ಬನಶಂಕರಿ ದೇವಿ ಜಾತ್ರಾ ಮಹೋತ್ಸವ

   ಬನಶಂಕರಿ ದೇವಿ ಜಾತ್ರಾ ಮಹೋತ್ಸವ Banashankari Devi Jatra Festival

ಲೋಕದರ್ಶನ ವರದಿ 

  ಬನಶಂಕರಿ ದೇವಿ ಜಾತ್ರಾ ಮಹೋತ್ಸವ 

ಯಮಕನಮರಡಿ  26: ಸಮೀಪದ ಆನಂದಪೂರ ಪುನರ್ವಸತಿ ಕೆಂದ್ರ ದಲ್ಲಿ      ದಯಾನಂದ ಪುರಿ ಮಹಾಸ್ವಾಮಿಗಳು ಗಾಯತ್ರೀ ಪೀಠ ಹಂಪಿ ಇವರ ಧಿವ್ಯ ಸಾನಿಧ್ಯದಲ್ಲಿ  ಸೋಮವಾರ ದಿ. 27 ರಂದು ಮುಂಜಾನೆ 6 ಗಂಟೆಗೆ ಚಂಡಿ ಹೋಮ ನಂತರ ಕುಂಬಮೇಳ ಹಾಗೂ ಮುಂಜಾನೆ 10 ಗಂಟೆಗೆ ಕಳಸ ಮೇರವಣಿಗೆ ಜರುಗುವುದು ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ ಮಂಗಳವಾರ ದಿ 28 ರಂದು ಮುಂಜಾನೆ 6 ಗಂಟೆಗೆ ನವಗ್ರಹ ಹೋಮ ನಂತರ 10 ಗಂಟೆಗೆ ಪೂಜ್ಯ   ಬನಶಂಕರಿ ದೇವಸ್ಥಾನ ಕಳಸಾರೋಹಣ ನಂತರ ಪೂಜ್ಯರಿಂದ ಆಶಿರ್ವಚನ ಕಾರ್ಯಕ್ರಮ 12 ಗಂಟೆಗೆ ಮಹಾಪ್ರಸಾದ ಸಾಯಂಕಾಲ 6 ಗಂಟೆಗೆ ಲಕ್ಷದೀಪೋತ್ಸವ ಸದರಿ ಕಾರ್ಯಕ್ರಮದ ಸಾನಿಧ್ಯವನ್ನು ಯಮಕನಮರಡಿ ಶೂನ್ಯ ಸಂಪಾಧನಾ ಹುಣಸಿಕೊಳ್ಳಮಠದ ಪೀಠಾಧ್ಯಕ್ಷರಾದ ಗುರು ರಾಚೋಟಿ ಮಹಾಸ್ವಾಮಿಗಳು ಹಾಗೂ ಮ,,ಪ್ರ ಗುರುಸಿದ್ದೇಶ್ವರ ಮಹಾಸ್ವಾಮಿಗಳು ಕಾರಿಮಠ ಹತ್ತರಗಿ  ಶಿವಾನಂದ ಮಹಾಸ್ವಾಮಿಗಳು ತಾವರಗೇರೆ(ದಾರವಾಡ)  ಶಿವಾನಂದ ಮಹಾಸ್ವಾಮಿಗಳು ಜ್ಞಾನಯೋಗಾಶ್ರಮ ಸಿದ್ದಾರೋಡ ಮಠ ರಕ್ಷಿ ಶೀರಗಾಂವ ಚಿಪ್ಪಲಕಟ್ಟಿ,   ನರಸಿಂಹ ಏಕನಾಥ (ಆನಂದ) ಮಹಾರಾಜ ಗೋಸಾವಿ ಹರಿಮಂದಿರ ಹತ್ತರಗಿ ಉಪಸ್ಥಿತರಿರುವರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಂದ್ರಕಾಂತ ಕಾಪಸಿ ದೇವಾಂಗ ಬನಶಂಕರಿ ದೇವಸ್ಥಾನ ಟ್ರಸ್ಟ ಕಮೀಟಿರವರು ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಲೋಕೊಪಯೋಗಿ ಸಚಿವರಾದ ಸತೀಶ ಅಣ್ಣಾ ಜಾರಕಿಹೋಳಿ, ಸಂಸದರಾದ ಪ್ರೀಯಾಂಕ ಜಾರಕಿಹೋಳಿ, ಅತಿಥಿಗಳಾಗಿ ಅಣ್ಣಾಸಾಹೇಬ ಜೋಲ್ಲೆ ಮಾಜಿ ಶಾಸಕ ಎಮ್ ಡಿ ಲಕ್ಷ್ಮೀ ನಾರಾಯಣ, ರವೀಂದ್ರ ಕಲಬುರ್ಗಿ, ಅಪ್ಪಾಸಾಹೇಬ ಶೀರಕೋಳಿ(ಸಂಕೆಶ್ವರ), ರವೀಂದ್ರ ಜಿಂಡ್ರಾಳಿ, ರವೀಂದ್ರ ಹಂಜಿ ಧುರಿಣರು ಯಮಕನಮರಡಿ, ಪರಶುರಾಮ ಡಗೆ ನೇಕಾರ ಮಹಾಮಂಡಳ ಬೆಂಗಳೂರು, ಗಜಾನನ ಗುಂಜೇರಿ ಜಿಲ್ಲಾಧ್ಯಕ್ಷರು ರಾಜ್ಯ ನೇಕಾರ ಸಮುದಾಯ ಹಾಗೂ ಹತ್ತರಗಿ ಆನಂದಪೂರ ಯಮಕನಮರಡಿಯ ದೇವಾಂಗ ಕುಬಾಂದವರು ಗ್ರಾಮಸ್ಥರು ಉಪಸ್ಥಿತರಿರುವರು.