ಬಸವ ಸಿದ್ಧಾಂತ ಸಾರ್ವಕಾಲಿಕ ಶ್ರೇಷ್ಠ: ಶಾಸಕ ಕಟಕದೊಂಡ

ಬಸವ ಸಿದ್ಧಾಂತ ಸಾರ್ವಕಾಲಿಕ ಶ್ರೇಷ್ಠ: ಶಾಸಕ ಕಟಕದೊಂಡ Basava Siddhanta is the greatest of all time: MLA Katakadonda

ಬಸವೇಶ್ವರ ಭವನದ 4 ನೇ ವಾರ್ಷಿಕೋತ್ಸವ ಸಮಾರಂಭ: ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ  

ವಿಜಯಪುರ 25: ಬಸವಣ್ಣನವರ ತತ್ವ, ಸಿದ್ಧಾಂತಗಳು ಸಾರ್ವಕಾಲಿಕ ಪ್ರಸ್ತುತದಲ್ಲಿವೆ. ಜಗಕ್ಕೆ ನೀಡಿದ ಕಾಯಕ ತತ್ವದ ಮಹತ್ವ ಅತ್ಯಂತ ಶ್ರೇಷ್ಠತೆಯ ಶ್ರೇಣಿಯಲ್ಲಿ ಮಿನುಗಿವೆ ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕದೊಂಡ ಹೇಳಿದರು.      

ಭಾನುವಾರ ವಿಜಯಪುರ ನಗರದ ಶುಭಮಸ್ತು ಕಾಲೋನಿಯಲ್ಲಿ ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಬಸವೇಶ್ವರ ಭವನದ ನಾಲ್ಕನೇ ವಾಷಿ9ಕೋತ್ಸವ ಸಮಾರಂಭ ಹಾಗೂ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕ ಪವಿತ್ತತೆಯ ದಾರಿಮಾರ್ಗವನ್ನು ಸಮಾಜಕ್ಕೆ ಬಸವಣ್ಣನವರು ತೋರಿಸಿದ್ದಾರೆ ಎಂದರು.  ಕಾಯಕ ಜೀವ ಬಸವಣ್ಣನವರು ಸಕಲರಿಗೂ ಮಾದರಿಯಾಗಿದ್ದಾರೆ. ಅವರು ಏನು ಹೇಳುತ್ತಿದ್ದರೋ ಅದನ್ನೇ ಮಾಡಿದ್ದಾರೆ. ನುಡಿದಂತೆ ನಡೆದಿರುವ ಬಸವಣ್ಣನ ಚಿಂತನೆಗಳು ಅನುಪಮವಾಗಿವೆ.ಸಮಾಜಕ್ಕೆ ಅತ್ಯಂತ ಸರಳ ರೀತಿಯಲ್ಲಿ  ಕಾಯಕವೇ ಕೈಲಾಸ ಎಂಬುದನ್ನು ಮನವರಿಕೆ ಮಾಡಿಕೊಟ್ಟ ಅದ್ಭುತ ಮಹಾನ ಚೇತನರಾಗಿದ್ದಾರೆ ಎಂದರು.         

ಬಸವಣ್ಣನವರ ಭಾವಾಧಾರದ ಮೇಲೆ ಇಲ್ಲಿ ಬಸವೇಶ್ವರ ಭವನ ನಿಮಿ9ಸಿದ್ದು, ಭವನದ ನಾಲ್ಕನೇ ವಾರ್ಷಿಕೋತ್ಸವ ಅಂಗವಾಗಿ ರಕ್ತದಾನ, ಆರೋಗ್ಯ ತಪಾಸಣೆ ಶಿಬಿರವನ್ನು ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯವರು ಕೈಗೊಂಡಿದ್ದು ಶ್ಲಾಘನೀಯವಾಗಿದೆ. ಸಂಸ್ಥೆಯ ಸಮಾಜಮುಖಿ ಸೇವಾ ಕಾರ್ಯ ಮಾದರಿಯಾಗಿದೆ. ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯವರು ಕೇವಲ ಹಣಕಾಸಿನ ವ್ಯವಹಾರಗಳಿಗೆ ಸೀಮಿತವಾಗದೇ ಸಾಮಾಜಿಕ ಹೊಣೆಗಾರಿಕೆಯಿಂದ ಜನೋಪಯೋಗಿ ಇಂಥ ಆದರ್ಶಪ್ರಾಯ ಕೆಲಸವನ್ನು ಮಾಡುತ್ತಿರುವುದು ಅದರಣೀಯವಾಗಿದೆ. ಈ ಸುಂದರ ಸುಸಜ್ಜಿತ ರೂಪದ ಬಸವೇಶ್ವರ ಭವನ ತಮ್ಮ ಮತಕ್ಷೇತ್ರ ವ್ಯಾಪ್ತಿಯಲ್ಲಿರುವುದು ಮತ್ತಿಷ್ಟು ತಮಗೆ ಸಂತಸ ತಂದಿದೆ ಎಂದು ಶಾಸಕರು ನುಡಿದರು.       

ಬಸವಣ್ಣನವರ ಜಿಲ್ಲೆಯಲ್ಲಿ ಸಿದ್ದೇಶ್ವರ ಪೂಜ್ಯರು ನಡೆದಾಡಿದ್ದಾರೆ. ಸರಳ ಸಂತರಾಗಿ ನಡೆದಾಡುವ ದೇವರೆಂದು ಪೂಜ್ಯನೀಯ ಭಾವ ಪಡೆದಿದ್ದಾರೆ. ಸಿದ್ದೇಶ್ವರ ಶ್ರೀಗಳು ಬಸವಣ್ಣನವರ ಪ್ರತಿರೂಪವಾಗಿ ಕಂಡಿದ್ದಾರೆ. ಅವರ ಸರಳತೆಯ ನಿಷ್ಕಲ್ಮಶ ನುಡಿಭಾವಗಳು ಜನಮನದಲ್ಲಿ ಸದಾ ನೆಲೆಗೊಂಡಿವೆ. ಇಂಥ ಮಹಿಮಾಮಹಿ ಪುಣ್ಯ ಜೀವಗಳ ಕರ್ಮಭೂಮಿಯಲ್ಲಿ ನಾವುಗಳು ಜನ್ಮ ತೆಳೆದಿರುವುದೇ ಒಂದು ಪುಣ್ಯ ಸೌಭಾಗ್ಯ. ಬಸವಣ್ಣನವರ, ಸಿದ್ದೇಶ್ವರ ದೇವರ ಕೃಪಾ ಭಾವ ನಮ್ಮೆಲ್ಲರ ಮೇಲಿದೆ. ಅವರು ಹಾಕಿಕೊಟ್ಟ ದಾರಿಯಲ್ಲಿ, ತೋರಿದ ಮಾರ್ಗದಲ್ಲಿ ನಾವುಗಳು ನಡೆದುಕೊಂಡರೆ ನಮ್ಮ ಜೀವನ ಪಾವನಮಯ ಎಂದರು.          

ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದ ಡಿ.ವೈ.ಎಸ್‌.ಪಿ. ಬಸವರಾಜ ಯಲಗಾರ ಮಾತನಾಡಿ, ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯ ಕಾರ್ಯ ವಿಭಿನ್ನತೆವಾಗಿದೆ. ಸರಕಾರದಿಂದ ಯಾವುದೇ ರೀತಿಯ ಆಗಾಯ,ಅನುದಾನ ಪಡೆಯದೆ ಇಲ್ಲಿ ಭವ್ಯ ಭವನ ಬಸವೇಶ್ವರ ಹೆಸರಿನಲ್ಲಿ ನಿರ್ಮಿಸಿದ್ದು ಪ್ರಶಂಸೆಗೆ ಪಾತ್ರವಾಗಿದೆ. ಸಂಸ್ಥೆಯ ಸಮಾಜಪರ ಕಾಯಕ ತತ್ಪರತೆ ಅನುಕರಣೀಯವಾಗಿದೆ. ಸಮಾಜಕ್ಕೆ ಇಂಥ ಸದುದ್ಧೇಶ ತಿಳಿಯಬೇಕು. ಸಹಕಾರಿ ಸಂಘದ ಬಸವ ಶ್ರೀ ವಿವಿಧೋದ್ದೇಶ ಸಂಸ್ಥೆಯವರು ಮಂಗಲ ಭವನ ವಾಷಿ9ಕೋತ್ಸವ ಕೈಂಕರ್ಯದ ಜೊತೆಗೆ ಆರೋಗ್ಯಕಾಳಜಿಯು ಹೊಂದಿದ್ದಾರೆ. ಸಾಮಾಜಿಕ ಕಾರ್ಯಗಳಿಗೆ ಸ್ಪಂದಿಸಿ ಕೈಗೊಂಡ ಸಮಾಜಪರ ಪೂರಕ ಈ  ಕಾರ್ಯ ನಿಜಕ್ಕೂ ಮಾದರಿಯಾಗಿದೆ ಎಂದರು.       

ಬಸವಶ್ರೀ ವಿವಿಧೋದ್ದೇಶ ಸಂಸ್ಥೆ ಅಧ್ಯಕ್ಷ ಡಿ.ಆಯ್‌.ಬೆನಕನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ರಾಜಕೀಯ ಧುರೀಣ ಎಂ.ಆರ್‌.ಪಾಟೀಲ, ಸಹಾಯಕ ಅಭಿಯಂತರ ರಾಮನಗೌಡ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಂಪತಕುಮಾರ ಗುಣಾರಿ, ಮಹಾನಗರ ಪಾಲಿಕೆ ಕಾಪೋರೇಟರ್ ಪ್ರೇಮಾನಂದ ಬಿರಾದಾರ ಇತರರಿದ್ದರು.         

ಬಸವಶ್ರೀ ವಿವಿಧೋದ್ದೇಶ ಸಂಸ್ಥೆಯ ಉಪಾಧ್ಯಕ್ಷ ನಂದಕುಮಾರ ಗೊಬ್ಬೂರ,ಕಾರ್ಯದರ್ಶಿ ರಾಮನಗೌಡ ಪಾಟೀಲ, ನಿರ್ದೆಶಕ ಮಂಡಳಿ ಸದಸ್ಯರಾದ ಕಲ್ಲನಗೌಡ ಬಿರಾದಾರ, ಕಾರ್ತಿಕ ಚಿಂಚಲಿ, ಗುರುರಾಜ ಕುಲಕರ್ಣಿ, ಸಿದ್ಗನಗೌಡ ಬಿರಾದಾರ, ಭೀಮನಗೌಡ ಪಾಟೀಲ, ಶ್ರೀಧರ ಚಿಂಚಲಿ, ಸಿದ್ದೇಶ್ವರ ಸಂಸ್ಥೆಯ ನಿದೇಶಕ, ಧಾರ್ಮಿಕ ಸಮಿತಿ ಅಧ್ಯಕ್ಷ ಸುಧೀರ ಚಿಂಚಲಿ ಇತರರು ವೇದಿಕೆಯಲ್ಲಿದ್ದರು.  ಸಮಾರಂಭದಲ್ಲಿ ಭಾಗಿಯಾಗಿದ್ದ ಶಾಸಕ ವಿಠ್ಠಲ ಕಟಕದೊಂಡ, ಸಾಹಿತಿಗಳಾದ ಡಿ.ವಾಯ್‌.ಎಸ್‌.ಪಿ.ಬಸವರಾಜ ಯಲಗಾರ, ರಾಜಕೀಯ ಮುಖಂಡ ಎಮ್‌.ಆರ್‌.ಪಾಟೀಲ ಸೇರಿದಂತೆ ಅನೇಕ ಮಹನೀಯರಿಗೆ ಫಲಪುಷ್ಪನೀಡಿ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.       

ರಕ್ತದಾನ ಶಿಬಿರದಲ್ಲಿ 21 ಜನರು ರಕ್ತದಾನ ಮಾಡಿದರೆ ನೂರಾರು ಸಂಖ್ಯೆಯಲ್ಲಿ ಜನತೆ ಆರೋಗ್ಯ ತಪಾಸಣೆ ಶಿಬಿರದ ಸದುಪಯೋಗ ಪಡಿಸಿಕೊಂಡರು.  ಪ್ರಾರ್ಥನೆ ಗೀತೆಯನ್ನು ಕುಮಾರಿ ಭೂಮಿಕಾ ಚಿಂಚಲಿ, ಈಶ್ವರಿ ಚಿಂಚಲಿ, ಸೌಂದರ್ಯ ಪಾಟೀಲ, ಸಾನ್ವಿ ಬಿರಾದಾರ ಸುಶ್ರಾವ್ಯವಾಗಿ ಹೇಳಿದರು. ಆಲಮಟ್ಟಿ ಆರಿ​‍್ಬ.ಪಿ.ಜಿ.ಹಳಕಟ್ಟಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಜಿ.ಎಂ.ಕೋಟ್ಯಾಳ ಅಚ್ಚುಕಟ್ಟಾಗಿ ಕಾರ್ಯಕ್ರಮ ಸ್ವಾಗತದೊಂದಿಗೆ ನಿರೂಪಿಸಿ ವಂದಿಸಿದರು.