ಢಾಕಾ, ಏ 12,ಬಾಂಗ್ಲಾದೇಶದ ವೇಗದ ಬೌಲರ್ ಮೊಹಮ್ಮದ್ ಶರಿಫ್ ಕ್ರಿಕೆಟ್ ನ ಎಲ್ಲ ಮಾದರಿಗಳಿಗೂ ವಿದಾಯ ಹೇಳಿದ್ದಾರೆ. 2001ರಿಂದ 2007ರವರೆಗೆ ಬಾಂಗ್ಲಾದೇಶವನ್ನು ಪ್ರತಿನಿಧಿಸಿದ್ದ ಅವರು, 10 ಟೆಸ್ಟ್ ಮತ್ತು 9 ಏಕದಿನ ಪಂದ್ಯಗಳನ್ನಾಡಿದ್ದಾರೆ.ಟೆಸ್ಟ್ ನಲ್ಲಿ 14 ಮತ್ತು ಏಕದಿನದಲ್ಲಿ 10 ವಿಕೆಟ್ ಸೇರಿದಂತೆ ಒಟ್ಟು 24 ಅಂತಾರಾಷ್ಟ್ರೀಯ ವಿಕೆಟ್ ಕಬಳಿಸಿರುವ ಶರಿಫ್, ದೇಶೀಯ ಕ್ರಿಕೆಟ್ ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಅದರಲ್ಲೂ ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 393 ಮತ್ತು ಲಿಸ್ಟ್ ಎ ಕ್ರಿಕೆಟ್ ನಲ್ಲಿ 185 ವಿಕೆಟ್ ಉರುಳಿಸಿದ್ದಾರೆ. ನಾನು ಎಲ್ಲ ರೀತಿಯ ಕ್ರಿಕೆಟ್ ನಿಂದ ಹೊರಗುಳಿಯಲು ತೀರ್ಮಾನಿಸಿದ್ದೇನೆ. ಆದರೂ ನಾನು ಇನ್ನೂ ಎರಡು ವರ್ಷಗಳ ಕಾಲ ಆಡಬಹುದೆಂದು ಭಾವಿಸಿದ್ದೇನೆ, ಎಂದು ಶರಿಫೀರ್ ಕ್ರಿಕ್ ಬಜ್ ಗೆ ಹೇಳಿದ್ದಾರೆ. ಇದೇ ವೇಳೆ ಈ ಸುದೀರ್ಘ ಪ್ರಯಾಣದ ಸಮಯದಲ್ಲಿ ತಾವು ಸಂಗ್ರಹಿಸಿದ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಬಿಸಿಬಿಯೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.