ಬಂಜಾರ: ವೈವಿಧ್ಯ ಸಂಸ್ಕೃತಿಯ ಜನಾಂಗ

ಬಂಜಾರ: ವೈವಿಧ್ಯ ಸಂಸ್ಕೃತಿಯ ಜನಾಂಗ  Banjara: A nation of diverse culture

ಹೂವಿನಹಡಗಲಿ: 27- ಆಚಾರ ವಿಚಾರಗಳಲ್ಲಿ ವಿಶಿಷ್ಟತೆ, ಹಾಡು,ನೃತ್ಯ ಉಡುಗೆ ತೊಡುಗೆಗಳಲ್ಲಿ ಅನನ್ಯತೆಯನ್ನು ಹೊಂದಿರುವ ಬಂಜಾರ ಜನಾಂಗವು ವೈವಿಧ್ಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಾಹಿತಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷ ಎಲ್‌.ಮಧುನಾಯ್ಕ ಅಭಿಪ್ರಾಯಪಟ್ಟರು. ಕನ್ನಡ ಸಾಹಿತ್ಯ ಪರಿಷತ್ತು ಇಟ್ಟಿಗಿ ಹೋಬಳಿ ಘಟಕ ಹಾಗೂ ತಾಲೂಕು ಘಟಕ ತಾಲೂಕಿನ ಇಟ್ಟಿಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆಯೋಜಿಸಿದ್ದ   ಶ್ರೀಮತಿ ಉಮ್ಲಿಬಾಯಿ ಥಾವರ್ಯನಾಯ್ಕ ಸ್ಮಾರಕ ದತ್ತಿ,ಶ್ರೀಮತಿ ಕೌಸಲ್ಯಾಬಾಯಿ ದೇವೇಂದ್ರನಾಯ್ಕ  ಪ್ರದೀಪ ಪಲ್ಲವಿ ದತ್ತಿ ಹಾಗೂ ಶ್ರೀಮತಿ ಲಕ್ಷ್ಮಿಬಾಯಿ ಪುರುಷೋತ್ತಮ ರೆಡ್ಡಿ ಸ್ಮಾರಕ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಬಂಜಾರ ಸಂಸ್ಕೃತಿ ಹಾಗೂ ಬಂಜಾರ ಜಾನಪದ ಸಿರಿ’ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಬಂಜಾರರು ವಿಶ್ವದ 144 ದೇಶದ ತಾಂಡಾಗಳಲ್ಲಿ ಹೆಚ್ಚಾಗಿ ವಾಸವಾಗಿದ್ದು ಅವರ ಮೂಲ ಭಾಷೆಯನ್ನು ಮಾತನಾಡುವ ಮೂಲಕ ಗುರುತಿಸಲ್ಪಡುತ್ತಾರೆ. ಸಂಸ್ಥೆಯ ಪ್ರಭಾರಿ ಪ್ರಾಚಾರ್ಯ ಉಮೇಶ್ ಕಾರ್ಯಕ್ರಮ ಉದ್ಘಾಟಿಸಿ ಕಸಾಪ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಮೂಡಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು. ವಿದ್ಯಾರ್ಥಿನಿಯರಾದ ಪ್ರಕೃತಿ, ರಕ್ಷಿತಾ,ಕಾವ್ಯ ಕವನ ವಾಚಿಸಿದರು. ನಿವೃತ್ತ ಉಪ ಪ್ರಾಚಾರ್ಯ ಕೆ.ಎನ್‌. ಚಂದ್ರಗೌಡ, ವಸತಿ ಶಾಲೆಯ ಶಿಕ್ಷಕ ಸಿಬ್ಬಂದಿ ಇದ್ದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಇಟ್ಟಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ.ವಿನಯರಾಜ ಆಚಾರ್ಯ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ಆರಂಭವಾದ ರೀತಿ ಗುರಿ, ಉದ್ದೇಶಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿ ಕವಿತಾ ಸ್ವಾಗತಿಸಿದರು. ಶಿಕ್ಷಕ ಉಮಾಪತಿ ವಂದಿಸಿದರು. ಕನ್ನಡ ಶಿಕ್ಷಕ ಚಂದ್ರಾನಾಯ್ಕ್‌ ಕಾರ್ಯಕ್ರಮ ನಿರೂಪಿಸಿದರು.