ಪರಿಸರ ಸ್ನೇಹಿಯಾಗಿರಿ, ಪ್ಲಾಸ್ಟಿಕ್ ಬಳಸುವುದನ್ನು ಬಿಡಿ

ಪರಿಸರ ಸ್ನೇಹಿಯಾಗಿರಿ, ಪ್ಲಾಸ್ಟಿಕ್ ಬಳಸುವುದನ್ನು ಬಿಡಿ  Be eco-friendly, stop using plastic.

ಗದಗ 11: ನಗರದ ಪ್ರತಿಷ್ಠಿತ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್‌. ಎಸ್‌. ಎಸ್‌. ಘಟಕದ ವತಿಯಿಂದ ದಿ. 11 ಮಂಗಳವಾರ ರಂದು ಗದಗ ನಗರದ ಜಾಗೃತಿ ಅಭಿಯಾನ ಮತ್ತು ಜಾಥಾ ಕಾರ್ಯವನ್ನು ಮಾಡಲಾಯಿತು. ನಂತರ ವಿವೇಕಾನಂದ ನಗರದ ನಿವಾಸಿಗಳ ಮನೆ ಮನೆಗೂ ತೆರಳಿ ಸಮಾಲೋಚನೆ ನೆಡೆಸಿ ಅರಿವು ಮೂಡಿಸಲಾಯಿತು.    

ಈ ಚಟುವಟಿಕೆಯಲ್ಲಿ ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್‌. ಎಸ್‌. ಎಸ್‌. ಘಟಕದ, ಕಾರ್ಯದರ್ಶಿಯಾದ ಕುಮಾರಿ. ಸಹನಾ ನಾಲ್ವಾಡದ, ಕುಮಾರ. ಸೋಮಶೇಖರ ಕುರಿ, ಕುಮಾರ. ಆಕಾಶ ಕಳಗಣ್ಣನವರ, ಕುಮಾರಿ. ಸವಿತಾ ಕಾಮತ್, ಎನ್‌. ಎಸ್‌. ಎಸ್‌. ತಂಡದ ನಾಯಕರಾದ ಕುಮಾರ. ಮುತ್ತಪ್ಪ ನೈನಾಪೂರ, ಕುಮಾರ. ಸತೀಶ ಕಣವಿ, ಕುಮಾರಿ. ರುಕ್ಸಾರ್ ಕೊಪ್ಪಳ, ಕುಮಾರಿ. ಮಮತಾ ಉಳ್ಳಟ್ಟಿ, ಕುಮಾರಿ. ನಾಗರತ್ನಾ ಹಾಲನವರ, ಮತ್ತು ಎನ್‌. ಎಸ್‌. ಎಸ್‌. ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.