ಬಳ್ಳಾರಿ: ಲೋಕಸಭಾ ಫಲಿತಾಂಶ: ಬಿಜೆಪಿಯ ದೇವಿಂದ್ರಪ್ಪಗೆ 55707 ಮತಗಳ ಭರ್ಜರಿ ಗೆಲುವು

ಲೋಕದರ್ಶನ ವರದಿ

ಬಳ್ಳಾರಿ 23: ಬಳ್ಳಾರಿ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಗರದ ಆರ್ವೈಎಂಇಸಿ ಕಾಲೇಜಿನಲ್ಲಿ ಗುರುವಾರ ನಡೆಯಿತು. ಬಿಜೆಪಿ ಅಭ್ಯಥರ್ಿಯಾಗಿ ಸ್ಪಧರ್ಿಸಿದ್ದ ವೈ.ದೇವಿಂದ್ರಪ್ಪ ಅವರು 55707 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ  ವಿ.ಎಸ್.ಉಗ್ರಪ್ಪ ಅವರನ್ನು ಮಣಿಸಿದರು.

ಬಿಜೆಪಿ ಅಭ್ಯರ್ಥಿ  ವೈ.ದೇವಿಂದ್ರಪ್ಪ ಅವರು 614274 ಮತಗಳು ಹಾಗೂ 2114 ಅಂಚೆ ಮತಗಳು ಸೇರಿ 616388 ಮತಗಳು ಪಡೆದರೇ ಕಾಂಗ್ರೆಸ್ ಅಭ್ಯರ್ಥಿ  ವಿ.ಎಸ್.ಉಗ್ರಪ್ಪ ಅವರು 559970 ಮತಗಳು ಹಾಗೂ 711 ಅಂಚೆಮತಗಳು ಸೇರಿದಂತೆ ಒಟ್ಟು 560681 ಮತಗಳು ಪಡೆದರು. ಇವರನ್ನು ಹೊರತುಪಡಿಸಿ ಕಣದಲ್ಲಿದ್ದ ಕೆ.ಗೂಳಪ್ಪ ಅವರು 9961, ಬಿ.ಈಶ್ವರಪ್ಪ 6919, ಎ.ದೇವದಾಸ್-3833, ಎಸ್.ನವೀನಕುಮಾರ್-1402, ನಾಯಕರ ರಾಮಪ್ಪ-1840, ಬಿ.ರಘು-2658, ಪಿ.ಡಿ.ರಾಮಾನಾಯಕ್- 2722, ಟಿ.ವೀರೇಶ-3397, ಕಂಡಕ್ಟರ್ ಪಂಪಾಪತಿ- 3101 ಮತಗಳನ್ನು ಪಡೆದಿದ್ದಾರೆ.

9024 ಮತಗಳು ನೋಟಾ ದಾಖಲಾಗಿವೆ. ಅಭ್ಯಥರ್ಿಗಳು ಹಾಗೂ ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಮತ್ತು ಚುನಾವಣಾ ಆಯೋಗದಿಂದ ನಿಯೋಜಿತರಾದ ವೀಕ್ಷಕರ ಸಮ್ಮುಖದಲ್ಲಿ ಜಿಲ್ಲಾ ಚುನಾವಣಾಧಿಕಾರಿ ಡಾ.ರಾಮ್ ಪ್ರಸಾತ್ ಅವರು ಬೆಳಗ್ಗೆ 7.45ರಿಂದ 8ರವರೆಗೆ ಸ್ಟ್ರಾಂಗ್ ರೂಮ್ಗಳನ್ನು ಒಪನ್ ಮಾಡಿಸಿದರು. ಅಂಚೆಮತಗಳು ಎಣಿಕೆ ಮೊದಲಿಗೆ ಆರಂಭವಾಯಿತು. ಮಧ್ಯಾಹ್ನ 3.30ಕ್ಕೆ ವಿಜೇತ ಅಭ್ಯಥರ್ಿ ದೇವಿಂದ್ರಪ್ಪ ಅವರಿಗೆ ಪ್ರಮಾಣಪತ್ರವನ್ನು ಜಿಲ್ಲಾ ಚುನಾವಣಾಧಿಕಾರಿಗಳು ವಿತರಿಸಿದರು.