ಲೋಕದರ್ಶನ ವರದಿ
ಬಳ್ಳಾರಿ 02: ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ನೌಕರರ ಪತ್ತಿನ ಸಹಕಾರ ಸಂಘದ ವಿಶೇಷ ಮಹಾಸಭೆಯು ದಿನಾಂಕ 02.06.2019ರಂದು ಬೆಳಿಗ್ಗೆ 11.00 ಗಂಟೆಗೆ ಗಾಂಧಿನಗರ ಕನಕದುರ್ಗಮ್ಮ ಬಡಾವಣೆಯಲ್ಲಿನ ಸಂಘದ ಸಮುದಾಯ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಎಸ್.ಟಿ.ವೇಣುಗೋಪಾಲಶೆಟ್ಟಿ ವಹಿಸಿದ್ದರು.
ಮೊದಲಿಗೆ ಸಂಘದ ಕಾರ್ಯದಶರ್ಿಗಳು ಈ ವಿಶೇಷ ಮಹಾಸಭೆಗೆ ಆಗಮಿಸಿದ ಎಲ್ಲಾ ಸದಸ್ಯರನ್ನು ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಸಭೆಯಲ್ಲಿ ಮಂಡಿಸಿದ ಸಂಘದ ಹೆಸರು, ಕಾರ್ಯಕ್ಷೇತ್ರ ಕುರಿತಂತೆ ಇರುವ ತಿದ್ದುಪಡಿಗಳಿಗೆ ವಿಶೇಷ ಮಹಾಸಭೆಯು ಸವರ್ಾನುಮತದಿಂದ ಅನುಮೋದನೆ ನೀಡಿತು. ಸಭೆಯಲ್ಲಿ ನಿರ್ದೇಶಕರಾದ ಬಸವರಾಜ ಪುಣ್ಯಮೂರ್ತಿ, ಕೆ.ಎಂ.ಗುರುಮೂತರ್ಿ, ಶ್ರೀಧರ ಜೋಷಿ, ಪ್ರಾಣೇಶ ಮುತಾಲಿಕ್ ಮುಂತಾದವರು ಸಂಘ ಬೆಳವಣಿಗೆಗಳ ಕುರಿತು ಮಾತನಾಡಿದರು. ನಂತರ ಅಧ್ಯಕ್ಷರು ಸಂಘದ ಬೆಳವಣಿಗೆಗಳ ಕುರಿತು ಮಾತನಾಡುತ್ತಾ, ಸಂಘದ ಬೆಳೆವಣಿಗೆಗೆ ಸಹಕರಿಸಿದ ಎಲ್ಲಾ ಸದಸ್ಯ ಬಾಂಧವರಿಗೆ, ನಿರ್ದೇಶಕರಿಗೆ, ನಿವೃತ್ತ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ವಿಶೇಷ ಮಹಾಸಭೆಯಲ್ಲಿ ಸಂಘದ ಉಪಾಧ್ಯಕ್ಷರಾಗಿದ್ದ ಎಸ್.ವಿಶ್ವನಾಥ್ರವನ್ನು ಹಾಗೂ ನಿದರ್ೆಶಕರಾಗಿದ್ದ ಎ.ಆರ್.ಪರಮೇಶ್ವರಪ್ಪ ಅವರನ್ನು ಸದಸ್ಯರ ಕರತಾಡನಗಳ ಮಧ್ಯೆ ಅತ್ಮೀಯವಾಗಿ ಸನ್ಮಾನಿಸಲಾಯಿತು. ಈ ವಿಶೇಷ ಮಹಾಸಭೆಗೆ ಸಂಘದ ಎಲ್ಲಾ ನಿರ್ದೇಶಕರು ಸದಸ್ಯರು ಹಾಗೂ ನಿವೃತ್ತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಮಹಾಸಭೆಯನ್ನು ಯಶಸ್ವಿಗೊಳಿಸಿದರು.