ಗುಳೇದಗುಡ್ಡ: ಪಟ್ಟಣದ ನಗರಖಾನ ಪೇಟೆಯಲ್ಲಿನ ಶ್ರೀಶಿವಪ್ಪಯ್ಯ ಹಾಗೂ ಸಂಗಪ್ಪಯ್ಯನ ಮಠದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ 63 ಶರಣರ ಕುರಿತು ಪುರಾಣ ಪ್ರವಚನ ಕಾರ್ಯಕ್ರಮ ಆರಂಭವಾಯಿತು.
ಮಠಾಧೀಪತಿಗಳಾದ ವೇದಮೂತರ್ಿ ಶಿವಮೂರ್ತಯ್ಯನವರು ಶಿವಪ್ಪಯ್ಯನಮಠ ಅವರ ನೇತೃತ್ವದಲ್ಲಿ ಈ ಪ್ರವಚನ ಕಾರ್ಯಕ್ರಮ ನಡೆಯುತ್ತಿದ್ದು, ದಾನಮ್ಮ ದಾನಪ್ಪ ಹತರ್ಿ ಅವರು ಪ್ರವಚನ ನಡೆಸಿಕೊಡುತ್ತಿದ್ದಾರೆ.
ಮರಡಿಮಠದ ಶ್ರೀಕಾಡಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮಠದ ಅಣ್ಣಯ್ಯನವರು ಶಿವಪ್ಪಯ್ಯನಮಠ, ಶಿವಪೂರ್ತಯ್ಯನವರು ಶಿವಪ್ಪಯ್ಯನಮಠ, ಕೆಳದಿಯ ಮಹೇಶ್ವರ ಶ್ರೀಗಳು, ಈರಣ್ಣ ಅಲದಿ ಶಾಸ್ತ್ರೀಗಳು, ಶರಣಪ್ಪ ದಿಂಡಿ, ಶೇಖರಪ್ಪ ಅರುಟಗಿ, ಸದಾಶಿವಪ್ಪ ಮುರಿಗೆಪ್ಪ ಶೀಪ್ರಿ, ದಾನಪ್ಪ ರಾಜನಾಳ ಮತ್ತಿತರರು ಉಪಸ್ಥಿತರಿಇದ್ದರು.
ಈರಣ್ಣ ಶಾಸ್ತ್ರೀಗಳ ಪ್ರವಚನ ಕಾರ್ಯಕ್ರಮಕ್ಕೆ ಶರಣಪ್ಪ ದಿಂಡಿ ಅವರು ಹಾಮರ್ೋನಿಯಂ, ಬಸವರಾಜ ದಿಂಡಿ ಅವರು ತಬಲಾ ಸಾಥ್ ನೀಡಿದರು.