ಬೆಳಗಾವಿ - ಕನ್ನಡ ಸಾಹಿತ್ಯದ ಶ್ರೇಷ್ಠ ಸಾಹಿತಿ ಎನ್ನಿಸಿಕೊಂಡಿರುವ ಬೀಚಿಯವರು ಇಂಗ್ಲೀಷ ಸಾಹಿತ್ಯವನ್ನು ಅತ್ಯಂತ ಮೆಚ್ಚಿಕೊಂಡವರು. ಕನ್ನಡ ಭಾಷಾಧ್ವೇಷಿಗಳಾಗಿದ್ದರು. ಕನ್ನಡ ಸಾಹತ್ಯ ವನ್ನೋದುವುದು ಸಮಾಜದಲ್ಲಿ ಘನತೆಗೆ ಕುಂದು ತರುವಂತಹದ್ದು. ಇಂಗ್ಲೀಷ ಬಾರದವ ಮಾತ್ರ ಕನ್ನಡ ಸಾಹಿತ್ಯವನ್ನೋದುತ್ತಾನೆ ಎಂಬ ಭಾವನೆಯುಳ್ಳವರಾಗದ್ದರು. ಬೀಚಿಯವರ ಮಡದಿ ಸೀತಾಳ ಒತ್ತಾಯದ ಕನ್ನಡದ ಓದು ಇವರ ಜೀವನದಲ್ಲಿ ಹೊಸ ತಿರುವನ್ನು ತಂದು ಕೊಟ್ಟಿತು. ಕಾದಂಬರಿಕಾರ ಅ.ನ.ಕೃ. ಅವರ ಸಂದ್ಯಾರಾಗ ಕೃತಿ ಬೀಚಿಯವರಿಗೆ ಕನ್ನಡ ಸಾಹಿತ್ಯ ದೀಕ್ಷೆಯನ್ನು ನೀಡಿತು. ಬೀಚಿಯವರು ಹಾಸ್ಯ ಸಾಹಿತ್ಯಕ್ಕೊಂದು ಹೊಸ ಆಯಾಮ ಕೊಟ್ಟವರು ಎಂದು ಲೇಖಕ, ಕೆ.ಪಿ.ಸಿ. ನಿವೃತ್ತ ಅಧಿಕಾರಿ ಸುರೇಶ ಹೆಗಡೆಯವರು ಇಂದಿಲ್ಲಿ ಹೇಳಿದರು.
ನಗರದ ಹಾಸ್ಯಕೂಟ ಹಾಗೂ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 14 ಶನಿವಾರ ಸಾಯಂಕಾಲ 4-30 ಕ್ಕೆ ಚೆನ್ನಮ್ಮ ವೃತ್ತದ ಬಳಿಯಿರುವ ಕನ್ನಡ ಸಾಹಿತ್ಯ ಭವನ ಸಭಾಭವನದಲ್ಲಿ "ಬೀಚಿ ಸ್ಮರಣೆ" ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಕಾರ್ಯಕ್ರಮದಲ್ಲಿ "ಬೀಚಿ ಬದುಕು ಬರಹ" ಕುರಿತು ಮಾತನಾಡುತ್ತ ಸುರೇಶ ಹೇಗಡೆಯವರು ಮೇಲಿನಂತೆ ಅಭಿಪ್ರಾಯ ಪಟ್ಟರು. ಮುಂದೆ ಮಾತನಾಡುತ್ತ ಅವರು ಕಷ್ಟಗಳ ಜೋಳಿಗೆಯನ್ನೇ ಬಗಲಿಗೆ ಹಾಕಿಕೊಂಡು ಬಾಳಿ ಬದುಕಿದ ಬೀಚಿಯವರು ನಗೆಯನ್ನೇ ಜೀವನದುಸಿರನ್ನಾಗಿ ಮಾಡಿಕೊಂಡಿದ್ದರು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ.ಎಂ. ಎಸ್. ಇಂಚಲ ಬಳ್ಳಾರಿ ಎಂದೊಡನೆ ಬೀಚಿ ನೆನಪಾಗುತ್ತಾರೆ. ನಾಟಕ, ನಗೆಬರಹ, ಹಾಸ್ಯ ಕಾದಂಬರಿ, ಪ್ರಶ್ನೋತ್ತರ ಹೀಗೆ ವೈವಿದ್ಯಮಯ ಸಾಹಿತ್ಯವನ್ನು ನೀಡಿದ ಶ್ರೇಯಸ್ಸು ಬೀಚಿಯವರದ್ದು ಎಂದು ಹೇಳಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಗುಂಡೇನಟ್ಟಿ ಮಧುಕರ ಕಾದರಂಬರಿಗಳನ್ನು ಬರೆಯುವುದೇ ಕಷ್ಟದ ಕೆಲಸ ಅದರಲ್ಲಿಯೂ ಹಾಸ್ಯ ಕಾದಂಬರಿಯನ್ನು ಬರೆಯುವುದು ಅತ್ಯಂತ ಕಷ್ಟ ಕೆಲಸ. ಆದರೆ ಬೀಚಿಯವರಿಗೆ ಹಾಸ್ಯ ಕಾದಂಬರಿಗಳನ್ನು ಬರೆಯುವುದು ಕರಗತವಾತ್ತು. ಸುಮಾರು ಮುವತ್ತಕ್ಕೂ ಹೆಚ್ಚು ಹಾಸ್ಯ ಕಾದಂಬರಿಗಳನ್ನು ನೀಡಿದ್ದಾರೆ. ನನ್ನನ್ನು ಮತ್ತೆ ಮತ್ತೆ ಓದುವಂತೆ ಮಾಡಿದ ಕೃತಿ ಬೀಚಿಯವರ 'ನನ್ನ ಭಯಾಗ್ರಫಿ. ಎಂದು ಹೇಳಿ ನನ್ನ ಭಯಾಗ್ರಫಿ ಕೃತಿಯಲ್ಲಿ ಬರುವ ಕೆಲ ಪ್ರಸಂಗಗಳನ್ನು ಹಂಚಿಕೊಂಡರು.
ಅರವಿಂದ ಹುನಗುಂದ ಅವರು ಮಾತನಾಡಿ ಬೀಚಿಯವರ ಮಾತೇ ಒಂದು ಸೊಗಸು. ಅಲ್ಲದೇ ಅವರ ಪ್ರತಿಯೊಂದು ಕೃತಿಯಲ್ಲಿಯೂ ಹಾಸ್ಯಧಾರೆ ಹರಿಯುತ್ತಿತ್ತು. ಹಾಸ್ಯದೊಂದಿಗೆ ಸಮಾಜಕ್ಕೊಂದು ಸಂದೇಶವೂ ಇರುತ್ತಿತ್ತು. ಎಂದು ಹೇಳಿದ ಅವರು 'ಕ್ಯಾಬರೆ ನೃತ್ಯ ಹಾಗೂ ಭರತ ನಾಟ್ಯ ಇವುಗಳಲ್ಲಿ ಯಾವುದು ಕಷ್ಟದ ಕೆಲಸವೆಂದು ಕೇಳಿದ ಪ್ರಶ್ನೆಗೆ ಬೀಚಿಯವರು 'ಭರತ ನಾಟ್ಯ ಕಲಿಯುವುದು ಕಷ್ಟ. ಕ್ಯಾಬರೆ ಮರೆಯುವುದು ಕಷ್ಟ' ಎಂದು ಉತ್ತರ ನೀಡಿದುದನ್ನು ಹಂಚಿಕೊಂಡು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.
ನಗೆ ಬರೆಹಗಾರ ಜಯಪ್ರಕಾಶ ಅಬ್ಬಿಗೇರಿ ಹಾಗೂ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರೊ. ಗುರುರಾಜ ಗೋಕಾಕ ಬೀಚಿಯವರ ಸಾಹಿತ್ಯ ದಲ್ಲಿಯ ನಗೆಪ್ರಸಂಗಗಳನ್ನು ಹಂಚಿಕೊಂಡು ಜನರನ್ನು ರಂಜಿಸಿದರು. ಪ್ರಾಯೋಜಕತ್ವವನ್ನ ಸೆಂಟ್ರಲ್ ವೇಯರ ಹೌಸಿಂಗ್ ಕಾಪರ್ೋರೇಶನ್ ದಲ್ಲಿ ವ್ಯವಸ್ಥಾಪಕರೆಂದು ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕೆ.ವಿ ಮುಳಗುಂದ ಅವರು ವಹಿಸಿಕೊಂಡಿದ್ದರು. ಜಿ.ಎಸ್. ಸೋನಾರ ನಿರೂಪಿಸಿದರು.
ಡಾ. ಸಿದ್ದನಗೌಡ ಪಾಟೀಲ, ಎಸ್. ಎಂ. ಕುಲಕಣರ್ಿ, ಆರ್.ಬಿ. ಕಟ್ಟಿ, ಮೋಹನ ಗುಂಡ್ಲೂರ, ಯ.ರು. ಪಾಟೀಲ, ಮದನ ಕಣಬೂರ, ಅಶೋಕ ಮಳಗಲಿ, ಎಂ. ಬಿ. ಹೊಸಳ್ಳಿ, ಪಿ.ವಿ. ಪಾಟೀಲ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾಥರ್ಿಗಳ ಅಭಿವೃದ್ಧಿಗೆ ಸ್ಪಧರ್ಾತ್ಮಕ ಉತ್ಸವಗಳು ಅಗತ್ಯ
ಬೆಳಗಾವಿ.ಡಿ.15: ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾಥರ್ಿಗಳಿಗೆ ವ್ಯವಸ್ಥಾಪನ ಮೇಳದ ಮೂಲಕ ಸ್ಪಧರ್ಾತ್ಮಕ ಉತ್ಸವಗಳನ್ನು ಏರ್ಪಡಿಸುವ ಮೂಲಕ ವಿದ್ಯಾಥರ್ಿಗಳ ಅಭಿವೃದ್ದಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ನಿರ್ವಹಣಾ ವಿಭಾಗದ ಅಧ್ಯಕ್ಷ ಡಾ.ಸಿ.ಎಂ.ತ್ಯಾಗರಾಜ ಅವರು ಹೇಳಿದರು.
ಇತ್ತಿಚಿಗೆ ಬೆಳಗಾವಿಯ ಪೀಪಲ್ಟ್ರೀ ಎಜ್ಯುಕೇಶನ ಸೊಸೈಟಿಯ ಪೀಪಲ್ಟ್ರೀ ಬಿಬಿಎ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾದ ಎರಡು ದಿನಗಳ "ಸಾರಥಾನ-19" ವ್ಯವಸ್ಥಾಪನ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ಎಲ್ಲ ಕ್ಷೇತ್ರದಲ್ಲಿ ವ್ಯವಹಾರಿಕ ಸ್ಪಧರ್ೆಗಳು ನಡೆಯುತ್ತಿವೆ. ಈ ವ್ಯವಹಾರಿಕ ಸ್ಪಧರ್ೆಗಳು ಅತೀ ಸೂಕ್ಷ್ಮವಾಗಿವೆ. ಈ ಸ್ಪಧರ್ೆಗಳನ್ನು ಎದುರಿಸಲು ಮನೋಧೈರ್ಯ ಅಗತ್ಯವಾಗಿದೆ.ಮಹಾವಿದ್ಯಾಲಯಗಳು ವ್ಯವಸ್ಥಾಪನ ಮೇಳದ ಮುಖಾಂತರ ಸ್ಫಧರ್ಾತ್ಮಕ ಚಟುವಟಿಕೆಗಳನ್ನು ನಡೆಸುವುದರಿಂದ ವಿದ್ಯಾಥರ್ಿಗಳಲ್ಲಿ ಆತ್ಮಸ್ಥೈರ್ಯ ಜೊತೆಗೆ ಮನೋಬಲ ಹೆಚ್ಚಿಸುವಂತಹ ಕಾರ್ಯ ನಡೆಯಬೇಕಾಗಿದೆ. ಇದೀಗ ಪೀಪಲಟ್ರೀ ಮಹಾ ವಿದ್ಯಾಲಯ ಏರ್ಪಡಿಸುವ ಸ್ಪಧರ್ಾಮೇಳ ಕಾರ್ಯಕ್ರಮ ಸ್ವಾಗತಾರ್ಹವಾಗಿದೆ ಎಂದು ಅವರು ಹೇಳಿದರು.
ಈ ಸ್ಪಧರ್ೆಯಲ್ಲಿ ಗೋವಾ, ಹುಬ್ಬಳ್ಳಿ, ಬೆಂಗಳೂರು ಮತ್ತು ಸ್ಥಳೀಯ ಕಾಲೇಜುಗಳಿಂದ 9 ತಂಡಗಳು ವ್ಯವಸ್ಥಾಪನ ಮೇಳದ ಸ್ಪಧರ್ೆಯಲ್ಲಿ ಭಾಗವಹಿಸಿದ್ದವು. ಈ ಸ್ಫಧರ್ೆಯಲ್ಲಿ ಬೆಸ್ಟ್ ಮ್ಯಾನೇಜರ್, ಮಾಕರ್ೆಟಿಂಗ್, ಎಚ್ಆರ್, ಫೈನಾನ್ಸ್, ರಸಪ್ರಶ್ನೆ ಮತ್ತು ಟೀಮ್ ಈವೆಂಟ್ನಂತಹ ವಿವಿಧ ಸ್ಫಧರ್ೆಗಳು ನಡೆದವು. ವೇದಿಕೆಯ ಮೇಲೆ ಪೀಪಲ್ಟ್ರೀ ಎಜುಕೇಶನ್ ಸೊಸೈಟಿ ಸಂಸ್ಥಾಪಕ ನಿದರ್ೆಶಕ ಬಿಪ್ಲೋವ್ ಬೆಲ್ವಾಲ್ , ಪ್ರಾಂಶುಪಾಲರು, ಸಂತೋಷ್ ಎಂ.ಜಿ. ,ಪೀಪಲ್ಟ್ರೀ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಜಗದೀಶ್ ಎ ಸವದತ್ತಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಪೀಪಲ್ಟ್ರೀ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಅನಿಲ್ ಕನಗನ್ನಿ ಅತಿಥಿಗಳನ್ನು ಸ್ವಾಗತಿಸಿದರು. ಬಿಬಿಎ ವಿಭಾಗದ ಮುಖ್ಯಸ್ಥೆ ಅಂಜಲಿ ಅಗರವಾಲ ವಂದಿಸಿದರು.