ಎಸ್ಸಿಎಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಇರಲಿ: ಬಿ ಇ ಓ ಯಡ್ರಾಮಿ
Be prepared for SCLC exams: B.E.O. Yadrami
ಸಿಂದಗಿ 24: ಕಳೆದ 2024-25ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರತಿಶತ 42ರಷ್ಟು ಆಗಿದ್ದು ಈ ಬಾರಿ ಹೆಚ್ಚಿನ ರೀತಿಯಲ್ಲಿ ಅಂಕ ಗಳಿಸುವ ವಿಧಾನದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಭಯದಿಂದ ಬರೆಯುದಲ್ಲ. ಪರೀಕ್ಷೆಯ ದಿನ ಒತ್ತಡಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ನೀಡಿರುವ ಪ್ರಶ್ನೆಗಳಿಗೆ ನೇರವಾಗಿ ಉತ್ತರಿಸುವುದು ಮುಖ್ಯ ಎಂದು ಕ್ಷೇತ್ರ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ತಾಲೂಕಿನ ಯರಗಲ್ ಬಿ ಕೆ ಗ್ರಾಮದ ಸಿದ್ದಶಂಕರಾನಂದ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಪೂರ್ವ ಸಿದ್ದತಾ ತಯಾರಿಯಾಲು ಅವರು ಮಾರ್ಗದರ್ಶನ ನೀಡಿ, ಸರಿಯಾದ ಯೋಜನೆಯೊಂದಿಗೆ ಮುಂಚಿತವಾಗಿ ಅಧ್ಯಯನ ಆರಂಭಿಸುವುದು, ವೇಳಾಪಟ್ಟಿ ರಚಿಸುವುದು, ಮುಖ್ಯ ವಿಷಯಗಳ ಶಾರ್ಟ್ ನೋಟ್ಸ್ ಮಾಡುವುದು, ನಿಯಮಿತವಾಗಿ ಪುನರಾವರ್ತಿಸುವುದು, ಮತ್ತು ಆರೋಗ್ಯದ ಕಡೆ ಗಮನ ನೀಡುವುದು.
ಗಂಟೆಗಟ್ಟಲೆ ಓದದೆ, ಆಗಾಗ ವಿರಾಮ ತೆಗೆದುಕೊಳ್ಳುವುದು, ವಿದ್ಯಾರ್ಥಿಗಳು ತಮ್ಮ ಅಧ್ಯಯನ ತಂತ್ರಗಳು ಮುಂಚಿತವಾಗಿ ಆರಂಭಿಸಿ ಕೊಂಡು ಎಸ್ ಎಸ್ ಎಲ್ ಸಿ ಪರೀಕ್ಷೆ ಹತ್ತಿರ ಬಂದಾಗ ಕೊನೆಯ ಕ್ಷಣದ ಓದುವಿಕೆಯನ್ನು ತಪ್ಪಿಸಲು ಮೊದಲೇ ಅಧ್ಯಯನ ಆರಂಭಿಸಿಬೇಕು .ತಮ್ಮ ವಿಷಯ ಶಿಕ್ಷಕರು ವೇಳಾಪಟ್ಟಿ ರಚಿಸಿರುವ ಹಾಗೆ ತಮಗೆ ಕಷ್ಟಕರವಾದ ವಿಷಯಗಳು ತಿಳಿದು ಕೊಳ್ಳಬೇಕು . ತಾವು ಪ್ರಮುಖ ಅಂಶಗಳ ಸಣ್ಣ ಟಿಪ್ಪಣಿಗಳನ್ನು ಮಾಡಿ ಕೊಂಡಿರಬೇಕು . ಇದು ಪರೀಕ್ಷೆಯ ಸಮಯದಲ್ಲಿ ಪುನರಾವರ್ತಿಸಲು ಸಹಾಯ ಮಾಡುತ್ತದೆ. ವಿಷಯವನ್ನು ಅರ್ಥಮಾಡಿ ಕೊಂಡು ಕೇವಲ ಓದದೆ, ವಿಷಯದ ಆಳವಾದ ಗ್ರಹಿಕೆಗೆ ಪ್ರಯತ್ನಿಸಿ. ಪರಿಕಲ್ಪನೆಗಳ ನಡುವಿನ ಸಂಬಂಧವನ್ನು ನೋಡಿ. ಆವರ್ತಿಸಿ ಮತ್ತು ಅಭ್ಯಾಸ ಮಾಡಿ: ವಿಷಯವನ್ನು ಆಗಾಗ್ಗೆ ಪರೀಶೀಲಿಸಿ. ವಿಮರ್ಶಾತ್ಮಕ ಕೌಶಲ್ಯಗಳನ್ನು ಅಭ್ಯಾಸ ಮಾಡಬೇಕು ಎಂದರು. ಶ್ರೀ ಸಿದ್ದ ಶಂಕರಾನಂದ ಪ್ರೌಢ ಶಾಲಾ ಮುಖೋಪಾಧ್ಯಾಯ ಅರುಣ ಕೆ ನಾಯ್ಕೋಡಿ, ಶಿಕ್ಷಕರಾದ ಎ .ಎಸ್ ಚವ್ಹಾಣ, ಎಸ್ ಕೆ ಚವ್ಹಾಣ, ಆರ್ ಬಿ ಬಿರಾದಾರ, ಕೆ ಎಸ್ ಪಾಟೀಲ, ಎಂ ಎಸ್ ಅಂಬಿಗೇರ, ಪ್ರೀತಿ ಸಗರ ಹಾಗೂ ಎಸ್ ಸಿ ಚಟ್ಟರಕಿ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 