ಆನ್ ಲೈನ್ ಬೆಟ್ಟಿಂಗ್ ತಡೆದದ್ದು ಸ್ವಾಗತಾರ್ಹ: ಯಂಕಂಚಿ
Ban on online betting is welcome: Yankanchi
ಆನ್ ಲೈನ್ ಬೆಟ್ಟಿಂಗ್ ತಡೆದದ್ದು ಸ್ವಾಗತಾರ್ಹ: ಯಂಕಂಚಿ
ದೇವರಹಿಪ್ಪರಗಿ 21:ಕೇಂದ್ರ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಆನ್ ಲೈನ್ ಗೇಮಿಂಗ್ ತಡೆಗಾಗಿ ತೆಗೆದುಕೊಂಡಿರುವ ಕ್ರಮ ಸ್ವಾಗತಾರ್ಹವಾಗಿದೆ ಎಂದು ಸಾಮಾಜಿಕ ಹೋರಾಟಗಾರರು ಹಾಗೂ ಬಿಜೆಪಿ ಮುಖಂಡರಾದ ವಿಠಲ.ಆರ್.ಯಂಕಂಚಿ ಹೇಳಿದ್ದಾರೆ. ಈ ಕುರಿತು ಗುರುವಾರದಂದು ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ದೇಶದ ಕೊಟ್ಯಾಂತರ ಜನರು ಇದರ ಹಿಂದೆ ಬಿದ್ದು ಸಂಪೂರ್ಣವಾಗಿ ಹಾಳಾಗಿದ್ದು ನಮ್ಮ ಕಣ್ಣು ಮುಂದಿನ ನಿದರ್ಶನವಾಗಿವೆ. ಇತ್ತಿಚೀನ ದಿನಗಳಲ್ಲಿ ಇದು ಹಳ್ಳಿ ಹಳ್ಳಿಗಳಿಗೂ ವ್ಯಾಪಿಸಿದ್ದು ಇದನ್ನು ನೀಯಂತ್ರಿಸಲು ಆಗದು ಏನ್ನುವ ಹಂತಕ್ಕೆ ಬಂದು ತಲುಪಿತ್ತು.ನಗರದ ಮತ್ತು ಹಳ್ಳಿಯ ಯುವಕರು ಜೀವನದಲ್ಲಿ ಬೇಗನೆ ಮೇಲಕ್ಕೆ ಬರಲು? ಆಡಂಬರದ ಜೀವನ ನಡೆಸಲು ?ಬಯಸಿದ್ದೆಲ್ಲವನ್ನು ಈಡೇರಿಸಿಕೊಳ್ಳುವ ಹಂಬಲದಿಂದ ಇದರ ದಾಸರಾಗಿ ಹೋಗಿದ್ದರು.ಅನೇಕ ಕುಟುಂಬಗಳು ಇದರಿಂದಾಗಿ ಆಸ್ತಿ ಪಾಸ್ತಿ ಕಳೆದುಕೊಂಡು ಬೀದಿಗೆ ಬಂದಿವೆ.ಊರೆಲ್ಲಾ ಕೊಳ್ಳೆ ಹೋಡೆದ ಮೇಲೆ ದೊಡ್ಡಿ ಬಾಗಿಲು ಮುಚ್ಚಿದಂತ್ತಾಗಿದೆ. ಸಾವಿರಾರು ಯುವಕರು ಇದರ ಹಿಂದೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.ಕಳೆದು ಹೊದದಂತ್ತು ಯಾರಿಂದಲೂ ತಂದು ಕೊಡಲು ಆಗುವುದಿಲ್ಲ. ಮುಂದಿನ ದಿನಗಳಾದರೂ ಇದರಿಂದ ಮುಕ್ತಿ ಸಿಗುವಂತೆ ಮಾಡಿದ್ದು ಬಹಳ ಸಂತೋಷದ ವಿಷಯವಾಗಿದೆ. ಇಂತಹ ಇನ್ನು ಹಲವಾರು ಆಪ್ ಗಳನ್ನು ನೀಯಂತ್ರಿಸದೇ ಹೊದರೆ ಯುವಕರು ಮುಂದಿನ ನಾಡಿನ ಪ್ರಜೆಯಾಗುವ ಬದಲು ನಾಡಿಗೆ ಹೊರೆಯಾಗುವುದರಲ್ಲಿ ಯಾವುದೆ ಸಂಶಯವಿಲ್ಲ. ಕೇಂದ್ರ ಸರಕಾರದ ಈ ನಡೆ ಬಹಳ ಪೋಷಕರಿಗೆ ಸಂತೋಷ ತಂದಿದೆ ಹಾಗೂ ನಮ್ಮ ಮೋದಿ ಸರಕಾರ ಇರುವವರೆಗೆ ಯಾವುದೆ ಅಂಜುವ ಶ್ರಿನ್ಛ್ದಿ್ದ್ಝೂ ವಾತಾವರಣ ಇರುವುದಿಲ್ಲ ಎಂದು ಹೆಮ್ಮೆಯಿಂದ ವಿಶ್ವಾಸದಿಂದ ಹೇಳುತ್ತೇವೆ.ಫೋಟೋ 21ಡಿಎಚಪಿ1
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 