ಬಕ್ರೀದ ತ್ಯಾಗ ಬಲಿದಾನದ ಪ್ರತೀಕ: ಮಿನಹಾಜುದ್ದೀನ
Bakrid is Symbol of Sacrifice: Meenajuddina
ತಾಳಿಕೋಟಿ 07: ಬಕ್ರೀದ್ ಪ್ರಯುಕ್ತ ಪಟ್ಟಣದ ಹೊಸ ಈದ್ಗಾ ಮೈದಾನದಲ್ಲಿ ಶನಿವಾರ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಾರ್ಥನೆ ನಂತರ ಧಾರ್ಮಿಕ ಮುಖಂಡ ಡಾ. ಮಿನಹಾಜುದ್ದೀನ ಖಾಜಿ ತಮ್ಮ ಈದ್ ಸಂದೇಶದಲ್ಲಿ ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಇತಿಹಾಸ ಪುರುಷ ಪ್ರವಾದಿ ಇಬ್ರಾಹೀಮರು ತಮ್ಮ ಪುತ್ರ ಇಸ್ಮಾಯೀಲರನ್ನು ದೇವ ಸಂಪ್ರೀತಿಗಾಗಿ ಬಲಿ ನೀಡಲು ಮುಂದಾದ ಅವಿಸ್ಮರಣೀಯ ಘಟನೆಯನ್ನು ಸ್ಮರಿಸುವ ಐತಿಹಾಸಿಕ ದಿನವಾಗಿದೆ. ನಾವೆಲ್ಲರೂ ದೇವನಲ್ಲಿ ಅಚಲವಾದ ವಿಶ್ವಾಸವನ್ನಿಟ್ಟು ಧರ್ಮದ ಆಚರಣೆ ಮತ್ತು ನಿಯಮಗಳನ್ನು ಪರಿಪಾಲಿಸಿ ಧರ್ಮವಂತರಾಗಬೇಕು ಎಂದರು. ಪ್ರವಾದಿ ಮಹಮ್ಮದರ ಆದರ್ಶಗಳನ್ನು ಅನುದಿನವೂ ಅನುಸರಿಸಿ, ಕೆಡುಕುಗಳಿಂದ ದೂರವಿದ್ದು ಉತ್ತಮ ಬದುಕನ್ನು ರೂಪಿಸಿಕೊಳ್ಳಿ ಧರ್ಮದ ತಿರುಳು ಅರಿಯದೆ ಹೋದರೆ ಇನ್ನೊಂದು ಧರ್ಮವನ್ನು ತಿಳಿಯುವುದು ಮತ್ತು ಪ್ರೀತಿಸುವುದು ಅಸಾಧ್ಯ ದೇಶದ ಕಾನೂನು ಮತ್ತು ಇತರ ಧರ್ಮಿಯರ ಭಾವನೆಗಳಿಗೆ ಧಕ್ಕೆ ಆಗದ ರೀತಿಯಲ್ಲಿ ಹಬ್ಬವನ್ನು ಆಚರಿಸುವುದು ಎಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಧಾರ್ಮಿಕ ಮುಖಂಡ ಸಯ್ಯದ್ ಶಕೀಲ್ ಅಹಮದ್ ಖಾಜಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಹಫೀಜ ಇಬ್ರಾಹಿಂ ಮುಲ್ಲಾ, ಖಾಜಾಹುಸೇನ ಡೋಣಿ, ಗನಿಸಾಬ ಲಾಹೋರಿ, ಅಬ್ದುಲ್ ರೆಹಮಾನ್ ಎಕೀನ, ಅಲ್ಲಾಭಕ್ಷ ನಮಾಜಕಟ್ಟಿ ಸಿಕಂದರ ವಠಾರ, ರಾಜ ಅಹ್ಮದ್ ಒಂಟಿ, ಅಬ್ದುಲ್ ರಜಾಕ್ ಮನಗೂಳಿ, ಮಹೆಬೂಬ ಚೋರಗಸ್ತಿ,ಕೆ.ಐ.ಸಗರ,ಎಂ.ಎ. ಮೇತ್ರಿ, ರೋಷನ್ ಡೋಣಿ, ಅಬ್ದುಲ್ ಸತ್ತಾರ ಅವಟಿ, ಇಬ್ರಾಹಿಂ ಮನ್ಸೂರ, ಹಸನ್ ಮನಗೂಳಿ, ಅಬ್ದುಲ್ ರೆಹಮಾನ್ ನಮಾಜಕಟ್ಟಿ,ಡಾ.ಎ.ಎ.ನಾಲಬಂದ,ಚಂದಾಹುಸೇನ ಖಾಂಜಾದೆ, ಎಸ್.ಎ.ನಾಲಬಂದ, ಹಸನ ಸಾಬ ಕೊರ್ಕಿ, ಮುಸ್ತಫಾ ಚೌಧರಿ, ಮುಜಾಹೀದ ನಮಾಜಕಟ್ಟಿ, ತನ್ವೀರ ಮನಗೂಳಿ ಮತ್ತಿತರರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 