ಬಸವರಾಜ ಬೊಮ್ಮಾಯಿ ಕನಸಾದ ಯೋಜನೆ ! ವರ್ಷಗಳ ವಿಳಂಬದ ನಂತರ, ಈಗ ಆತುರದ ಉದ್ಘಾಟನೆ : ಭರತ ಬೊಮ್ಮಾಯಿ

ಬಸವರಾಜ ಬೊಮ್ಮಾಯಿ  ಕನಸಾದ ಯೋಜನೆ ! ವರ್ಷಗಳ ವಿಳಂಬದ ನಂತರ, ಈಗ ಆತುರದ ಉದ್ಘಾಟನೆ : ಭರತ ಬೊಮ್ಮಾಯಿ Basavaraja Bommai's dream project! After years of delay, now a hasty inauguration: Bharat Bommai

ಲೋಕದರ್ಶನ ವರದಿ 

 ಶಿಗ್ಗಾವಿ 26 : ಶಿಗ್ಗಾವಿ 250 ಹಾಸಿಗೆ ಆಸ್ಪತ್ರೆ ಸಂಪೂರ್ಣ ಸಿದ್ಧಗೊಂಡ ಆಸ್ಪತ್ರೆಯ ಉದ್ಘಾಟನೆ ಅಲ್ಲ  ಕೇವಲ ಕಟ್ಟಡದ ಉದ್ಘಾಟನೆ ಮಾತ್ರ ಎಂದು ಬಿಜೆಪಿ ಮುಖಂಡ ಭರತ ಬೊಮ್ಮಾಯಿ ಆರೋಪಿಸಿದ್ದಾರೆ.  ಪಟ್ಟಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು ಶಿಗ್ಗಾವಿನಲ್ಲಿ 100 ಹಾಸಿಗೆಗಳ ಆಸ್ಪತ್ರೆಯನ್ನು 250 ಹಾಸಿಗೆಗಳ ಆಧುನಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಶಂಕುಸ್ಥಾಪನೆ ಮಾಡಲಾಗಿತ್ತು.

ಸುಮಾರು 96.50 ಕೋಟಿ ಅಂದಾಜು ವೆಚ್ಚದ ಈ ಯೋಜನೆ, 68.85 ಕೋಟಿ ಗುತ್ತಿಗೆ ಮೌಲ್ಯದೊಂದಿಗೆ, ಶಿಗ್ಗಾವಿ ಹಾಗೂ ಸುತ್ತಮುತ್ತಲಿನ ಜನತೆಗೆ ಸಮಗ್ರ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿತ್ತು.     ಸುಮಾರು 10,946 ಚದರ ಮೀಟರ್ ವಿಸ್ತೀರ್ಣದ ಆಸ್ಪತ್ರೆಗೆ ಅತ್ಯವಶ್ಯಕವಾದ ಸಾಧನಗಳು, ಮೂಲಸೌಕರ್ಯ, ಮತ್ತು ಸೇವಾ ಸಿದ್ಧತೆ ಇನ್ನೂ ಪೂರ್ಣಗೊಂಡಿಲ್ಲ. ಆಸ್ಪತ್ರೆ ಎಂದರೆ ಕೇವಲ ಕಟ್ಟಡವಲ್ಲ; ಅದು ಸಮರ​‍್ಕ ಉಪಕರಣಗಳು, ವ್ಯವಸ್ಥೆಗಳು ಮತ್ತು ರೋಗಿಗಳಿಗೆ ಸೇವೆ ನೀಡುವ ಸಂಪೂರ್ಣ ಸಿದ್ಧತೆ ಹೊಂದಿರಬೇಕು. ಇಂತಹ ಪರಿಸ್ಥಿತಿಯಲ್ಲಿ ಆತುರದ ಉದ್ಘಾಟನೆ ಮಾಡುವುದು ಜನರ ನೀರೀಕ್ಷೆಗಳಿಗೆ ಧಕ್ಕೆ ತರುತ್ತದೆ.   

ಶಿಗ್ಗಾವಿನ ಜನತೆಗೆ ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿರುವ ಆಸ್ಪತ್ರೆ ಬೇಕು, ರಾಜಕೀಯ ಪ್ರದರ್ಶನಕ್ಕಾಗಿ ಮಾಡುವ ಉದ್ಘಾಟನೆ ಅಲ್ಲ.   ಇದರ ಜೊತೆಗೆ, ಹಾವೇರಿ ಜಿಲ್ಲೆಯ ಸವಣೂರಿನಲ್ಲಿ 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆ ನಿರ್ಮಾಣ ಯೋಜನೆಗೂ  ಬಸವರಾಜ ಬೊಮ್ಮಾಯಿ  ಮುಖ್ಯಮಂತ್ರಿಗಳಾಗಿದ್ದಾಗ ಘೋಷಣೆ ಮಾಡಿದ್ದರು. 2026 ರಲ್ಲಿ ಕಾಮಗಾರಿ ಪ್ರಾರಂಭಗೊಂಡಿದ್ದು, 18 ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಬೇಕಿದೆ.

ಆದರೆ ಕಾಮಗಾರಿ ಕುಂಠಿತವಾಗಿದೆ. ಈ ಹಿಂದೆ ಅನುಮೋದನೆಗೊಂಡ ಯೋಜನೆಗಳೇ ಇನ್ನೂ ಪೂರ್ಣಗೊಳ್ಳದಿರುವ ಸಂದರ್ಭದಲ್ಲಿ, ಹೊಸ ಯೋಜನೆಗಳನ್ನು ಘೋಷಿಸುವುದು ಮತ್ತು ಅವುಗಳನ್ನೂ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಜನರಲ್ಲಿ ಅನುಮಾನ ಹುಟ್ಟಿಸುತ್ತಿದೆ.  ಈ ಯೋಜನೆಯ ದೃಷ್ಟಿಕೋನ, ಯೋಜನೆ ಮತ್ತು ಶಂಕುಸ್ಥಾಪನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದು, ಈಗ ಅಪೂರ್ಣ ಸ್ಥಿತಿಯಲ್ಲೇ ಕ್ರೆಡಿಟ್ ಪಡೆಯಲು ಮಾಡುತ್ತಿರುವ ಪ್ರಯತ್ನ ಸ್ಪಷ್ಟವಾಗಿದೆ.

ಆದರೆ, ಸೆಪ್ಟೆಂಬರ್ 2024ರೊಳಗೆ ಪೂರ್ಣಗೊಳ್ಳಬೇಕಿದ್ದ ಈ ಕಾಮಗಾರಿ ವಿಳಂಬವಾಗಿದೆ. ಈಗ ಅತ್ಯಂತ ವಿಷಾದನೀಯ ಸಂಗತಿ ಎಂದರೆ, ಕಾಂಗ್ರೆಸ್ ಸರ್ಕಾರವು ಈ ಅಪೂರ್ಣ ಕಾಮಗಾರಿಯನ್ನು ಆತುರದಿಂದ ಉದ್ಘಾಟಿಸಲಾಗುತ್ತಿದೆ    ಶಿಗ್ಗಾವಿ ಮತ್ತು ಸವಣೂರಿನ ಭಾಗದಲ್ಲಿ ಬಸವರಾಜ ಬೊಮ್ಮಾಯಿ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇವೆಲ್ಲಾ ಯೋಜನೆಗಳಿಗೆ ಶ್ರಮ ವಹಿಸಿದ್ದ ಅವರನ್ನು ಬಿಟ್ಟು ಉದ್ಘಾಟನೆ ಮಾಡುವುದು ಸಮಂಜಸವಲ್ಲ. 250 ಬೆಡ್ ಆಸ್ಪತ್ರೆ ಅದಕ್ಕೆ ದೊಡ್ಡ ಸಾಕ್ಷಿ ಈ ಯೋಜನೆಗೆ ದಿಕ್ಕು ತೋರಿದ ನಾಯಕನನ್ನು ಕಡೆಗಣಿಸುವುದು ಸರಿಯಲ್ಲ, ಅಲ್ಲದೇ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗುವುದೇ ಉತ್ತಮ ರಾಜಕಾರಣಾಗಿರುತ್ತದೆ ಎಂದರ