ಬಾಲಾಜಿ ಪ್ರೌಢ ಶಾಲೆ ಉತ್ತಮ ಸಾಧನೆ

ಬಾಲಾಜಿ ಪ್ರೌಢ ಶಾಲೆ ಉತ್ತಮ ಸಾಧನೆ Balaji High School excellent performance

ಲೋಕದರ್ಶನ ವರದಿ 

ಯರಗಟ್ಟಿ 26: ಸ್ಥಳಿಯ ಬಾಲಾಜಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.  

ಶಾಲೆಗೆ ಪ್ರಥಮ ಸ್ಥಾನವನ್ನು ರೀತಿಕಾ ಶೆಟ್ಟಿ (96.84ಅ), ದ್ವೀತಿಯ ಸ್ಥಾನವನ್ನು ಭೂಮಿಕಾ ಕಂಬಾರ (93.65ಅ) ಹಾಗೂ ತೃತೀಯ ಸ್ಥಾನವನ್ನು ಪ್ರೇಕ್ಷಣಾ ತಳವಾರ (91ಅ) ಮತ್ತು ಸೃಷ್ಠಿ ಹಿರೇಮಠ (91ಅ) ಪಡೆದಿದ್ದಾರೆ. ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ಮಾಡಿ ಶಾಲೆಗೂ ಹಾಗೂ ಪಾಲಕರಿಗೂ ಕೀರ್ತಿ ತಂದಿದ್ದಾರೆ. 6 ವಿದ್ಯಾರ್ಥಿಗಳು ಶೇ.90ಅ ಕಿಂತ ಹೆಚ್ಚು ಅಂಕ ಪಡೆದಿದ್ದಾರೆ.  

10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 12 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು, ಈ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸದಸರು, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.