ಸರ್ಕಾರಿ ಶಾಲೆಗಳ ಕುರಿತು ಅಭಿಮಾನ ಇರಲಿ: ಶಾಸಕ ರಾಜುಗೌಡ
Be proud of government schools: MLA Rajugowda
ತಾಳಿಕೋಟಿ 01: ಮಕ್ಕಳಿಗೆ ಕೇವಲ ಗುಣಮಟ್ಟದ ಶಿಕ್ಷಣ ಕೊಟ್ಟರೆ ಸಾಲದು ಅವರ ಬದುಕಿಗೆ ಅಗತ್ಯವಾಗಿರುವ ಉತ್ತಮ ಸಂಸ್ಕಾರಗಳನ್ನೂ ಕೊಡಲು ಶಿಕ್ಷಕರು ಪ್ರಯತ್ನಿಸಬೇಕು ಎಂದು ದೇವರ ಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ (ಕು.ಸಾಲವಾಡಗಿ)ಹೇಳಿದರು.
ತಾಲೂಕಿನ ಗಡಿ ಸೋಮನಾಳ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳ ಕುರಿತು ಕೀಳರಿಮೆ ಬೇಡ, ಅವು ಖಾಸಗಿ ಸಂಸ್ಥೆಗಳ ಜೊತೆ ಪೈಪೋಟಿ ನಡೆಸುವಷ್ಟು ಇಂದು ಸಶಕ್ತವಾಗಿವೆ, ಇದಕ್ಕಾಗಿ ಸರ್ಕಾರ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ ಸರ್ಕಾರಿ ಶಾಲೆಗಳ ಕುರಿತು ಎಲ್ಲರಲ್ಲೂ ಅಭಿಮಾನವಿರಲಿ. ಶಿಕ್ಷಣ ಸಚಿವರು ನನ್ನ ಕ್ಷೇತ್ರಕ್ಕೆ ನಾಲ್ಕು ಪ್ರೌಢಶಾಲೆಗಳನ್ನು ಮಂಜೂರು ಮಾಡಿಸಿಕೊಟ್ಟಿದ್ದಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದ ಅವರು ಇನ್ನು ಮುಂದೆ ಸರ್ಕಾರಿ ಶಾಲೆಗಳಲ್ಲಿ ನನಗೆ ಸನ್ಮಾನಿಸುವ ಕಾರ್ಯಕ್ರಮ ಬಿಡಬೇಕು ಏಕೆಂದರೆ ಇದು ಶಿಕ್ಷಕರಿಗೆ ಹೊರೆಯಾಗುತ್ತದೆ ಎಂದರು.
ಜೆಡಿಎಸ್ ತಾಲೂಕಾಧ್ಯಕ್ಷ ಮಡುಸೌಕಾರ ಬಿರಾದಾರ ಮಾತನಾಡಿ ನಮ್ಮೂರಿಗೆ ಪ್ರೌಢಶಾಲೆ ಇಲ್ಲದೆ ಇರುವುದರಿಂದ ಇಲ್ಲಿಯ ಮಕ್ಕಳು ದೂರದ ಪಟ್ಟಣಕ್ಕೆ ಹೋಗಬೇಕಾಗಿತ್ತು ಇದರ ಅನುಕೂಲ ಮಾಡಿಕೊಟ್ಟ ಶಾಸಕ ರಾಜುಗೌಡರಿಗೆ ಅಭಿನಂದಿಸುತ್ತೇನೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗಲು ಶಿಕ್ಷಕರು ಶಕ್ತಿ ಮೀರಿ ಪ್ರಯತ್ನಿಸಬೇಕು, ಸರ್ಕಾರಿ ಶಾಲೆಯಲ್ಲಿ ಪ್ರವೇಶ ಪಡೆದು ಖಾಸಗಿ ಶಾಲೆಗಳಿಗೆ ಹೋಗಲು ಅವಕಾಶ ಮಾಡಿಕೊಡಬಾರದು ಎಂದರು. ಬಿಇ ಓ ಬಿ.ಎಸ್.ಸಾವಳಗಿ,ಜೆಡಿಎಸ್ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ, ಮುಖಂಡ ಜೈ ಭೀಮ್ ಮುತ್ತಗಿ ಹಾಗೂ ಗುರುಬಸಪ್ಪ ಕಂಗಳ ಮಾತನಾಡಿ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಲಿಕಾ ಹಬ್ಬ ಕಾರ್ಯಕ್ರಮದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಹಾಗೂ ಶಾಲೆ ಉನ್ನತಿಕರಿಸಲು ಶ್ರಮಿಸಿದ ಮುಖ್ಯ ಶಿಕ್ಷಕ ಟಿ.ಎಸ್.ಲಮಾಣಿ ಅವರಿಗೆ ಶಾಸಕರಿಂದ ಸನ್ಮಾನಿಸಿ ಗೌರವಿಸಲಾಯಿತು.
ಗ್ರಾಪಂ ಅಧ್ಯಕ್ಷ ಅಶೋಕಗೌಡ ಪಾಟೀಲ, ಉಪಾಧ್ಯಕ್ಷ ವೀರೇಶಗೌಡ ಪಾಟೀಲ(ಕಾರಗನೂರ), ಎಸ್ ಡಿ ಎಮ್ ಸಿ ಅಧ್ಯಕ್ಷ ಬೀರ್ಪ ಪೂಜಾರಿ,ಇಸಿಓ ಸುರೇಶ ಹಿರೇಮಠ, ಬಿ.ಆರಿ್ಸ.ಆರಿ್ಬ.ದಮ್ಮೂರಮಠ, ಬಿ.ಆರಿ್ಪ.ಕಾಶಿನಾಥ ಸಜ್ಜನ, ಸಿ.ಆರಿ್ಸ.ಎಸ್.ಎಂ.ಪಾಲ್ಕಿ, ಮು.ಗು.ಟಿ.ಎಸ್.ಲಮಾಣಿ, ಮುಖಂಡರಾದ ಸಾಹೇಬಗೌಡ ಬಿರಾದಾರ(ಲಕ್ಕುಂಡಿ), ಗ್ರಾಪಂ ಸದಸ್ಯ ಭೀಮನಗೌಡ ತಂಗಡಗಿ, ನಿಂಗನಗೌಡ ಪಾಟೀಲ, ಗ್ರಾಪಂ ಮಾಜಿ ಅಧ್ಯಕ್ಷೆ ಅಶ್ವಿನಿ ಸಾ.ಬಿರಾದಾರ, ಕೆ.ಪಿ.ಎಸ್.ಟಿ. ಅಧ್ಯಕ್ಷ ಎಸ್ ಎಸ್ ತೀರ್ಥ, ಹುಸೇನ ಮುಲ್ಲಾ, ಯೋಗೇಶ ಚೌದ್ರಿ, ಮು.ಶಿ.ಜಿ.ಕೆ.ಮಣೂರ, ಮು.ಗು.ಬಿ.ಸಿ.ಗೋಗಿ, ಸಂಘಟನಾ ಕಾರ್ಯದರ್ಶಿ ಅಂಬಿಕಾ ಎನ್, ಸಿಬ್ಬಂದಿ ವರ್ಗ, ಪಾಲಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 