ಬಸವ ಜಯಂತಿ ಉತ್ಸವ-2026 ಸಮೀತಿಯ ಮುಖ್ಯ ಸಂಚಾಲಕರಾಗಿ ಬಸವರಾಜ ರೊಟ್ಟಿ ಆಯ್ಕೆ
Basavaraj Rotty elected as the chief convener of Basava Jayanti Festival-2026 Committee
ಲೋಕದರ್ಶನ ವರದಿ
ಬೆಳಗಾವಿ 27 ; ಬಸವ ಜಯಂತಿ ಉತ್ಸವ 2026ರ ಮುಖ್ಯ ಸಂಚಾಲಕರಾಗಿ ನ್ಯಾಯವಾದಿ ಬಸವರಾಜ್ ರೊಟ್ಟಿ ಇವರನ್ನು ಆಯ್ಕೆ ಮಾಡಲಾಯಿತು. ಮತ್ತು ಸಹ ಸಂಚಾಲಕರಾಗಿ ರತ್ನಪ್ರಭಾ ಬೆಲ್ಲದಅಧ್ಯಕ್ಷರು ವೀರಶೈವ ಲಿಂಗಾಯತ ಮಹಾಸಭಾ ಬೆಳಗಾವಿ. ಈರಣ್ಣದಯನ್ನವರ್ ಅಧ್ಯಕ್ಷರು ಲಿಂಗಾಯತ ಸಂಘಟನೆ ಬೆಳಗಾವಿ. ಅಶೋಕ್ ಬಂಡಿಗೇರಿ ಅಧ್ಯಕ್ಷರು ರಾಷ್ಟ್ರೀಯ ಬಸವದಳ ಬೆಳಗಾವಿ. ಡಾ. ಎಸ್ ಎಂ ದೊಡಮನ ಅಧ್ಯಕ್ಷರು ಲಿಂಗಾಯತ ಸೇವಾ ಸಮಿತಿ ಬೆಳಗಾವಿ
ಎಸ್ ಜಿ ಸಿದ್ನಾಳ್ ಅಧ್ಯಕ್ಷರು ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಬೆಳಗಾವಿ ಕಿರಣ್‌ಅಗಡಿ ಲಿಂಗಾಯತ ಬಿಜಿನೆಸ್ ಫೋರಂ ಬೆಳಗಾವಿ ಮಹಾಂತೇಶ್ ಗುಡಸ್ ಅಧ್ಯಕ್ಷರು ಲಿಂಗಾಯತಧರ್ಮ ಮಹಾಸಭಾ ಬೆಳಗಾವಿ ರಮೇಶ ತುಬಚಿ ಅಧ್ಯಕ್ಷರು ಸಿವಿಲ್ ಇಂಜಿನಯರ್ಸ್ ಅಸೋಸಿಯೇಷನ್ ಬೆಳಗಾವಿ ಸೂರ್ಯಕಾಂತ್ ಬಾವಿ ಅಧ್ಯಕ್ಷರು ಬಸವ ಕಾಯಕ ಜೀವಿಗಳ ಸಂಘ ಬೆಳಗಾವಿ ಮುಂತಾದ ಹತ್ತು ಸದಸ್ಯರ ಸಂಚಾಲಕ ಮಂಡಳಿಯನ್ನು ರಚಿಸಲಾಯಿತು.
ಲಿಂಗಾಯತ ಸಂಘಟನೆಗಳ ಒಕ್ಕೂಟದಆಶ್ರಯದಲ್ಲಿ ವಿಶ್ವಗುರು, ಜಗಜ್ಯೋತಿ, ಕರ್ನಾಟಕದ ಸಂಸ್ಕೃತಿಕ ನಾಯಕ ಬಸವಣ್ಣನವರ ಜಯಂತಿ ಉತ್ಸವವನ್ನು ಆಚರಿಸುವ ಕುರಿತು ಎಲ್ಲ ವಿವಿಧ ಲಿಂಗಾಯತ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳ ಸಭೆಯನ್ನು ಕಳೆದ ದಿ. 24 ರಂದು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಕರೆಯಲಾಗಿತ್ತು ಈ ಸಭೆಯಲ್ಲಿಆಯ್ಕೆ ಮಾಡಲಾಗಿದೆ. ಈ ವರ್ಷದ ಬಸವ ಜಯಂತಿ ಉತ್ಸವವನ್ನು ಪ್ರತಿ ವರ್ಷದಂತೆ ಅತ್ಯಂತ ವಿಜೃಂಭಣೆಯಿಂದ, ಶ್ರದ್ಧಾ ಭಕ್ತಿಯಿಂದ ಆಚರಿಸುವ ಕುರಿತು ನರ್ಣಯವನ್ನು ಅಂಗೀಕರಿಸಲಾಯಿತು. ಈ ಸಭೆಯಲ್ಲಿ ಎಲ್ಲಾ ಲಿಂಗಾಯತ ಸಂಘಟನೆಗಳ ಒಕ್ಕೂಟದ ವತಿಯಿಂದ
ದಿ. ಎಪ್ರಿಲ 19 ರಂದು ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ನಗರದಾದ್ಯಂತ ಮುಂಜಾನೆ 9:00ಗೆ ಬೈಕ್‌ರಾಲಿಯನ್ನು ಆಯೋಜಿಸುವ ಕುರಿತು ನರ್ಣಯಿಸಲಾಯಿತು. ಜೊತೆಗೆ ಬಸವೇಶ್ವರ ವೃತ್ತದಲ್ಲಿ ಪ್ರತಿಷ್ಠಾಪಿಸಲಿರುವ 15 ಅಡಿ ಎತ್ತರದ ಬಸವಣ್ಣನವರ ಮೂರ್ತಿಯ ಭವ್ಯ ಮೆರವಣಿಗೆಯನ್ನು ಬಸವೇಶ್ವರ ಉದ್ಯಾನವನ, ಬಸವೇಶ್ವರ ಸರ್ಕಲ್ ಗೋವಾವೇಸ ವರೆಗೆ ಆಯೋಜಿಸಲು ತೀರ್ಮಾನಸಲಾಯಿತು. ಸಮಾಜದ ಎಲ್ಲ ಬಾಂಧವರಿಗೆ ಬಸವ ಜಯಂತಿಯಲ್ಲಿ ಪಾಲ್ಗೊಳ್ಳಲು ಅನುಕೂಲವಾಗುವಂತೆ ಈ ಸಲದ ಬಸವ ಜಯಂತಿ ಉತ್ಸವದ ಮೆರವಣಿಗೆ ಕಾರ್ಯಕ್ರಮವನ್ನು ರವಿವಾರ ದಿ. ಎಪ್ರೀಲ 26 ರಂದು ಸಾಯಂಕಾಲ ನಾಲ್ಕು ಗಂಟೆಗೆರಾಣಿಚೆನ್ನಮ್ಮ ವೃತ್ತದಿಂದ ಆಯೋಜಿಸಲು ತೀರ್ಮಾನಸಲಾಯಿತು.
ಕಾರ್ಯಕ್ರಮಗಳನ್ನು ಸುಲಭವಾಗಿ ನೆರವೇರಿಸುವ ಸಲುವಾಗಿ ವಿವಿಧ ಉಪ ಸಮೀತಿಗಳನ್ನು, ಹಣಕಾಸು ಸಮೀತಿ, ಪ್ರಚಾರ ಸಮೀತಿ, ಮೆರವಣಿಗೆ ಸಮೀತಿ, ಪ್ರಸಾದದಾಸೋಹ ಸಮೀತಿ, ಸಾರಿಗೆ ಸಂಪರ್ಕ ಸಮೀತಿ ಗಳನ್ನು ರಚಿಸಲಾಯಿತು. ಕೊನೆಯಲ್ಲಿ ಸಂಚಾಲಕ ಬಸವರಾಜ ರೊಟ್ಟಿ ಮಾತನಾಡಿ ಬಸವ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮಾಜದಎಲ್ಲ ಬಾಂಧವರ ಸಹಕಾರವನ್ನು ಕೋರಿದರು. ಈ ಸಭೆಯಲ್ಲಿ ಬೆಳಗಾವಿ ಮಹಾನಗರದಎಲ್ಲ ಲಿಂಗಾಯತ ಪರ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ನಗರಸೇವಕರು, ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು, ಲಿಂಗಾಯತ ಸಮಾಜದಗಣ್ಯರು ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 