ಸಂಬರಗಿ 30:ಖಿಳೆಗಾಂವ್ ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸಿ ಈ ಭಾಗದ ಕೃಷಿಗೆ ನೀರು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಬರಗಾಲದಲ್ಲಿ ರೈತರಿಗೆ ಇದು ವರದಾನವಾಗಿ ಪರಿಣಮಿಸಿದೆ. ಏನೇ ಆಗಲಿ, ಈ ಯೋಜನೆಯನ್ನು ಪೂರ್ಣಗೊಳಿಸಿಯೇ ತೀರುತ್ತೇನೆ ಎಂದು ಗಡಿ ಭಾಗದಲ್ಲಿ ಜಲ ಕ್ರಾಂತಿ ಮಾಡುತ್ತೇನೆ ಎಂದು ಶಾಸಕ ರಾಜು ಕಾಗೆ ವಿಶ್ವಾಸ ವ್ಯಕ್ತ ಪಡಿಸಿದರು.
ಕಲೋತ್ತಿ ಗ್ರಾಮದಲ್ಲಿ ತೋಟದ ಪಾಟೀಲ, ರಸ್ತೆಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು ಬರ ಪ್ರದೇಶವನ್ನು ಪರಿವರ್ತಿಸಲು ಇದು ನನ್ನ ನಿರಂತರ ಪ್ರಯತ್ನವಾಗಿದೆ. ನಾನೇನು ಸುಳ್ಳು ಹೇಳುವವನಲ್ಲ, ಆದರೆ ಕೆಲಸ ಮಾಡುತ್ತೇನೆ ಇಲ್ಲವೇಇಲ್ಲ ಎಂದು ಹೇಳುತ್ತೇನೆ ಯಾವುದೇ ಸಂದರ್ಭದಲ್ಲೂ ಯೋಜನೆ ಪೂರ್ಣಗೊಳಿಸಿ ಅಗತ್ಯ ಬಿದ್ದರೆ ರೈತರ ಪರ ಹೋರಾಟ ಮಾಡಿ ಬೀದಿಗೆ ಇಳಿಯುತ್ತೇನೆ ಒಟ್ಟಾರೆ ನೀರು ಹರಿಸುತ್ತೇನೆ. ಯಾವುದೇ ಸಮಸ್ಯೆಗಳಿದ್ದಲ್ಲಿ ಈ ಯೋಜನೆಯು ಭರದಿಂದ ಸಾಗುತ್ತಿದೆ ಮತ್ತು ನಾನು ನಿರಂತರವಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುತ್ತೇನೆ ನೀರಾವರಿ ಯೋಜನೆ ಪೂರ್ಣಗೊಳಿಸುವುದು ಖಚಿತ ಇದರಲ್ಲಿ ಯಾವುದೇ ಸಂಶಯವೇ ಇಲ್ಲ ಎಂದು ರಾಜು ಕಾಗೆ ಭರವಸೆ ನೀಡಿದರು.
ಈ ಭಾಗದಲ್ಲಿ ಶಾಲಾ ಕಟ್ಟಡ, ರಸ್ತೆ ಡಾಂಬರೀಕರಣ, ದೇವಸ್ಥಾನದ ಜೀರ್ಣೋದ್ಧಾರ, ಕುಡಿಯುವ ನೀರಿನ ಸಮಸ್ಯೆ, ಪ್ರತಿ ಹಳ್ಳಿಗೆ ಪ್ರತಿ ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ಪೂರೈಸುವ ಜಲ ಜೀವನ್ ಯಂತ್ರದ ಕಾಮಗಾರಿ, ಅಂತಿಮ ಹಂತದಲ್ಲಿ ಮನೆಮನೆಗೆ, ಶುದ್ಧ ನೀರು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ನನ್ನ ಅವಧಿಯಲ್ಲಿ ಕ್ಷೇತ್ರದ ಹಲವು ಸಮಸ್ಯೆಗಳನ್ನು ಬಗೆಹರಿಸಿ ರಾಜ್ಯದಲ್ಲೇ ಕ್ಷೇತ್ರವನ್ನು ಆದರ್ಶವಾಗಿಸುವುದೇ ನನ್ನ ಗುರಿ ಇದೆಯೆಂದು ಸ್ಪಷ್ಟಪಡಿಸಿದರು. ಗ್ರಾಮದ ಗಣ್ಯರಾದ ರವಿಕಾಂತ್ ಗೌಡ ಪಾಟೀಲ್, ಬಸು ನಾಯಕ, ಸಂಗನಗೌಡ ಪಾಟೀಲ,ನೇತಾಜಿ ಜಗತಾಪ,ಮಹೇಶ ಹಬಗುಂಡಿ, ಅರ್ಜುನ ನಾಯ್ಕ್, ಶ್ರೀಮಂತಿ ಯಳಾವಕರ್, ಕಿರಣ್ ವೈದಂಡೆ, ಮುತ್ತಪ್ಪ ನಾಯಕ್, ಶ್ರೀಮಂತ ಯಳಾವಕರ್, ವಿಜಯ ವಾಗಮಾರೆ, ಮಹದೇವ್ ನಾಯ್ಕ್, ರಘುನಾಧ ಯಳಾವಕರ, ಬಾಪು ಯಳಾವಕರ, ದೇವಪ್ಪ ನಾಯ್ಕ್, ಬಸ್ವಂತ್ ನಾಯ್ಕ್, ಖಂಡೆರಾವ ಘೋರೆ್ಡ, ವಿರಾನಾ ವಾಲಿ ಇನ್ನಿತರರು ಉಪಸ್ಥಿತ ಇದ್ದರು.