ಬಳ್ಳಾರಿ: ಜಿಲ್ಲಾ ವಿತರಕರ ಸಂಘದಿಂದ 5ನೇ ವಾರ್ಷಿಕೋತ್ಸವ

ಲೋಕದರ್ಶನ ವರದಿ

ಬಳ್ಳಾರಿ 08: ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿರುವ ರಾಘವಕಲಾಮಂದಿರದಲ್ಲಿ ಭಾನುವಾರ ಬೆಳಿಗ್ಗೆ 10:30ಕ್ಕೆ ಜಿಲ್ಲಾ ವಿತರಕರ ಸಂಘದಿಂದ 5ನೇ ವಾರ್ಶಿಕೋತ್ಸವ  ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಕಿಶೋರಬಾಬು ತಿಳಿಸಿದರು. 

ಈ ಕುರಿತು ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ದೇಶದಲ್ಲಿ ಇಂದು ಜಾಗತಿಕರಣದಿಂದಾಗಿ ಅಂತರಾಷ್ಟ್ರೀಯ ಕಂಪನಿಗಳ ಮಾರಾಟ ವ್ಯೆವೆಸ್ಥೆಯಿಂದ ಮಾರಾಟ ವ್ಯೆವೆಸ್ಥೆಯಲ್ಲಿ ಸ್ಪರ್ಧೆ  ಹೆಚ್ಚಿದೆ. ಇದರಿಂದಾಗಿ ಉತ್ಪಾದಕರು ನೇರವಾಗಿ ಗ್ರಹಕರಿಗೆ ಕಡಿಮೆ ಬೆಲೆಗೆ ನೀಡಿದರೆ ನಮ್ಮದೇನು ಅಭ್ಯಾಂತರವಿಲ್ಲ. ಆದರೆ ಮತ್ತೊಬ್ಬ ಬೃಹತ್ ಮಾರಾಟ ಮಾಡುವ ವ್ಯೆಕ್ತಿಗೆ ಕಡಿಮೆ ದರದಲ್ಲಿ ತೀರಾ ಕಡಿಮೆಗೆ ತಾರತಮ್ಯ ಮಾಡಿ ವಿತರಕರಿಗೆ ಹಲವಾರು ಕಂಪನಿಗಳು ಟಾಗರ್ೆಟ್ನ್ನು ಕೊಟ್ಟು ವ್ಯಾಪಾರ ಮಾಡಲು ತಿಳಿಸುತ್ತಾರೆ ಆದರೆ ಬೃಹತ್ ಮಳಿಗೆಗಳಲ್ಲಿ, ಶ್ಯಾಪಿಂಗ್ ಮಾಲ್ಗಳಲ್ಲಿ ಅದೇ ವಸ್ತು ಕಡಿಮೆ ದರದಲ್ಲಿ ಮಾರುವುದರಿಂದ ನಮಗೆ ಸಾಕಷ್ಟು ನಷ್ಟ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಹೋರಾಟ ಮಾಡಲು ಸಂಘ ರಚಿಸಿಕೊಂಡಿದೆ. 

ವಾರ್ಶಿಕೋತ್ಸವ  ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ದೈರ್ಯಶೀಲ್ ಪಾಟಿಲ್,  ಆರ್.ಜಯಂತ್ ಗಾಣಿಗ (ರಾಜ್ಯಾಧ್ಯಕ್ಷ) ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ರಮೇಶ ಗೋಪಾಲ, ಹುಬ್ಬಳ್ಳಿಯ ಗಿರೀಶ್ ಸುಂಕದ, ಇವರುಗಳು ಈವಾರ್ಷಿಕೋತ್ಸವದಲ್ಲಿ  ಇದರ ಬಗ್ಗೆ ಚರ್ಚಿಸಿ  ಸ್ಪಷ್ಟ ನಿಧರ್ಾರವನ್ನು ಕೈಗೊಂಡು ದೇಶಾದ್ಯಂತ ಇರುವ ವಿತರಕರ ಸಂಘಕ್ಕೆ ಮಾಹಿತಿಯನ್ನು ನೀಡಿ ಮುಂದಿನ ದಿನದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಇನ್ನು ಹೆಚ್ಚಿನ ಒತ್ತಡವನ್ನು ಹೇರಿ ಬೃಹತ್ ಹೋರಾಟವನ್ನು ನಿಮರ್ಿಸಲು ಬಳ್ಳಾರಿಯಿಂದಲೇ ಪ್ರಾರಂಭಿಸಬೇಕೆಂಬ ಸಂಕಲ್ಪದೊಂದಿಗೆ ಈ ಭಾರಿ 5ನೇ ವಾರ್ಷಿಕೋತ್ಸವದಲ್ಲಿ ಹಲವಾರು ನಿರ್ಣಯಗಳನ್ನು ಕೈಗೊಳ್ಳಲಾಗುತ್ತದೆ ಎಂದರು. ಸುದ್ದಿಗೋಷ್ಟಿಯಲ್ಲಿ ಉಪಾಧ್ಯಕ್ಷ ಮರಿಗೌಡ ಪಾಟಿಲ್, ಜಂಟಿ ಕಾರ್ಯದರ್ಶಿ ಎನ್.ಗುರುಪ್ರಸಾದ್, ಜಿ.ಗೀರಿರಾಜ್, ಸಂತೋಷ ಕುಮಾರ, ಸೇರಿದಂತೆ ನೂರಾರು ವಿತರಕರು ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದರು.