ಕೌಶಲ್ಯ ತರಬೇತಿ ಪಡೆದು ಸ್ವಾವಲಂಭಿಗಳಾಗಿ: ಸಿಇಓ

ಬಾಗಲಕೋಟೆ: ಜಿಲ್ಲೆಯ ಮಹಿಳೆಯರು ವಿವಿಧ ರೀತಿಯ ಕೌಶಲ್ಯ ತರಬೇತಿಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸುವಂತೆ ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲಾ ಪಂಚಾಯತ ವತಿಯಿಂದ ಮಹಿಳಾ ಸ್ತ್ರೀಶಕ್ತಿ ಸಂಘಗಳಿಗೆ ಎನ್.ಆರ್.ಎಲ್.ಎಂ ಯೋಜನೆಯಡಿ ಹಮ್ಮಿಕೊಂಡ ಸ್ಯಾನಿಟರಿ ನ್ಯಾಪಕಿನ್ಸ್ ಕುರಿತು ಒಂದು ದಿನದ ಕಾಯರ್ಾಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರಿಗೆ ಅವಶ್ಯವಾಗಿರುವ ಸ್ಯಾನಿಟರಿ ನ್ಯಾಪಕಿನ್ಸ್ (ತಿಂಗಳ ಪ್ಯಾಡ್) ಉತ್ಪಾದಿಸುವ ತರಬೇತಿ ಪಡೆದುಕೊಂಡು ಉತ್ಪಾದಿಸಿ ತಾವು ಉಪಯೋಗಿಸಿಕೊಳ್ಳುವುದಲ್ಲದೇ ಮಾರಾಟ ಮಾಡಿ ಆಥರ್ಿಕವಾಗಿ ಸದೃಡರಾಗುವಂತೆ ಕರೆ ನೀಡಿದರು.

ಸ್ಯಾನಿಟರಿ ನ್ಯಾಪಕಿನ್ನಿಂದ ಆರೋಗ್ಯ ಸುಧಾರಣೆಗೊಳ್ಳುವದಲ್ಲದೇ ಸಾಂಕ್ರಾಮಿಕ ರೋಗದಿಂದ ಮುಕ್ತಿ ಪಡೆಯುವದಲ್ಲದೇ ಶುಚಿ ಹಾಗೂ ನಿಭರ್ಿತಿ ಜೀವನ ನಡೆಸಲು ಸಾಧ್ಯವಿದೆ ಎಂದರು. ಆದ್ದರಿಂದ ಈ ಸ್ಯಾನಿಟರಿ ನ್ಯಾಪಕಿನ್ಸ್ ಉತ್ಪಾದನೆಯ ಕುರಿತು ಸಂಪೂರ್ಣ ಮಾಹಿತಿ ಹಾಗೂ ತಯಾರಿಕಾ ವಿಧಾನವನ್ನು ತಿಳಿದುಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು.

 ಈ ಸ್ಯಾನಿಟರಿ ನ್ಯಾಪಕಿನ್ಸ್ಗಳನ್ನು ಪ್ರತಿಯೊಂದು ಶಾಲೆಯ ವಿದ್ಯಾಥರ್ಿನಿಯರಿಗೆ ಸರಕಾರ ಉಚಿತವಾಗಿ ಪೂರೈಸುತ್ತಿರುವದರಿಂದ ಉತ್ತಮವಾದ ನ್ಯಾಪಕಿನ್ಸ್ ತಯಾರಿಸಿದ್ದಾದರೆ ಅವುಗಳನ್ನು ಶಿಕ್ಷಣ ಇಲಾಖೆಯ ಮುಖಾಂತರ ಜಿಲ್ಲೆಯ ಪ್ರತಿಯೊಂದು ಪ್ರೌಢಶಾಲೆಗೆ ನಿಮ್ಮದೇ ಉತ್ಪಾದನೆಯನ್ನು ವಿತರಿಸಲು ಅನುವುಮಾಡಿಕೊಡಲಾಗುವುದೆಂದು ತಿಳಿಸಿದರು.

ಗೌರಿಬಿದನೂರಿನ ಅಮೋಘಸಿದ್ದ ಸ್ತ್ರೀಶಕ್ತಿ ಸಂಘದ ಸುರೇಖಾ ಅವರು ಸ್ನೋವೆ ಎಂಬ ಹೆಸರಿನ ಸ್ಯಾನಿಟರಿ ನ್ಯಾಪಕಿನ್ಸ್ ಉತ್ಪಾದಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಾಯರ್ಾಗಾರದಲ್ಲಿ ಹಂಚಿಕೊಂಡರು. ಬೈಯಾರ ಕಂಪನಿಯ ಸಂಯೋಜಕ ಯನ್ನಪ್ಪ, ತಾಂತ್ರಿಕ ಸಹಾಯಕರಾದ ವಿಜಯಕುಮಾರ, ಮಂಜುನಾಥ ಅವರು ಸ್ಯಾನಿಟರಿ ನ್ಯಾಪಕಿನ್ ತಯಾರಿಸುವ ಬಗ್ಗೆ ತಾಂತ್ರಿಕ ಮಾಹಿತಿ ನೀಡಿದರು. 

ಕಾರ್ಯಕ್ರಮದಲ್ಲಿ ಜಿ.ಪಂ ಉಪಕಾರ್ಯದಶರ್ಿ ಎಸ್.ಎಸ್.ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾಯರ್ಾಗಾರದಲ್ಲಿ ಜಿಲ್ಲೆಯ ದೇವದಾಸಿಯರ 160 ಸಂಘಗಳು ಸೇರಿ ಒಟ್ಟು 310 ಸ್ತ್ರೀಶಕ್ತಿ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.