ಬಳ್ಳಾರಿ: ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣಾ ವೇಳಾಪಟ್ಟಿ ಪ್ರಕಟ
Bellary: Election schedule for District Planning Committee members announced
ಬಳ್ಳಾರಿ 20: ಬಳ್ಳಾರಿ ಜಿಲ್ಲಾ ಯೋಜನಾ ಸಮಿತಿಗೆ ಪುರಸಭಾ ಕ್ಷೇತ್ರದಿಂದ ಚುನಾಯಿತ ಸದಸ್ಯರನ್ನು ಆಯ್ಕೆ ಮಾಡುವ ಸಂಬಂಧ ಚುನಾವಣಾ ವೇಳಾಪಟ್ಟಿ ಪ್ರಕಟಿಸಲಾಗಿದೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾರೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 310ರ ಪ್ರಕಾರ ಜಿಲ್ಲಾ ಯೋಜನಾ ಸಮಿತಿ ರಚಿಸಬೇಕಾಗಿದ್ದು, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಜಿಲ್ಲಾ ಯೋಜನಾ ಸಮಿತಿ ಸದಸ್ಯರುಗಳ ಚುನಾವಣೆ) ನಿಯಮಗಳು 1996ರ 8ರ ನಿಯಮದ ಪ್ರಕಾರ ಬಳ್ಳಾರಿ ಜಿಲ್ಲಾ ಯೋಜನಾ ಸಮಿತಿಗೆ ಪುರಸಭಾ ಮತಕ್ಷೇತ್ರಗಳಿಂದ ಪ್ರತ್ಯೇಕವಾಗಿ ಸದಸ್ಯರ ಆಯ್ಕೆ ಕುರಿತು ಚುನಾವಣೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
*ಚುನಾವಣಾ ವೇಳಾಪಟ್ಟಿ:*
ಪುರಸಭಾ ಕ್ಷೇತ್ರದಿಂದ ಚುನಾಯಿಸಬೇಕಾದ ಸದಸ್ಯರುಗಳ ಸಂಖ್ಯೆ: ಪುರಸಭಾ ಕ್ಷೇತ್ರದಿಂದ - 23 ಸದಸ್ಯರು (ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಮಹಾನಗರ ಪಾಲಿಕೆ ಚುನಾಯಿತ ಸದಸ್ಯರುಗಳು).
ನಾಮಪತ್ರ ಸ್ವೀಕರಿಸುವ ದಿನಾಂಕ, ಸಮಯ ಮತ್ತು ಸ್ಥಳ(ಸಾರ್ವಜನಿಕ ರಜಾದಿನ ಹೊರತುಪಡಿಸಿ): ಡಿ.22 ರಿಂದ 31 ರ ಬೆಳಿಗ್ಗೆ 11 ರಿಂದ ಮಧ್ಯಾಹ್ನ 03 ಗಂಟೆಯವರೆಗೆ, ಸ್ಥಳ: ಜಿಲ್ಲಾ ಪಂಚಾಯತ್ ನ ಪಿಎಇಒ ಕೊಠಡಿ ಯೋಜನಾ ಶಾಖೆ. ನಾಮಪತ್ರ ಪರೀಶೀಲಿಸುವ ದಿನಾಂಕ, ದಿನ, ಸಮಯ ಮತ್ತು ಸ್ಥಳ: 2026 ರ ಜನವರಿ 02 (ಶುಕ್ರವಾರ) ಬೆಳಿಗ್ಗೆ 11 ಗಂಟೆಗೆ, ಸ್ಥಳ: ಜಿಲ್ಲಾ ಪಂಚಾಯತ್ ನ ಪಿಎಇಒ ಕೊಠಡಿ ಯೋಜನಾ ಶಾಖೆ.
ನಾಮಪತ್ರ ಹಿಂಪಡೆಯುವ ಕೊನೆ ದಿನಾಂಕ, ದಿನ ಮತ್ತು ಸಮಯ: 2026 ರ ಜನವರಿ 05 (ಸೋಮವಾರ) ಮಧ್ಯಾಹ್ನ 03 ಗಂಟೆಯವರೆಗೆ, ಸ್ಥಳ: ಜಿಲ್ಲಾ ಪಂಚಾಯತ್ ನ ಪಿಎಇಒ ಕೊಠಡಿ ಯೋಜನಾ ಶಾಖೆ.
ಮತದಾನ ಅಗತ್ಯವಾದಲ್ಲಿ ಮತದಾನ ನಡೆಸಬೇಕಾದ ದಿನಾಂಕ, ದಿನ, ಸಮಯ ಮತ್ತು ಸ್ಥಳ: 2026 ರ ಜನವರಿ 12(ಸೋಮವಾರ) ಬೆಳಿಗ್ಗೆ 09 ರಿಂದ ಸಂಜೆ 04 ರ ವರೆಗೆ, ಸ್ಥಳ: ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣ. ಮತ ಎಣಿಕೆ ದಿನಾಂಕ, ಸಮಯ ಮತ್ತು ಸ್ಥಳ: 2026 ರ ಜನವರಿ 12(ಸೋಮವಾರ) ಸಂಜೆ 05 ಗಂಟೆಗೆ, ಸ್ಥಳ: ಜಿಲ್ಲಾ ಪಂಚಾಯತ್ ನಜೀರ್ ಸಭಾಂಗಣ.
2026 ರ ಜನವರಿ 13 (ಮಂಗಳವಾರ) ಸಂಜೆ 05 ಗಂಟೆಗೆ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರು ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 