ಯೋಜನೆಗಳ ಸದ್ಭಳಕೆಯಿಂದ ಆರ್ಥಿಕವಾಗಿ ಸಶಕ್ತರಾಗಿ: ಭಾಸ್ಕರ ಚಕ್ರವರ್ತಿ.
Become financially empowered by making good use of the schemes: Bhaskara Chakraborty.
ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನ.
ಹುಕ್ಕೇರಿ. 23: ರ್ಕಾರದ ಹಣಕಾಸು ಸೇವೆಗಳ ಸದ್ಭಳಕೆ ಮಾಡಿಕೊಳ್ಳುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಆರ್ಥಿಕ ಮತ್ತು ಸಾಮಾಜಿಕವಾಗಿ ಸಶಕ್ತರಾಗಬೇಕೆಂದು ಬೆಂಗಳೂರಿನ ಎಸ್‌ಎಲ್‌ಬಿಸಿ ಜನರಲ್ ಮ್ಯಾನೇಜರ ಭಾಸ್ಕರ ಚಕ್ರವರ್ತಿ ಕರೆ ನೀಡಿದರು.
ಹುಕ್ಕೇರಿ ತಾಲೂಕು ಎಲ್ಲಿಮುನ್ನೋಳಿ ಗ್ರಾಮದ ರಂಗಮಂದಿರದ ಸಭಾಂಗಣದಲ್ಲಿ ಶನಿವಾರ ಸೆ.20ರಂದು ಕೆನರಾ ಬ್ಯಾಂಕ ಶಾಖೆ ಹುಕ್ಕೇರಿ ಹಾಗೂ ಜಿ.ಪಂ ಬೆಳಗಾವಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಹಣಕಾಸು ಸೇರೆ್ಡ ಪರಿಪೂರ್ಣತೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭಾರತ ಸರ್ಕಾರವು ಪ್ರಮುಖವಾಗಿ ಗ್ರಾಮೀಣ ಪ್ರದೇಶದ ರೈತರು, ಮಹಿಳೆಯರ ಸುರಕ್ಷತೆ ಹಾಗೂ ಆರ್ಥಿಕ ಸುಧಾರಣೆಗಾಗಿ ಹತ್ತಾರು ಯೋಜನೆಗಳನ್ನು ಜಾರಿಗೊಳಿಸಿದ್ದು, ಕೆನರಾ ಬ್ಯಾಂಕನಿಂದ ದೊರೆಯುವ ವಿವಿಧ ವಿಮಾ ಯೋಜನೆಗಳನ್ನು ಅರ್ಹ ನಾಗರಿಕರು ಕಡ್ಡಾಯವಾಗಿ ಪಡೆಯುವಂತೆ ಮನವಿ ಮಾಡಿದರು.
ಚಿಕ್ಕೋಡಿ ಪ್ರಾದೇಶಿಕ ಕಚೇರಿಯ ಎಜಿಎಂ ಪಣೆ ಶಯನಾ ಅವರು ಮಾತನಾಡಿ ಉತ್ತಮ ಗ್ರಾಹಕ ಸ್ನೇಹಿಯಾಗಿ ಸೇವೆ ಸಲ್ಲಿಸುತ್ತಿರುವ ಕೆನರಾ ಬ್ಯಾಂಕ ವ್ಯಾಪ್ತಿಯಡಿ
ಪ್ರಧಾನಮಂತ್ರಿ ಜನದನ್ ಯೋಜನೆ, ಕಡಿಮೆ ಕಂತಿನ ವಿಮಾ ಯೋಜನೆಗಳು, ಅಟಲ್ ಪಿಂಚಣಿಯಂತಹ ವಿವಿಧ ಜನೋಪಯೋಗಿ ಸೌಲಭ್ಯಗಳನ್ನು ನಗರ ಮತ್ತು ಹಳ್ಳಿಪ್ರದೇಶಗಳಿಗೂ ತಲುಪಿಸಿ ಸಾಕಾರಗೊಳಿಸಲು ಶ್ರಮಿಸಲಾಗುತ್ತಿದೆ ಎಂದ ಅವರು ಬೆಳೆ ಸಾಲ, ಹೈನುಗಾರಿಕೆ, ಶಿಕ್ಷಣ, ವಾಹನ ಸಾಲ ಸೇರಿದಂತೆ ಕೃಷಿಯೇತರ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಕೆನರಾ ಬ್ಯಾಂಕ ಲೀಡ್ ಡಿಸ್ಟಿಕ ಮ್ಯಾನೇಜರ ಪ್ರಶಾಂತ ಘೋಡಕೆ ಮಾತನಾಡಿ ಡಿಜಿಟಲ್ ವಂಚನೆಯ ಜಾಗೃತಿ ಹಾಗೂ ಹಣಕಾಸು ಸಾಕ್ಷರತೆ, ಕೆವೈಸಿ ನವೀಕರಣ, ನಿಷ್ಕ್ರಿಯ ಖಾತೆಗಳು ಹಾಗೂ ಕ್ಲೇಮು ಪಡೆಯದ ಠೇವಣಿಗಳ ಸೇರಿದಂತೆ ಹತ್ತಾರು ಯೋಜನೆಗಳ ಕುರಿತು ವಿವರಿಸಿದರು.
ಡಿವಿಜಿನಲ್ ಮ್ಯಾನೇಜರ ಜುಗಳ ಕಿಶೋರ, ಗ್ರಾಂ ಪಂಚಾಯತಿ ಅಧ್ಯಕ್ಷ ಮೀರಾಸಾಬ ಮುಲ್ತಾನಿ, ಗ್ರಾಂ.ಪಂ ಅಭಿವೃದ್ಧಿ ಅಧಿಕಾರಿ ಚಂದ್ರಾ್ಪ ಗುಡದರಿ, ಹುಕ್ಕೇರಿ ಬ್ಯಾಂಕ ಶಾಖಾ ವ್ಯವಸ್ಥಾಪಕ ರಾಜಶೇಖರ ಪಿ. ಮೀನಾಕ್ಷಿ ಸಾಂಘವಿ, ವಿಜಯ ಕಾಂಬ್ಳೆ, ಆನಂದ ಲಕ್ಕುಂಡಿ, ಅಪ್ಪಣ್ಣಾ ಬಡಿಗೇರ, ಗ್ರಾಂ.ಪಂ ಮತ್ತು ಬ್ಯಾಂಕಿನ ಸಿಬ್ಬಂದಿ, ಸಂಜೀವಿನಿ ಮಹಿಳಾ ಒಕ್ಕೂಟ, ಬ್ಯಾಂಕ ಮಿತ್ರರು, ಎಲ್ಲಿಮುನ್ನೋಳಿ ಹಾಗೂ ಸುತ್ತಲಿನ ಹತ್ತಾರು ಗ್ರಾಮಗಳ ನೂರಾರು ಜನ ನಾಗರಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ರಾಘು ನವನೇರ ಸ್ವಾಗತಿಸಿದರು, ಜಗದೀಶ ಮುದೋಳ ನಿರೂಪಿಸಿದರು. ಎಂ.ಎ.ಗುಂಡಕಲ್ಲಿ ವಂದಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 