ಸೆ. 1ರಂದು ಬಸವ ಸಂಸ್ಕೃತಿ ಅಭಿಯಾನ
Basava Culture Campaign on Sept. 1
ಸಿಂದಗಿ 26: ಸಪ್ಟೆಂಬರ್ 1ರಂದು ಬಸವನಬಾಗೇವಾಡಿಯಲ್ಲಿ ಸಾಂಸ್ಕೃತಿಕ ನಾಯಕ ಸ್ತ್ರೀ, ಪಥಿತ, ದೀನ-ದಲಿತ ಕುಲೋದ್ಧಾರಕ, ಇಷ್ಟಲಿಂಗ ಜನಕ, ಲಿಂಗಾಯತ ಧರ್ಮಗುರು, ವಿಶ್ವದ ಮೊದಲ ಪ್ರಜಾಪ್ರಭುತ್ವದ ಜನಕ, ಜಗಜ್ಯೋತಿ ಬಸವಣ್ಣನವರ ಬಸವ ಸಂಸ್ಕೃತಿ ಅಭಿಯಾನವನ್ನು ಲಿಂಗಾಯತ ಪೀಠಾಧೀಪತಿಗಳ ಒಕ್ಕೂಟ ಹಾಗೂ ಬಸವ ಪರ ಎಲ್ಲಾ ಸಂಘಟನೆಗಳಿಂದ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಈ ಅವಿಸ್ಮರಣೀಯ ಮತ್ತು ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಸವ ಕೃಪೆಗೆ ಪಾತ್ರರಾಗಬೇಕೆಂದು ವಿಜಯಪುರ ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಎಲ್ಲಾ ಬಸವಪರ ಸಂಘಟನೆಗಳ ಪರವಾಗಿ ಅಂಬಿಕಾ ಪಾಟೀಲ ಮಾರ್ಸನಳ್ಳಿ ವಿನಂತಿಸಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸಲು ಇಚ್ಛಿಸುವ ಸರ್ವರು, ಮಹಿಳೆಯರು- ಇಳಕಲ ಸೀರೆಯನ್ನು ಧರಿಸಬೇಕು. ಪುರುಷರು-ನೆಹರು ಶರ್ಟ, ಗಾಂಧಿ ಟೊಪ್ಪಿಗೆ, ಬಿಳಿ ಲುಂಗಿ/ಪೈಜಾಮಾ ಅಥವಾ ಧೋತಿಯನ್ನು ಧರಸಿ ಬರಬೇಕು. ಈ ಮೇಲೆ ತಿಳಿಸಿದ ಉಡುಗೆಳನ್ನು ಧರಿಸಿ ಸಾಂಸ್ಕೃತಿಕ ಅಭಿಯಾನಕ್ಕೆ ಶೋಭೆ ತರಬೇಕೆಂದು ಅಲ್ಲದೆ ದಿ. 27 ಮತ್ತು 28ರ ಒಳಗಾಗಿ ತಮ್ಮ ಮಾಹಿತಿಯನ್ನು ನೀಡಿ ಸ್ಥಳ ಕಾಯ್ದಿರಿಸಿಕೊಳ್ಳಬೇಕು. ಮಾಹಿತಿಗೆ 7795344023 ಸಂಪರ್ಕಿಸುವಂತೆ ಕೋರಿದ್ದಾರೆ.
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ 