ಲೋಕದರ್ಶನ ವರದಿ
ಬಳ್ಳಾರಿ 17: ಭಾರತ ಕಂಡ ಮೇರು ಗಾಯಕರಲ್ಲಿ ಘಂಟಸಾಲ ವೆಂಕಟೇಶ್ವರರಾವ್ ಅವರು ಒಬ್ಬರಾಗಿದ್ದು, ಅವರು ಸಂಗೀತ ಕ್ಷೇತ್ರಕ್ಕೆ ನೀಡಿದ ಕಾಣಿಕೆ ಅನನ್ಯವಾಗಿದೆ. ಅವರು ತಮ್ಮ ಸುಮಧುರ ಕಂಠದಿಂದ ರಾಗಗಳಿಗೆ ದಾರಿಯನ್ನು ತೋರಿದ್ದು ಅವರ ಗಾಯನಕ್ಕೆ ಅವರೇ ಸಾಟಿಯಾಗಿದ್ದರು ಎಂದು ಹೈದರಾಬಾದಿನ ಘಂಟಸಾಲ ಗಾನಸಭಾ ಅಧ್ಯಕ್ಷರಾದ ಡಾ.ಕೆ.ವಿ.ರಾವ್ ನುಡಿದರು.
ಅವರು ಭಾನುವಾರದಂದು ಸಂಜೆ ಸ್ಥಳೀಯ ವಿದ್ಯಾನಗರದ ಅಭಯಾಂಜನೇಯ ಸ್ವಾಮಿ ಕಲಾವೇದಿಕೆ, ಘಂಟಸಾಲ ಗಾನಸಭಾ, ಜಿ.ಎಸ್.ಆರ್. ಎಜುಕೇಷನ್ ಟ್ರಸ್ಟ್ ಹಾಗೂ ತುಂಗಾ ಗಂಗಾ ಸಾಂಸ್ಕೃತಿಕ ಕಲಾ ಸಂಘ ಇವುಗಳ ಸಂಯುಕ್ತಾಶ್ರಯದಲ್ಲಿ ಘಂಟಸಾಲರವರ 97ನೇ ಜಯಂತಿ ಅಂಗವಾಗಿ ಏರ್ಪಡಿಸಿದ್ದ "ಘಂಟಸಾಲರವರ ಹಳೇ ಹಾಡುಗಳ ಗಾನಾಮೃತ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಘಂಟಸಾಲರವರ ಭಾವಚಿತ್ರಕ್ಕೆ ಕೇಂದ್ರ ಸೆನ್ಸಾರ್ ಮಂಡಳಿಯ ಸದಸ್ಯೆ ಹರಿಣಿ, ಹಾಗೂ ಮಾಜಿ ಮೇಯರ್ ರಮಣ, ಪ್ರೊ.ಜಿ.ಆರ್. ವೆಂಕಟೇಶಲು ಹಾಗೂ ವಿಷ್ಣುವರ್ಧನ್ ಪುಷ್ಪ ನಮನ ಅರ್ಪಿಸಿ ಗೌರವ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಘಂಟಸಾಲ ಕುಟುಂಬದ ಸದಸ್ಯರಾದ ಡಾ.ಶಾರದ, ಅಭಯಾಂಜನೇಯ ದೇವಸ್ಥಾನದ ಧರ್ಮಕರ್ತರಾದ ವೆಂಕಟಸ್ವಾಮಿ, ತುಂಗಗಂಗಾ ಕಲಾ ಸಂಘದ ಕಾರ್ಯದಶರ್ಿ ರಾಮಚಂದ್ರ, ಕುಮಾರಗೌಡ ಮುಂತಾದವರು ಹಾಜರಿದ್ದರು. ಆರಂಭದಲ್ಲಿ ನಾಗಭೂಷಣ ಪ್ರಾರ್ಥಿಸಿ ಕಾರ್ಯಕ್ರಮ ನಿರೂಪಿಸಿದರು.