ನವದೆಹಲಿ, ಮೇ 25, ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಹಾಗೂ ತೆರಳಬೇಕಿದ್ದ ಒಟ್ಟು 80 ವಿಮಾನಗಳು ವಿವಿಧ ಕಾರಣಗಳಿಂದಾಗಿ ಸೋಮವಾರ ರದ್ದಾಗಿವೆ.ರಾಜ್ಯ ಸರ್ಕಾರಗಳು ನಿರ್ಬಂಧ, ವಿಮಾನ ನಿಲ್ದಾಣ ತೆರೆಯುವುದರಲ್ಲಿನ ಮುಂದೂಡಿಕೆ ಸೇರಿ ನಾನಾ ಕಾರಣಗಳಿಂದಾಗಿ ವಿಮಾನಗಳ ಸಂಚಾರ ರದ್ದಾಗಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಬೆಳಿಗ್ಗೆಯೇ 9 ವಿಮಾನ ಗಳ ಸಂಚಾರ ರದ್ದಾಗಿದೆ.
ಈ ಹಿಂದೆ ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಚೆನ್ನೈ ವಿಮಾನ ನಿಲ್ದಾಣಗಳಿಗೆ ತೆರಳಲು ಸಮಯ ನಿಗದಿ ಆಗಿತ್ತು. ಇದೆ 28ರಿಂದ ವಿಮಾನ ಸೇವೆ ಆರಂಭಿಸುವುದಕ್ಕೆ ಪಶ್ಚಿಮ ಬಂಗಾಲ ಸರ್ಕಾರ ತೀರ್ಮಾನಿಸಿದೆ ಅದೇ ರೀತಿ ಆಂಧ್ರಪ್ರದೇಶ ಇದೆ 26ರಿಂದ ಸಂಚಾರ ಆರಂಭಕ್ಕೆ ತೀರ್ಮಾನಿಸಿದೆ. ಮಹಾರಾಷ್ಟ್ರವು ವಿಮಾನ ಹಾರಾಟವನ್ನು 25 ಟೇಕಾಫ್ ಮತ್ತು 25 ಲ್ಯಾಂಡಿಂಗ್ಸ್ ಎಂದು ದಿನಕ್ಕೆ ಮಿತಿ ನಿಗದಿ ಮಾಡಿದೆ. ಮುಂಬೈ ವಿಮಾನ ನಿಲ್ದಾಣ ದೇಶದಲ್ಲೇ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಇದರಂತೆ ತಮಿಳುನಾಡು ಸರ್ಕಾರವು ಚೆನ್ನೈಗೆ ಬರುವ ವಿಮಾನಗಳ ಸಂಖ್ಯೆಯನ್ನು 25ಕ್ಕೆ ನಿಗದಿ ಮಾಡಿದೆ. ಇಂದಿನಿಂದ ವಿಮಾನ ಹಾರಾಟ ಸೇವೆ ಪುನರಾರಂಬಿಸಲು ಕೇಂದ್ರ ನಿರ್ಧಾರ ಮಾಡಿದರೂ ಭಾರೀ ಪ್ರಮಾಣದಲ್ಲಿ ಟಿಕೆಟ್ ರದ್ದಾಗಿದೆ ಇದರಜೊತೆಗೆ ಕೆಲ ರಾಜ್ಯಗಳು ವಿಮಾನ ಹಾರಾಟ ಸೇವೆಗೆ ಮಿತಿ ವಿಧಿಸಿತ್ತು ಮುಖ್ಯ ಕಾರಣವಾಗಿದೆ ಕರೋನ ಕಾರಣಕ್ಕೆ ಕಳದೆ ಮಾರ್ಚ್ 25ರಿಂದ ದೇಶಾದ್ಯಂತ ವಿಮಾನ ಹಾರಾಟ ಸೇವೆ ರದ್ದು ಪಡಿಸಲಾಗಿತ್ತು