ಬಳ್ಳಾರಿ: ವಾಲ್ಮೀಕಿ ಜಯಂತೋತ್ಸವ ಪುತ್ಥಳಿ ಅನಾವರಣ ಕಾರ್ಯಕ್ರಮ ರಾಮಾಯಣ ಗ್ರಂಥ ಕೊಟ್ಟ ಮಹಾನ್ ಜ್ಞಾನಿ ವಾಲ್ಮೀಕಿ

ಲೋಕದರ್ಶನ ವರದಿ

ಬಳ್ಳಾರಿ 13: ವಿಶ್ವಕ್ಕೆ ರಾಮಾಯಣ ಎಂಬ ಮಹಾನ್ ಗ್ರಂಥವನ್ನು ಕೊಟ್ಟ ಶ್ರೇಯಸ್ಸು ಮಹಾನ್ ಜ್ಙಾನಿ ಶ್ರೀ ಮಹರ್ಷಿ  ವಾಲ್ಮೀಕಿಗೆ ಸಲ್ಲುತ್ತದೆ ಎಂದು ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಹಾಗೂ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಷರ್ಿ ವಾಲ್ಮೀಕಿಯವರ ವಾಲ್ಮೀಕಿ ರಾಮಾಯಣದ ಮೂಲಕ ಜೀವನದ ಮಾರ್ಗದರ್ಶನವನ್ನು ಮಾಡಿದ್ದಾರೆ. ಇದರ ಇದರ ಫಲವಾಗಿ ಇಡೀ ವಿಶ್ವವೇ ವಾಲ್ಮೀಕಿ ರಾಮಾಯಣದ ಗ್ರಂಥವನ್ನು ಅನುಸರಿಸುತ್ತಿದೆ ಎಂದರು.

2005ರಲ್ಲಿ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಅವರ ಜಿಲ್ಲಾ ವಾಲ್ಮೀಕಿ ಭವನಕ್ಕೆ ನಿಮರ್ಾಣಕ್ಕೆ ಎಂಟು ಕೋಟಿ ರೂ.ಗಳು ಅನುದಾನ ತಂದಿದ್ದು, ಯಡಿಯೂರಪ್ಪ ಅವರು ಸಿಎಂ ಆದ ನಂತರ ನಿರ್ಮಾಣ ಕೈಗೊಳ್ಳಲಾಗಿತ್ತು ಎಂದು ಅವರು ಸ್ಮರಿಸಿದರು.

ಚುನಾವಣೆ ಘೋಷಣೆ ನಂತರ ಶ್ರೀರಾಮುಲು ಅವರು ಡಿಸಿಎಂ ಆಗಲಿದ್ದಾರೆ ಎಂಬ ಆಶಭಾವನೆ ಈ ಭಾಗದ ಜನರಲ್ಲಿ ವ್ಯಕ್ತವಾಗಿತ್ತು, ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ, ಮುಂದಿನ ದಿನಗಳಲ್ಲಿ ಶ್ರೀರಾಮುಲು ಡಿಸಿಎಂ ಆಗ್ತಾರೆ ಎಂಬ ಭರವಸೆಯನ್ನು ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಇದಕ್ಕೂ ಮುನ್ನ ಜಿಲ್ಲಾ ವಾಲ್ಮೀಕಿ ಭವನದ ಮುಂಭಾಗದ ನಿಮರ್ಿಸಲಾಗಿರುವ ಶ್ರೀಮಹರ್ಷ  ವಾಲ್ಮೀಕಿ ಪುತ್ಥಳಿಯನ್ನು ಅನಾವರಣಗೊಳಿಸಲಾಯಿತು. 

ಡಾ.ಜೆ.ಕರಿಯಪ್ಪ ಮಾಳಿಗೆ ಅವರು ಶ್ರೀ ಮಹರ್ಷಿ  ವಾಲ್ಮೀಕಿ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಾಲ್ಮೀಕಿ ಸಮುದಾಯದ ವಿದ್ಯಾಥರ್ಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ, ಜಿಲ್ಲಾ ಪರಿಶಿಷ್ಟ ವರ್ಗ ಕಲ್ಯಾಣಾಧಿಕಾರಿ ಪಿ.ಶುಭ, ಸಹಾಯಕ ಅಯುಕ್ತರಾದ ರಮೇಶ್ ಪಿ.ಕೋನರೆಡ್ಡಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಾಲ್ಮೀಕಿ ಸಮುದಾಯದ ಮುಖಂಡರು ಇದ್ದರು.