ಸರ್ವರ ಒಳಿಗಾಗಿ ಅಧ್ಯಾತ್ಮದ ಅರಿವು ಮೂಡಿಸಿದ ಬಸವಲಿಂಗೇಶ್ವರ ಶ್ರೀಗಳು
Basavalingeshwara Sri, who spread spiritual awareness for the benefit of all
ಸರ್ವರ ಒಳಿಗಾಗಿ ಅಧ್ಯಾತ್ಮದ ಅರಿವು ಮೂಡಿಸಿದ ಬಸವಲಿಂಗೇಶ್ವರ ಶ್ರೀಗಳು
ಯಲಬುರ್ಗಾ 02 : ಹಬ್ಬ, ಹರಿದಿನಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿ, ಭಾವೈಕ್ಯತೆಗೆ ಸಾಕ್ಷಿಯಾಗಿವೆ ಎಂದು ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಶ್ರಾವಣ ಮಾಸದ ಪ್ರಯುಕ್ತ ಪಟ್ಟಣದ ಶ್ರೀಧರ ಮುರಡಿ ಹಿರೇಮಠದಲ್ಲಿ ಹಮ್ಮಿಕೊಂಡಿದ್ದ ಕಲಬುರ್ಗಿ ಶ್ರೀ ಶರಣಬಸವೇಶ್ವರ ಪುರಾಣ ಮಹಾಮಂಗಲೋತ್ಸವದಲ್ಲಿ ಸೋಮವಾರ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.ಕಲಬುರ್ಗಿ ಶರಣಬಸವೇಶ್ವರರ ಪುರಾಣ ಕೇಳುವುದು ಹಾಗೂ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ ಲಭಿಸುತ್ತದೆ.ಶ್ರೀಧರಮುರಡಿ ಹಿರೇಮಠದಲ್ಲಿಒಂದು ತಿಂಗಳ ನಿರಂತರ ಪುರಾಣ ಪ್ರವಚನ ಮೂಲಕ ಭಕ್ತರಿಗೆಅಧ್ಯಾತ್ಮದಅರಿವು ಉಣಬಡಿಸಿರುವುದು ಹೆಮ್ಮೆಯ ಸಂಗತಿ.ಸರ್ವರ ಒಳಿಗಾಗಿ ಬಸವಲಿಂಗೇಶ್ವರ ಶ್ರೀಗಳು ಶ್ರಮಿಸುತ್ತಿದ್ದಾರೆಎಂದರು.
ಶ್ರೀಮಠದಲ್ಲಿ ಬೆಳಗ್ಗೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.ಎತ್ತಿನಚಕ್ಕಡಿಯಲ್ಲಿ ಬಸವಲಿಂಗೇಶ್ವರ ಸ್ವಾಮೀಜಿ, ಜಿಗೇರಿಯ ಗುರುಸಿದ್ದೇಶ್ವರ ಸ್ವಾಮೀಜಿ, ಬೇನಾಳದ ಸದಾಶಿವ ಶ್ರೀಗಳ ಭವ್ಯ ಮೆರವಣಿಗೆ ನಡೆಯಿತು.ಮೆರವಣಿಗೆಯಲ್ಲಿತಾಲೂಕಿನ ನಾನಾ ಗ್ರಾಮಗಳ ಭಜನಾ ಮಂಡಳಿಗಳು, ಬ್ಯಾಂಜೊಮೇಳ ಇನ್ನಿತರ ಕಲಾ ತಂಡಗಳು ಭಾಗವಹಿಸಿದ್ದವು.ಮಹಿಳೆಯರಿಂದ ಕುಂಭ ಕಳಸ, ಹಾಗೂ ವಿವಿಧ ವಾದ್ಯ ಮೇಳ ಮೆರವಣಿಗೆಯ ಮೆರುಗು ಹೆಚ್ಚಿಸಿದವು.ನಂತರ ಬಂದಂತ ಭಕ್ತರಿಗೆಅನ್ನಸಂತರೆ್ಣಜರುಗಿತು. ಈ ವೇಳೆ ದಿವ್ಯ ಸಾನಿಧ್ಯವನ್ನು ಮಸೂತಿಜಗದೀಶ್ವರ ಹಿರೇಮಠದ ಶ್ರೀ ಷ ಬ್ರ ಪ್ರಭುಕುಮಾರ್ ಶಿವಾಚಾರ್ಯ ಮಹಾಸ್ವಾಮಿಗಳು, ಗುಳೇದಗುಡ್ಡ ಒಪ್ಪತೇಶ್ವರಮಠದ ಶ್ರೀ ಮು ನಿ ಪ್ರಅಭಿನವಒಪ್ಪತೇಶ್ವರ ಸ್ವಾಮೀಜಿಗಳು, ಇಟಗಿ ಶ್ರೀ ಷ ಬ್ರ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು, ಪ್ರಮುಖರಾದ ವೀರಣ್ಣ ಹುಬ್ಬಳ್ಳಿ, ಬಸವಲಿಂಗಪ್ಪ ಸ್ಟಾಂಪಿನ, ಶಿವುಕುಮಾರ್ ಭೂತೆ, ಈಶಪ್ಪ ಸ್ಟಾಂಪಿನ, ಅಮರೇಶ ಹುಬ್ಬಳ್ಳಿ, ಕಳಕಪ್ಪ ತಳವಾರ, ಬಸಲಿಂಗಪ್ಪಕೊತ್ತಲ, ಅಡವಯ್ಯಕಲ್ಯಾಣಮಠ, ಮಹೇಶ ಹುಬ್ಬಳ್ಳಿ, ಮಲ್ಲಪ್ಪ ಭೂತೆ, ಈಶಪ್ಪ ಬನ್ನಿಕೊಪ್ಪ, ಬಸವರಾಜ ಕೊಳ್ಳಿ, ಮುತ್ತು ಬಂಡಿ, ಶರಣಪ್ಪ ದಿವಟರ್, ಉಮೇಶ ಕುಂಬಾರ, ಮಲ್ಲಪ್ಪ ಗದ್ದಿ, ಮಹಾಂತೇಶ ಭಾಸ್ಕರ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 