ಲೋಕದರ್ಶನ ವರದಿ
ಬಳ್ಳಾರಿ 08: ಕರ್ನಾಟಕವನ್ನು ಬರಮುಕ್ತ ರಾಜ್ಯವನ್ನಾಗಿ ಮಾಡಲು ರಾಜ್ಯ ರೈತಸಂಘ ಇದೇ ತಿಂಗಳ 21 ರಂದು ಬೆಳಗಾವಿಯಲ್ಲಿ ಹಮ್ಮಿಕೊಂಡಿರುವ 39ನೇ ರೈತ ಹುತಾತ್ಮ ದಿನಾಚರಣೆ ದಿನ ಬರಮುಕ್ತ ಕರ್ನಾಟಕಕ್ಕೆ ರೈತಸಂಘ ಸಂಕಲ್ಪ ಮಾಡಲಿದೆ ಎಂದು ಕನರ್ಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಹೇಳಿದ್ದಾರೆ. ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡುತ್ತಾ ಹುತಾತ್ಮರ ದಿನಾಚರಣೆಯನ್ನು ಈ ಬಾರಿ ಬೆಳಗಾವಿಯ ಗಾಂಧಿಭವನದಲ್ಲಿ ಜು.21 ರಂದು ಹಮ್ಮಿಕೊಂಡಿದ್ದೇವೆ.
ಬೃಹತ್ ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ರೈತವಿರೋದಿ ನೀತಿಯನ್ನು ಖಂಡಿಸಿ ರಾಜ್ಯ ಸಮ್ಮಿಶ್ರ ಸರಕಾರ ವೈಪಲ್ಯ ಮತ್ತು ವಿರೋದ ಪಕ್ಷಗಳ ದಿವಾಳಿತನವನ್ನು ಬಯಲಿಗೆ ಎಳೆಯಲಿದೆ. ಮತ್ತು ಬರಮುಕ್ತ ಕನರ್ಾಟಕ ಮಾಡುವ ಚಿಂತನೆ ನಡೆಯಲಿದೆ. ಉತ್ತರ ಪ್ರದೇಶದ ರಾಜೇಂದ್ರಸಿಂಗ್ ಈಗಾಗಲೇ ರಾಜಸ್ಥಾನದಲ್ಲಿ ಬತ್ತಿ ಹೋಗಿದ್ದ 5 ನದಿಗಳನ್ನು ಪುನಶ್ಛೇತನಗೊಳಿಸಿದ್ದು ಅವರ ಮಾರ್ಗದರ್ಶನದಲ್ಲಿ ನದಿ ಪಾತ್ರಗಳಲ್ಲಿ ಗಿಡ ಮರಗಳನ್ನು ನಡುವುದು, ಕೆರೆ ಒತ್ತುವರಿ ತೆರುವುಗೊಳಿಸುವಿಕೆ.
ಈ ಎಲ್ಲಾ ಕಾರ್ಯಗಳನ್ನು ಕೈಗೊಳ್ಳಲು ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರನ್ನು ಸೇರಿಸಿ ಪ್ರತೀ ಜಿಲ್ಲೆಯಲ್ಲಿ ನೂರು ಜನ ಕಾರ್ಯಕರ್ತರನ್ನು ನೇಮಿಸಿ ಆಂದೋಲನ ನಡೆಸಲಿದೆ ಎಂದು ತಿಳಿಸಿದರು. ತುಂಗಭದ್ರ ಜಲಾಶಯದಲ್ಲಿ ಹೂಳು ತೆಗೆಯಬೇಕು ಇಲ್ಲ ಸಮಾನಾಂತರ ಜಲಾಶಯ ನಿರ್ಮಾಣ ಮಾಡಬೇಕು. ಜಲಾಶಯದಲ್ಲಿನ ಹೂಳು ತೆಗೆಯುವುದು ಅಸಾದ್ಯವೆಂಬುವುದು ಸರಿಯಾದ ಕ್ರಮವಲ್ಲ.
ಈ ಭಾಗದ ರೈತರು ಟ್ರ್ಯಾಕ್ಟರ್ಗಳಿಗೆ ಡಿಸೆಲ್ ಹಾಕಿ ಜೆಸಿಬಿಗಳಿಂದ ಹೂಳನ್ನು ತುಂಬಿಕೊಡಲಿ ಎಂದರು. ಸರ್ಕಾರ ಮತ್ತು ಜನಪ್ರತಿನಿದಿಗಳಿಗೆ ಇದರ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲ. ಜಲಾಶಯದ ಬಲದಂಡೆ ಕಾಲುವೆ ವ್ಯಾಪ್ತಿಯಲ್ಲಿ 94 ಇಂಜನೀಯರಿಂಗ್ ಉದ್ದೆಗಳು ಖಾಲಿ ಇವೆ. ಹೇಗೆ ಕಾರ್ಯನಿರ್ವಹಿಸಬೇಕೆಂದರು.
ಈ ಸಂದರ್ಭದಲ್ಲಿ ರೈತ ಮುಖಂಡರುಗಳಾದ ಸಂಘದ ಗೌರವಾಧ್ಯಕ್ಷ ವೀರಸಂಗಯ್ಯ, ಸಂಗನಕಲ್ಲು ಕೃಷ್ಣ, ಶೆಂಕರಣ್ಣ, ಗೋನಿ ಬಸಪ್ಪ, ಎಂ.ಎಲ್.ಕೆ.ನಾಯ್ಡೂ, ವಿಜಯಲಕ್ಷ್ಮಿ, ಅಂಬಣ್ಣ, ಮಂಜುನಾಥ, ಯರಿಸ್ವಾಮಿ, ಗಂಗಾ ದಾರವಾಡ್ಕರ್ ಸೇರಿದಂತೆ ಹಲವಾರು ರೈತ ಮುಖಂಡರುಗಳು ಭಾಗವಹಿಸಿದ್ದರು.