ಢಾಕ, ಫೆ.11, ದೋಣಿ ಮಗುಚಿ 15 ಮಂದಿ ರೋಹಿಂಗ್ಯನ್ನರು ಸಾವನ್ನಪ್ಪಿ, ಇತರ 40 ಮಂದಿ ಕಾಣೆಯಾಗಿರುವ ಘಟನೆ ಬಂಗಾಳ ಕೊಲ್ಲಿಯ ಕಾಕ್ಸ್ ಬಜಾರ್‌ನ ಟೆಂಕಫ್ ಉಪ ಜಿಲ್ಲಾದಲ್ಲಿ ನಡೆದಿದೆ.ಸೇಂಟ್ ಮಾರ್ಟಿನ್ಸ್ ದ್ವೀಪದ ಚೆರಾಡಿಪ್‌ನಲ್ಲಿರುವ ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ಸೋಮವಾರ ಮಧ್ಯರಾತ್ರಿ ಅವರು ಅಕ್ರಮವಾಗಿ ಮಲೇಷ್ಯಾಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.ಬಾಂಗ್ಲಾದೇಶ ಕೋಸ್ಟ್ ಗಾರ್ಡ್‌ನ ಸೇಂಟ್ ಮಾರ್ಟಿನ್ ಸ್ಟೇಷನ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ನಯೀಮ್ ಉಲ್ ಹಕ್ ಸಾವಿನ ಅಂಕಿಅಂಶಗಳನ್ನು ಯುಎನ್‌ಐಗೆ ದೃಢಪಡಿಸಿದ್ದಾರೆ.ಘಟನೆಯಲ್ಲಿ ಅರವತ್ತೆರಡು ರೋಹಿಂಗ್ಯಾಗಳನ್ನು ಸಹ ರಕ್ಷಿಸಲಾಗಿದೆ ಎಂದು ಅವರು ಹೇಳಿದರು.