ಜಿಲ್ಲೆಯಲ್ಲಿ ಬೋಟಿಂಗ್ ರಾಫ್ಟಿಂಗ್ ಗೆ ಇದ್ದ ನಿಷೇಧ ವಾಪಾಸ್ : ಗರಿಗೆದರಿದ ಪ್ರವಾಸೋದ್ಯಮ
Ban on boating and rafting in the district lifted
ಕಾರವಾರ 08: ಮಳೆಗಾಲದಲ್ಲಿ ಜಿಲ್ಲೆಯ ಸಮುದ್ರ, ನದಿಯಲ್ಲಿ ನಡೆಸುವ ಬೋಟಿಂಗ್ ರಾಫ್ಟಿಂಗ್ ಗೆ ಇದ್ದ ನಿಷೇಧವನ್ನು ಜಿಲ್ಲಾಡಳಿತ ವಾಪಾಸ್ ಪಡೆದಿದೆ. ಮಳೆ ಕಡಿಮೆಯಾದ ಕಾರಣ ಬೋಟಿಂಗ್ ಚಟುವಟಿಕೆಗೆ ಇದ್ದ ನಿಬಂರ್ಧವನ್ನು ತೆರವು ಮಾಡಲಾಗಿದೆ . ನಿಷೇಧ ವಾಪಾಸ್ ಹಿನ್ನೆಲೆಯಲ್ಲಿ ಕಾರವಾರ, ಮುರುಡೇಶ್ವರ, ಗೋಕರ್ಣ, ದಾಂಡೇಲಿ, ಗಣೇಶ ಗುಡಿಯ ಭಾಗದಲ್ಲಿ ಪ್ರವಾಸೋದ್ಯಮ ಗರಿಗೆದರಿದೆ.ಕಳೆದ ಮೂರು ತಿಂಗಳಿಂದ ಕಾಳಿ ನದಿ ಹಾಗೂ ಸಮುದ್ರದಲ್ಲಿ ಜಲಸಾಹಸ ಕ್ರೀಡೆಗಳಿಗೆ ಮಳೆಗಾಲದ ನಿಮಿತ್ತ ಜಿಲ್ಲಾಡಳಿತ , ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಪ್ರವಾಸಿಗರ ಜೀವ ರಕ್ಷಣೆಯ ದೃಷ್ಠಿಯಿಂದ ನಿಷೇಧ ವಿಧಿಸಿತ್ತು. ಈ ಆದೇಶ ಮೀರಿ ಗಣೇಶಗುಡಿಯ ಕಾಳಿ ತೀರದ ರೆಸಾರ್ಟಗಳು ಅಕ್ರಮವಾಗಿ ಜಲ ಸಾಹಸ ಕ್ರೀಡೆಗಳನ್ನು ಮಾಡಿದಲ್ಲಿ ಅವರ ಲೈಸೆನ್ಸ್ ರದ್ದುಪಡಿಸಿ, ಕಪ್ಪು ಪಟ್ಟಿಗೆ ಸೇರಿಸಿ ಪ್ರಕರಣ ದಾಖಲಿಸುವ ಎಚ್ಚರಿಕೆ ನೋಟಿಸನ್ನು ಜಿಲ್ಲಾಧಿಕಾರಿ ನೀಡಿದ್ದರು . ಜಿಲ್ಲಾಧಿಕಾರಿ ಆದೇಶವನ್ನು ಜಿಲ್ಲಾ ಪ್ರವಾಸೋದ್ಯಮ ಉಪ ನಿರ್ದೇಶಕರು ಜಾರಿ ಮಾಡಿದ್ದರು.ಈ ಹಿನ್ನಲೆಯಲ್ಲಿ ಜಲಸಾಹಸ ಕ್ರೀಡೆ ದಾಂಡೇಲಿ, ಗಣೇಶಗುಡಿ, ಗೋಕರ್ಣ, ಶರಾವತಿ ಹಿನ್ನೀರಿನಲ್ಲಿ ಸಂಪೂರ್ಣ ಸ್ಥಗಿತಗೊಂಡಿತ್ತು. ಇದರಿಂದ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿತ್ತು. ಪರಿಣಾಮ ಪ್ರವಾಸೋದ್ಯಮ ಅವಲಂಬಿಸಿದ ಮಾಲೀಕರು ನಿರಾಶರಾಗಿದ್ದರು.
ಅತ್ತ ಪ್ರವಾಸೋದ್ಯಮ ಅವಲಂಬಿಸಿದ ಕಾರ್ಮಿಕರು ಉದ್ಯೋಗವಿಲ್ಲದೆ ಕಳೆದ ಮೂರು ತಿಂಗಳಿಂದ ನಿರುದ್ಯೋಗಿಗಳಾಗಿ ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದರು.ಒಳ್ಳೆಯ ಮಳೆಯಿಂದ ಸೂಪಾ ಜಲಾಶಯ ಭರ್ತಿಯಾಗುತ್ತಿದ್ದು, ಜಲಾಶಯದಿಂದ ನೀರು ಹೊರಬಿಡುವ ಸಾಧ್ಯತೆ ಇತ್ತು. ಆದರೆ ಈಗ ಮಳೆ ಕಡಿಮೆಯಾಗಿದೆ. ಜಲಾಶಯದ ಒಳಹರಿವು ಕಡಿಮೆಯಾಗಿರುವದರಿಂದ ದಾಂಡೇಲಿ, ಗಣೇಶಗುಡಿ ಭಾಗದಲ್ಲಿ ಕಾಳಿ ನದಿಯಲ್ಲಿ ಜಲಕ್ರೀಡೆಗಳಾದ ಬೋಟಿಂಗ್, ರಾಷ್ಟಿಂಗ್, ಕಯಾಕಿಂಗ್, ಮತ್ತಿತರ ಚಟುವಟಿಕೆಗೆ ಅವಕಾಶ ಮಾಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.ಇದರಿಂದ ದಾಂಡೇಲಿ ಪ್ರವಾಸೋದ್ಯಮಕ್ಕೆ ಜೀವ ಕಳೆ ಬರುತ್ತಿದೆ.ಜೊತೆಗೆ ಜಿಲ್ಲೆಯ ಇತರೆಡೆ ಸಹ ಪ್ರವಾಸೋದ್ಯಮ ಚೇತರಿಸಿಕೊಂಡಿದೆ.ಪ್ರವಾಸಿಗರು ಮುರುಡೇಶ್ವರ, ಗೋಕರ್ಣ, ದಾಂಡೇಲಿ ಗಣೇಶಗುಡಿಯತ್ತ ಮುಖ ಮಾಡಿದ್ದಾರೆ. ಪ್ರವಾಸಿಗರು ರಜೆ ದಿನಗಳಲ್ಲಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆಗಮಿಸ ತೊಡಗಿದ್ದಾರೆ.
ಇದು ಪ್ರವಾಸೋದ್ಯಮಿಗಳಿಗೆ ಮತ್ತು ಪ್ರವಾಸೋದ್ಯಮ ಅವಲಂಭಿತ ಉದ್ಯೋಗಿಗಳಿಗೆ, ಕಾರ್ಮಿಕರಿಗೆ ಉತ್ಸಾಹ ತಂದಿದೆ.ಜೊತೆಗೆ ದಾಂಡೇಲಿ ಮೊಸಳೆ ಪಾರ್ಕ ನಿರ್ವಹಣೆಗೆ ಟೆಂಡರ್ ಫೈನಲ್ ಆಗಿದೆ .ಮೊಸಳೆ ಪಾರ್ಕ ನಿರ್ವಹಣೆ ಇನ್ಮೇಲೆ ಗುತ್ತಿಗೆದಾರರ ಜವಾಬ್ದಾರಿಗೆ ಬರಲಿದೆ ಎಂದು ಪ್ರವಾಸೋದ್ಯಮ ಉಪ ನಿರ್ದೇಶಕಿ ಮಂಗಳಗೌರಿ ಉದಯವಾಣಿಗೆ ತಿಳಿಸಿದ್ದಾರೆ. ರಾಫ್ಟಿಂಗ್ ,ಬೋಟಿಂಗ್ ಮಾಡುವವರು ಪ್ರವಾಸೋದ್ಯಮ ಇಲಾಖೆ ಹಾಕಿರುವ ಷರತ್ತುಗಳನ್ನು ಪಾಲಿಸಬೇಕು ಎಂದರು .ಪ್ರವಾಸಿಗರ ಜೀವ ರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.......
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳತೊಡಗಿದೆ. ಮಳೆ ಕಡಿಮೆಯಾಗಿದೆ. ಜಲ ಸಾಹಸ ಕ್ರೀಡೆಗಳು ಆರಂಭವಾಗಿವೆ. ಪ್ರವಾಸಿಗರ ಸುರಕ್ಷಿತೆಗೆ ಪ್ರವಾಸೋದ್ಯಮಿಗಳು ಆದ್ಯತೆ ಕೊಡಬೇಕು.
-ಮಂಗಲಗೌರಿ .
ಉಪ ನಿರ್ದೇಶಕರು. ಪ್ರವಾಸೋದ್ಯಮ ಇಲಾಖೆ \
ಕಾರವಾರ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 