ಬಾಲ್ ಬ್ಯಾಡ್ಮಿಂಟನ್: ಸೋಗಿ ಕಾಲೇಜ್ ರಾಜ್ಯಮಟ್ಟಕ್ಕೆ
Ball badminton: Sogi College advances to state level
ಬಾಲ್ ಬ್ಯಾಡ್ಮಿಂಟನ್: ಸೋಗಿ ಕಾಲೇಜ್ ರಾಜ್ಯಮಟ್ಟಕ್ಕೆ ಲೋಕದರ್ಶನ ವರದಿ
ಹೂವಿನಹಡಗಲಿ 7: 2025-26 ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜಿನ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ ನಲ್ಲಿ ಸೋಗಿಯ ಪಟ್ಟೇದ ಸಿದ್ಧಮಲ್ಲಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಹರಪನಹಳ್ಳಿ ತಂಡದ ವಿರುದ್ಧ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ ಎಂದು ಪ್ರಾಚಾರ್ಯರಾದ ಕೆ ಶಬೀನಾ ತಿಳಿಸಿದ್ದಾರೆ.ತಾಲೂಕು ಕ್ರೀಡಾಕೂಟದ ಹಂತದಿಂದಲೂ ಸ್ಥಿರ ಹಾಗೂ ಆಕ್ರಮಣಕಾರಿ ಪ್ರದರ್ಶನ ತೋರಿದ ಸೋಗಿ ಕಾಲೇಜಿನ ಅಜಯ್, ಮಾದೇಶ, ಕಿರಣ್, ಸಾಗರ್, ಸುದೀಪ್ ಗುರುಬಸವರಾಜ್, ಬಸವರಾಜ್, ಮಹಮ್ಮದ್ ಜಬಿ ಅವರ ತಂಡವು ಜಿಲ್ಲಾ ಮಟ್ಟದಲ್ಲೂ ಉತ್ತಮ ಪ್ರದರ್ಶನ ತೋರಿ ನಿರಾಯಾಸವಾಗಿ ರಾಜ್ಯಮಟ್ಟಕ್ಕೆ ಅರ್ಹತೆ ಪಡೆಯಿತು.ತಂಡದ ಸಾಧನೆಗೆ ಕ್ರೀಡಾ ಕಾರ್ಯದರ್ಶಿ ಜಯಪ್ರಕಾಶ್ ನಾರಾಯಣ್, ಉಪನ್ಯಾಸಕರಾದ ಜ್ಯೋತಿ, ವೆಂಕಟೇಶ್, ಪರಶುರಾಮ ನಾಗೋಜಿ, ನರೇಶ್, ನಟರಾಜ್ ಹಾಗೂ ಕಾಲೇಜ್ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರು ಪದಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 