ಲೋಕದರ್ಶನ ವರದಿ
ಬಳ್ಳಾರಿ 25: ರಾಜ್ಯದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ರಹಿತರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆ ಮತ್ತು ರಾಜೀವಗಾಂಧಿ ವಸತಿ ನಿಗಮದಿಂದ ಬರುವ ಮುಂದಿನ ವರ್ಷದಲ್ಲಿ 10 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಅವರು ಹೇಳಿದರು.
ನಗರದ ಹೊರವಲಯದ ಮುಂಡರಗಿ ಹತ್ತಿರದ ರಾಜೀವಗಾಂಧಿ ವಸತಿ ನಿಗಮ ದಿಂದ ಎನ್ಎಂಡಿಸಿ ಮಹಾತ್ಮಾಗಾಂಧಿ ವಸತಿ ಯೋಜನೆಯಡಿ 338 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 5616 ಮನೆಗಳ ಕಾಮಗಾರಿ ಪರಿಶೀಲನೆ ಮಾಡಿದ ನಂತರ ಅವರು ಮಾತನಾಡಿದರು. ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 5 ಲಕ್ಷ ಮನೆ, ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ 1.20 ಲಕ್ಷ ಮನೆ, ರಾಜೀವಗಾಂಧಿ ವಸತಿ ನಿಗಮ ದಿಂದ ಬೆಂಗಳೂರಿನಲ್ಲಿ 1 ಲಕ್ಷ ಮತ್ತು ಬಳ್ಳಾರಿ, ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಮೊದಲಾದ ನಗರಗಳಲ್ಲಿ 1.5 ಲಕ್ಷ ಮನೆಗಳನ್ನು ನಿಮರ್ಾಣ ಮಾಡಲಾಗುತ್ತದೆ ಎಂದರು.
ಮನೆಗಳ ನಿರ್ಮಾಣ ಗುಣಮಟ್ಟ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. 5616 ಮನೆಗಳನ್ನು ಮುಂದಿನ ವರ್ಷದ ಮಾಚರ್್ ಅಂತ್ಯದೊಳಗೆ ಜನರಿಗೆ ನೀಡುವ ಭರವಸೆಯನ್ನು ಸಚಿವರು ನೀಡಿದರು. ಮುಂಡ್ರಿಗಿ ಆಶ್ರಯ ಯೋಜನೆಗಳ ಮನೆಗಳ ಸ್ಥಳ ಪರಿಶೀಲಿಸಿದ ಸಂದರ್ಭದಲ್ಲಿ ಪಾಳಿಕೆಯ ಆಯುಕ್ತೆ ತುಷಾರ್ ಮಣಿ ಅವರು ಇಲ್ಲದ ಕಾರಣ ಕೆಂಡಮಂಡಲವಾದ ಸಚಿವ ಸೋಮಣ್ಣ ನಾನು ಆರು ಬಾರಿ ಸಚಿವನಾಗಿದ್ದೇನೆ, ನಾನು ಬರುವುದು ಗೊತ್ತಿದ್ದು ಸಹ ಬೆಂಗಳೂರಿನಲ್ಲಿ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಹಾಜರಾಗಿರುವ ಸಂಗತಿಯನ್ನು ಜಿಲ್ಲಾಧಿಕಾರಿಗಳು ತಿಳಿಸಿದರು. ಆಗ ಕೋಪಗೊಂಡ ಸಚಿವ ಸೋಮಣ್ಣ ಜಿಲ್ಲಾಧಿಕಾರಿಗಳು ಇದ್ದರೂ ಪಾಲಿಕೆಯ ಆಯುಕ್ತರು ಇಲ್ಲದೇ ಇರುವುದು ಇದರ ಬಗ್ಗೆ ಮಾಹಿತಿ ಕೊಡುವವರು ಈತರ ಹೋಗಿರುವುದು ಎಷ್ಟರ ಮಟ್ಟಿಗೆ ಸರಿಯೆಂದು ಪ್ರಶ್ನಿಸಿದರು.
ಈ ಮನೆಗಳ ನಿರ್ಮಾಣಕ್ಕೆ ನೀರನ್ನು ಎಲ್ಲಿಂದ ಒದಗಿಸುತ್ತೀರಿ ಎಂದು ಪ್ರಶ್ನಿಸಿದಾಗ ನೀರಿಲ್ಲದೇ ಹೊಸ ತಂತ್ರಜ್ಞಾನದಿಂದ ನಿರ್ಮಾಣ ಮಾಡಲಾಗುತ್ತದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಹೇಳಿದರು.
ನಿರ್ಮಾಣದ ಉಸ್ತುವಾರಿ ಎರಡು ವರ್ಷದೊಳಗೆ ಸಕರ್ಾರ ನಿಗದಿಪಡಿಸಿದೆ ಎಂದು ಹೇಳಿದಾಗ ಇದು ಎರಡು ವರ್ಷದಲ್ಲಿ ಆಗುವ ಕೆಲಸವಲ್ಲ ಒಟ್ಟಾಗಿ ಐದು ವರ್ಷದ ಅವಧಿಯಲ್ಲಿ ಮುಗಿಸಿಕೊಡಬೇಕು. ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ವಿವರಿಸಿದರು. ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾತನಾಡಿ, ಬಳ್ಳಾರಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳು ಕ್ಯೂರಿಂಗ್ ಕಾಂಪೌಂಡ್ ಪ್ರಕ್ರಿಯೆಯಿಂದ ಕೂಡಿದ್ದು, ಇವುಗಳಿಗೆ ನೀರು ಹಾಕಿ ಕ್ಯೂರಿಂಗ್ ಮಾಡಬೇಕಿಲ್ಲ. ಇವು 100 ವರ್ಷ ಬಳಕೆಗೆ ಬರಲಿದೆ ಎಂದರು.
ಈ ಪ್ರದೇಶಲ್ಲಿ ಶಾಲೆ, ಆಸ್ಪತ್ರೆ, ಅಂಗನವಾಡಿ ಕೇಂದ್ರ, ವಾಣಿಜ್ಯ ಮಳಿಗೆ, ಕ್ರೀಡಾಂಗಣ, ಕುಡಿಯುವ ನೀರು, ಬೀದಿ ದೀಪ, ಉದ್ಯಾನವನ, ಒಳಚರಂಡಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರೆಡ್ಡಿ, ಸಂಸದ ವೈ.ದೇವೇಂದ್ರಪ್ಪ, ರಾಜೀವಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿದರ್ೇಶಕರಾದ ರಾಮ್ ಪ್ರಸಾತ್ ಮನೋಹರ್ ಸೇರಿದಂತೆ ಇತರರು ಇದ್ದರು.