ಬಸವಣ್ಣನವರ ವಿಚಾರಗಳಿಂದ ಬದಲಾವಣೆ ಸಾಧ್ಯ

ಲೋಕದರ್ಶನ ವರದಿ

ಖಾನಾಪೂರ 23: ಬಸವಣ್ಣನ ವಿಚಾರ ಧಾರೆಗಳಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ ಆ ದಿಸೆಯಲ್ಲಿ ಇತಿಹಾಸ ಬಲ್ಲವರು ಮಾತ್ರ ಇತಿಹಾಸ ಸೃಷ್ಠಿ ಸಬಲ್ಲರು ಎಂಬತೆ ಬಸವಣ್ಣನವರ ವತ್ತವ ಸಿದ್ದಾಂತಗಳಿಂದ ಸಮಾಜದಲ್ಲಿ ಬದಲಾವಣೆ ಗಾಳಿ ಬಿಸುತ್ತಿದ್ದು  ಇಂಥ ಶ್ರೇಷ್ಠ ವಿಚಾರ ಧಾರೆಗಳು ನಿತ್ಯವೂ ಜನರಿಗೆ ತಲುಪುವ ಕಾರ್ಯ ನಡೆಯಬೇಕಿದೆ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.

  ಅವರು ಶುಕ್ರವಾರ ದಿ, 21 ರಂದು ಹೆಬ್ಬಾಳದಲ್ಲಿ ನಡೆದ ಬಸವ ಉತ್ಸದಂಗವಾಗಿ ಏರ್ಪಡಿಸಿದ್ದ  ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತ ಬಸವ ಬುದ್ದ ಅಂಬೇಡ್ಕರರ ತತ್ವ ಸಿದ್ದಾಂತಗಳನ್ನು ಮೈ ಗೂಡಿಸಿಕೊಂಡು ಮೊದಲಿನಿಂದಲೂ ಅವರ ವಿಚಾರ ಧಾರೆಗಳನ್ನು ಪ್ರಚುರ ಪಡಿಸುವ ಕಾರ್ಯ ನಡೆಸುತ್ತಿದ್ದು ರಾಜಕೀಯಕ್ಕಿಂತ ಮೊದಲು ತಾವು ಸಮಾನತೆಯ ಸಂಕಲ್ಪಕ್ಕೆ ಹೆಚ್ಚು ಮಹತ್ವ ನೀಡುತ್ತಿದ್ದು ಇದರಿಂದ ರಾಜಕೀಯ ಜೀವನಕ್ಕೆ ಹೆಚ್ಚು ಮಹತ್ವ ನೀಡುವುದಿಲ್ಲ ಜಗದೊಳಗಿನ ಮೌಡ್ಯತೆ ಎಂಬ ಜಿಡ್ಡನ್ನು ಕಿತ್ತು ಹಾಕಿದಾಗ ಮಾತ್ರ ಬಸವಣ್ಣನವರ ಸಮಾನತೆಯ ಕನಸ್ಸು ಸಕಾರಗೊಳ್ಳುತ್ತದೆ ಹೆಬ್ಬಾಳದಲ್ಲಿ ಲಿಂಗವಂತ ಸಾಧನ ಕೇಂದ್ರಕ್ಕೆ  ಅಗತ್ಯವಿರುವ ಸೌಲಭ್ಯಗಳನ್ನು ನೀಡುವುದಾಗಿ ತಿಳಿಸಿದರು, ಯಮಕನಮರಡಿ ಕ್ಷೇತ್ರದಲ್ಲೆ ಇಂಥ ಕೇಂದ್ರದ ಅಗತ್ಯತೆ ಇರುವುದಾಗಿ ತಿಳಿಸಿದರು,

    ವೇದಿಕೆಯಲ್ಲಿದ್ದ ಬಸವ ಬೆಳವಿಯ ಬಸವ ದೇವರು ಮಾತನಾಡಿ ಅಂದು ಬಸವಣ್ಣನವರು ತಿಳಿಸಿದ ಹಲವಾರು ವಿಚಾರಗಳನ್ನು ಯಮಕನಮರಡಿ ಶಾಸಕರಾದ ಸತೀಶ ಜಾರಕಿಹೊಳಿಯವರು ಮಾನವ ಬಂಧುತ್ವ ವೇದಿಕೆಯಿಂದ ರಾಜ್ಯಾದ್ಯಂತ ಮೌಡ್ಯ ವೀರೋಧಿ ಕಾರ್ಯಕ್ರಮ ಹಮ್ಮಿಕೊಂಡಿ ಸಮಕಾಲಿನ ಬಸವ ಬುದ್ದ ಅಂಬೇಡ್ಕರರ ತತ್ವಾದರ್ಶಗಳ ಬಗ್ಗೆ ಸಮಾಜಕ್ಕೆ ತಿಳಿಸುತ್ತಿರುವ ಕಾರ್ಯ ವಿಶಿಷ್ಠವಾಗಿದೆ ಇಂಥವರು ಸಮಾಜಕ್ಕೆ ಮಾದರಿ ಮತ್ತು ಅಗತ್ಯ ಎಂದರು, ಇಂಥ ಕಾರ್ಯಗಳಿಂದ ಶರಣ ಸ್ವರಾಜ್ಯ ವಿಜೃಂಭಿಸುತಿದೆ ಎಂದರು.

ವೇದಿಕೆಯಲ್ಲಿ ಮಲ್ಲಿಕಾರ್ಜುನ  ಸ್ವಾಮಿಗಳು ಜನವಾಡ, ಸೇರಿದಂತೆ ವಿವಿಧ ಮಹಾಸ್ವಾಮಿಗಳು ಉಪಸ್ಥಿತರಿದ್ದರು,

   ವೇದಿಕೆಯಲ್ಲಿ ಸಾಹಿತಿ ಎಸ್,ವಾಯ್,ಹಂಜಿ ಮಾತನಾಡಿ ಪ್ರವಾಹ ಪಿಡಿತವಾದ ಈ ಪ್ರದೇಶದಲ್ಲಿ ಸುಮಾರು 30 ಲಕ್ಷಗಳಷ್ಟು ಸಹಾಯಧನ ನೀಡಿದ್ದ ಕಾರ್ಯ ಶ್ಲಾಘನೀಯ ಎಂದರು,

ಸಮಾರಂಭದ ನೇತೃತ್ವ ವಹಿಸಿದ್ದ ವೈದ್ಯ ಬಸವರಾಜ ಪಂಡಿತರು ಸ್ವಾಗತಿಸಿ ಪ್ರಾಸ್ತಾವಿಕವಾ ಮಾತನಾಡಿದರು, ಜಿ,ಪಂ. ಉಪಾಧ್ಯಕ್ಷ ಅರುಣ ಕಾಟಾಂಬಳೆ, ಅವರವಿಂದ ಪರುಶೇಟ್ಟಿ, ತಾ,ಪಂ,ಸದಸ್ಯ ದಸ್ತಗೀರ ಬಸ್ಸಾಪೂರೆ, ಸಿದ್ದು ಸುಣಗಾರ, ಡಿ.ಎ.ಜರಳಿ, ಸಂತೋಷ ಮುಡಸಿ, ಅರುಣ ಕಿಲ್ಲೆದಾರ, ಗಜಾನನ ಕೊಳ್ಳಿ ಸಿದ್ದು ಪಟ್ಟಣ್ಣ ದೀಲಿಪ ಹೊಸಮನಿ, ಭರಮಗೌಡಾ ಪಾಟೀಲ, ಹನಮಂತ ದಾನಶೆಟ್ಟಿ, ಮಹೇಶ ಹಟ್ಟಿಹೊಳಿ, ರಾಜು ನಾಶಿಪುಡಿ, ಮಹಾಂತೇಶ ಮಗದುಮ್ಮ, ನಿಂಗನಗೌಡಾ ಪಾಟೀಲ, ಸತ್ಯಪ್ಪಾ ಚೌಗಲಾ, ರವಿ ಜಿಂಡ್ರಾಳಿ, ವ್ಹಿ,ಬಿ,ಬಿಸಿರೊಟ್ಟ. ಮುಂತಾದವರು ಉಪಸ್ಥಿತರಿದ್ದರು.