಳನದಲ್ಲಿ ರೂಪುಗೊಳಿಸಲಾಗಿದೆ. ಭಾರತದ ವಿವಿಧ ಪ್ರದೇಶಗಳಿಂದ  ಮಕ್ಕಳ ತೀರ್ವ ನಿಗಾಪಾಲನೆಯಲ್ಲಿ ಅತ್ಯಂತ ನುರಿತ ಸುಮಾರು 80 ವೈದ್ಯರು ಈ ಸಮ್ಮೇಳನದಲ್ಲಿ ಉಪನ್ಯಾಸ ನೀಡಲಿದ್ದಾರೆ. ಹಾಗೇನೇ ಕಾನರ್ಾಟಕದ  ಸುಮಾರು 450ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದು ಇವರಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ತಜ್ಙರು ಸ್ನಾತಕೋತ್ತರವಿದ್ಯಾರ್ಥಿಗಳು  ಸೇರಿದ್ದಾರೆ. ಈ ಸಮ್ಮೇಳನದ ಮುಖ್ಯ ಉದ್ಘಾಟಕರಾಗಿ ಕನರ್ಾಟಕ ಸರಕಾರದ ಮಾನ್ಯ ವೈದ್ಯಕೀಯ ಶಿಕ್ಷಣ ಮಂತ್ರಿಗಳಾದ ಇ.ತುಕಾರಾಮ್ ಭಾಗವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಂದಾಲ್ ಉಕ್ಕಿನ ಕಾಖರ್ಾನೆಯ ಉಪ ವ್ಯವಸ್ಥಾಪಕ ನಿದರ್ೇಶಕರಾದ ಡಾ.ವಿನೋದ್ ನಾವಲ್ ಆಗಮಿಸುತ್ತಿದ್ದು ಜಿಂದಾಲ್ ಉಕ್ಕಿನ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಟ್ಟಣಶೆಟ್ಟಿ, ಜಿಂದಾಲ್ ಉಕ್ಕಿನ ಸಂಸ್ಥೆಯ  ಹಿರಿಯ ಉಪಾಧ್ಯಕ್ಷ ಮಂಜುನಾಥ್ ಪ್ರಭು ಇವರುಗಳು ಗೌರವ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ ಎಂದು ವಿವರಿಸಿದರು. 

ಸಂಘದ ರಾಷ್ಟಾದ್ಯಕ್ಷ ಬಕುಲ್ ಪಾರೇಖ್, ಹಾಗೂ ನಿಕಟಪೂರ್ವ ಅಧ್ಯಕ್ಷರಾದ ಡಾ.ಸಂತೋಶ್ ಸೋನ್ಸ್, ಹಿರಿಯ ಉಪಾಧ್ಯಕ್ಷ ಶ್ರೀನಾಥ್ ಮುಗಳಿ, ರಾಜ್ಯ ಶಾಖೆಯ ಅದ್ಯಕ್ಷ ಕಾಳಪ್ಪನವರ್, ಕನರ್ಾಟಕದ ಮಕ್ಕಳ ತೀವ್ರನಿಗಾ ಪಾಲನೆಯ ಸಂಘದ ರಾಜ್ಯ ಅಧ್ಯಕ್ಷ ಬಾಬಣ್ಣ ಹುಕ್ಕೇರಿ, ಮಕ್ಕಳ ತೀವ್ರನಿಗಾ ಪಾಲನೆಯ ಸಂಘದ ನಿಯೋಜಿತ ರಾಜ್ಯ ಅಧ್ಯಕ್ಷ ಬಸವರಾಜ್.ಜಿ.ವಿ, ಕನರ್ಾಟಕ ಶಾಖೆಯ ನಿಯೋಜಿತ ಅಧ್ಯಕ್ಷ ದೀಪಕ್ ಚಿರದೋಣಿ, ವಿಜಯನಗರ ವೈದ್ಯಕೀಯ ವಿಜ್ಙಾನ ಸಂಸ್ಥೆಯ ನಿರ್ದೇಶಕರಾದ  ಡಾ ಲಕ್ಷ್ಮಿನಾರಾಯಣ ರೆಡ್ಡಿ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ದಿ: 22-06-2019 ಶನಿವಾರದಂದು ಜಿಂದಾಲ್ನ ಆರ್. & ಡಿ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ನಡೆಯಲಿರುವ ಈ ಸಮ್ಮೇಳನದ ಉಧ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. 

ಪತ್ರಿಕಾಗೋಷ್ಟಿಯಲ್ಲಿ ಯೋಗಾನಂದ ರೆಡ್ಡಿ.ವೈ.ಸಿ, ದುರುಗಪ್ಪ.ಹೆಚ್, ಬಾಲವೆಂಕಟೆಶ್ವರರಾವ್, ಅಜಯ್.ಎಸ್.ಕೆ. ಅಧ್ಯಕ್ಷರು, ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿ, ಬಳ್ಳಾರಿ ಶಾಖೆ ಸುನೀಲ್ ಕುಮಾರ್.ಪಿ.    ಕಾರ್ಯದರ್ಶಿಗಳು , ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿ, ಬಳ್ಳಾರಿ ಶಾಖೆ, ಶ್ರೀಕಾಂತ್, ಭಾವನಾ ಸೇರಿದಂತೆ ಇನ್ನು ಹಲವಾರು ವೈದ್ಯರು ಉಪಸ್ಥಿತರಿದ್ದರು.