ಬಳ್ಳಾರಿ: 'ಲೈಂಗಿಕತೆ ಕುರಿತು ಯುವಕರಿಗೆ ಅರಿವು ಅಗತ್ಯ'

ಲೋಕದರ್ಶನ ವರದಿ

ಬಳ್ಳಾರಿ 27: ಲೈಂಗಿಕತೆ ಎಂಬುದು ಒಂದು ಸಹಜ ಕ್ರಿಯೆ ಅದರ ಬಗ್ಗೆ ಯುವಜನತೆಯಲ್ಲಿ ಹೆಚ್ಚಿನ ಅರಿವನ್ನು ಮೂಡಿಸುವ ಅಗತ್ಯವಿದೆ ಎಂದು ವಿಶ್ರೀಕೃವಿವಿ ಕುಲಸಚಿವರಾದ ಪ್ರೊ. ಬಿ.ಕೆ ತುಳಸಿಮಾಲ ಹೇಳಿದರು. 

ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ಫ್ಯಾಮಿಲಿ ಪ್ಲಾನಿಂಗ್ ಅಸೋಷಿಯೇಶನ್ ಆಫ್ ಇಂಡಿಯಾ (ಭಾರತ ಕುಟುಂಬ ಯೋಜನೆ ಸಂಘ) ಸಹಭಾಗಿತ್ವದಲ್ಲಿ ಗುರುವಾರ ಎಸ್.ಆರ್.ಎಚ್ ಯೂಥ್ ಕೌನ್ಸಲಿಂಗ್ ಸೆಂಟರ್ (ಲೈಂಗಿಕ ಮತ್ತು ಸಂತಾನೋತ್ಪತ್ತಿ ಸಮಾಲೋಚನೆ ಕೇಂದ್ರ) ಉದ್ಘಾಟಿಸಿ ಅವರು ಮಾತನಾಡಿದರು

ಸಮಾಲೋಚಕರು ಯುವಕರ ಪ್ರಸ್ತುತ ಆರೋಗ್ಯ ಸ್ಥಿತಿಯ ಮಾಹಿತಿ ಪಡೆದು. ಅವರಿಗೆ ನೀಡಬೇಕಾದ ವೈದ್ಯಕೀಯ ಸೇವೆಗಳ ಕುರಿತಾಗಿ ನಿಧರ್ಾರ ತೆಗೆದುಕೊಳ್ಳುವುದರಿಂದ ಯುವಕರ ಜೀವನಮಟ್ಟ ಸುಧಾರಿಸಲು ಸಾಧ್ಯ ಎಂದರು.

ಸಂಘದ ಅಧ್ಯಕ್ಷರಾದ ಎಸ್. ವಿಜಯಸಿಂಹ ಮಾತನಾಡಿ, ಶೈಕ್ಷಣಿಕ ಕೇಂದ್ರಗಳು ಯುವಜನತೆಗೆ ಲೈಂಗಿಕ ಶಿಕ್ಷಣದ ಮಹತ್ವವನ್ನು ತಿಳಿಸಿಕೊಡಲು ಪ್ರತಿ ಸಂಸ್ಥೆಯೂ ಈ ಮಾದರಿ ಕೇಂದ್ರಗಳನ್ನು ಸ್ಥಾಪಿಸುವುದು ಅವಶ್ಯಕ ಎಂದರು. ವಿದ್ಯಾಥರ್ಿಗಳ ಪಾಲ್ಗೊಳ್ಳುವಿಕೆ ಜೊತೆಗೆ ಪಾಲಕರಿಗೆ ಕುಟುಂಬ ಯೋಜನೆ ಬಗ್ಗೆ ತಿಳುವಳಿಕೆ ಕೊಡುವುದು ಸೂಕ್ತ ಎಂದು ಸಲಹೆ ನೀಡಿದರು. 

ಕಾರ್ಯಕ್ರಮದಲ್ಲಿ ಸಂಘದ ಕಾರ್ಯದಶರ್ಿ ವಿಠ್ಠಲ್, ವಿವಿಯ ವಿದ್ಯಾಥರ್ಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಜಿ ಪಿ ದಿನೇಶ್, ಸಂಘದ ಬಳ್ಳಾರಿ ವಲಯದ ಸದಸ್ಯರು ಹಾಗೂ ಸಿಬ್ಬಂದಿ, ವಿವಿಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾಥರ್ಿಗಳು ಹಾಜರಿದ್ದರು.