ಬೆಳಗಾವಿ-ಮೀರಜ್ ಏಕ್ಸ್‌ಪ್ರಸ್ ರೈಲು, ಪ್ಯಾಸೆಂಜರಾಗಿ ಬದಲಾವಣೆ: ಈರಣ್ಣ ಕಡಾಡಿ
Belgaum-Miraj Express train, converted into passenger: Iranna Kadadi
ಬೆಳಗಾವಿ-ಮೀರಜ್ ಏಕ್ಸ್‌ಪ್ರಸ್ ರೈಲು, ಪ್ಯಾಸೆಂಜರಾಗಿ ಬದಲಾವಣೆ: ಈರಣ್ಣ ಕಡಾಡಿ
ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಮೀರಜ್ ನಡುವೆ ಪ್ರತಿದಿನ ಸಂಚರಿಸುತ್ತಿದ ವಿಶೇಷ ಏಕ್ಸ್‌ಪ್ರಸ್ ಪ್ಯಾಸೆಂಜರ್ ರೈಲನ್ನು ಪ್ಯಾಸೆಂಜರ್ ರೈಲಾಗಿ ಬದಲಾವಣೆ ಮಾಡಿ ಕೇಂದ್ರ ರೈಲ್ವೆ ಮಂಡಳಿ ಆದೇಶಿಸಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಗುರುವಾರ ಅ-09 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಕರೋನಾ ಸಂದರ್ಭದಲ್ಲಿ ಬೆಳಗಾವಿ ಮಿರಜ್ ಪ್ಯಾಸೆಂಜರ್ ರೈಲು ಸಂಚಾರವನ್ನು ನಿಲ್ಲಿಸಲಾಗಿತ್ತು. ಸತತ ನನ್ನ ಪ್ರಯತ್ನ ಫಲವಾಗಿ ಕಳೆದ ಎರಡು ವರ್ಷದಿಂದ ವಿಶೇಷ ಏಕ್ಸ್‌ಪ್ರಸ್ ಪ್ಯಾಸೆಂಜರ್ ರೈಲು ಸಂಚರಿಸುತ್ತಿದೆ. ಈಗ ಪ್ರತಿದಿನ ಪ್ಯಾಸೆಂಜರ್ ರೈಲಾಗಿ ಸಂಚರಿಸಲಿದೆ ಇದರಿಂದ ಟಿಕೆಟ್ ಬೆಲೆ ಕಡಿತಗೊಂಡು, ಉದ್ಯೋಗಿಗಳು, ಕಾರ್ಮಿಕರು, ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗಾಗಿ ಬರುವವರಿಗೆ ಅನುಕೂಲಕರವಾಗಲಿದೆ ಎಂದರು.ರೈಲಿನ ಸಮಯ ಮುಂಜಾನೆ 05.45 ಕ್ಕೆ ಬೆಳಗಾವಿಯಿಂದ ಹೊರಟು ಮುಂಜಾನೆ 09.00 ಗಂಟೆಗೆ ಮಿರಜ್ ತಲುಪಲಿದೆ. ಮಿರಜ್ ನಿಂದ ಮು 09.55 ಕ್ಕೆ ಹೊರಟು ಮಧ್ಯಾಹ್ನ 01.00 ಗಂಟೆಗೆ ಬೆಳಗಾವಿಗೆ ತಲುಪಲಿದೆ ಮತ್ತು ಮಧ್ಯಾಹ್ನ 01.30 ಕ್ಕೆ ಬೆಳಗಾವಿಯಿಂದ ಹೊರಟು ಸಂಜೆ 04.30 ಗಂಟೆಗೆ ಮಿರಜ್ ತಲುಪಲಿದೆ. ಮಿರಜ್ ನಿಂದ ರಾತ್ರಿ 07.10 ಕ್ಕೆ ಹೊರಟು ರಾತ್ರಿ 10.25 ಗಂಟೆಗೆ ಬೆಳಗಾವಿಗೆ ತಲುಪಲಿದೆ. ಪ್ರತಿಧಿನ ಎರಡು ಟ್ರಿಪ್ ಸಂಚರಿಸಲಿದೆ ಎಂದರು.
ನನ್ನ ಮನವಿಗೆ ಸ್ಪಂದಿಸಿ, ಬೆಳಗಾವಿ-ಮೀರಜ್ ಪ್ಯಾಸೆಂಜರ್ ರೈಲಾಗಿ ಆದೇಶ ನೀಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಹಾಗೂ ನೈರುತ್ಯ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಈ ಭಾಗದ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಗುವುದು ಎಂದು ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 