ನವದೆಹಲಿ, ಮೇ 25, ಭಾರತದ ಮಾಜಿ ಹಾಕಿ ನಾಯಕ ಬಲ್ಬೀರ್ ಸಿಂಗ್ ಸೀನಿಯರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಗೌರವ ಶ್ರದ್ಧಾಂಜಲಿ ತಿಳಿಸಿದ್ದಾರೆ. ಮೂರು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಬಲ್ಬೀರ್ ಸೋಮವಾರ ಬೆಳಿಗ್ಗೆ ಮೊಹಾಲಿಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು."ಪದ್ಮಶ್ರೀ ಗೌರವಕ್ಕೆ ಒಳಗಾದ ಬಲ್ಬೀರ್ ಸಿಂಗ್ ಸೀನಿಯರ್ ಅವರ ಆಟದ ಪ್ರದರ್ಶನಕ್ಕಾಗಿ ಅವರನ್ನು ಸ್ಮರಿಸಲಾಗುವುದು. ಅವರು ದೇಶವನ್ನು ಅನೇಕ ಬಾರಿ ಹೆಮ್ಮೆಪಡುವಂತೆ ಮಾಡಿದ್ದಾರೆ. ಅವರು ಅತ್ಯುತ್ತಮ ಹಾಕಿ ಆಟಗಾರ ಮತ್ತು ಅದ್ಭುತ ಮಾರ್ಗದರ್ಶಕರಾಗಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಅವರ ನಿಧನದ ಸುದ್ದಿಯಿಂದ ನಾನು ದುಃಖಿತನಾಗಿದ್ದೇನೆ.ಅವರ ಕುಟುಂಬಕ್ಕೆ ಸಂತಾಪವನ್ನು ವ್ಯಕ್ತಪಡಿಸುತ್ತೇನೆ” ಎಂದು ಪ್ರಧಾನಿ ತಿಳಿಸಿದ್ದಾರೆ.