ಕೃಷ್ಣೆಯ ಜಲಧಿಗೆ ಬಾಗಿನ ಸಂಭ್ರಮ: ಶೃಂಗಾರಗೊಂಡ ಆಲಮಟ್ಟಿ
Bagina offered to Krishna river
ಆಲಮಟ್ಟಿ 06: ಉತ್ತರ ಕರ್ನಾಟಕದ ರೈತರ ಜೀವನಾಡಿ ಕೃಷ್ಣೆಯ ಒಡಲಿಗೆ ಇದೇ ಶನಿವಾರ ಶ್ರದ್ಧೆ, ಭಕ್ತಿಪೂರ್ವಕ ಗಂಗಾಪೂಜೆ ಹಾಗೂ ಬಾಗಿನ ಅರೆ್ಣಯ ಸುಯೋಗ. ಆ ನಿಮಿತ್ಯ ಆಲಮಟ್ಟಿ ಅಂಗಳಕ್ಕೆ ಈಗ ಅಂದ ಚೆಂದದ ಸ್ಪರ್ಶ ! ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಆವರಣ ಮಧುವಣಗಿತ್ತಿಯಂತೆ ಅಲಂಕಾರದ ತೋರಣದಲ್ಲಿ ಮಿನುಗಿ ಗಮನ ಸೆಳೆಯುತ್ತಿದೆ.
ಅತ್ಯಾಕರ್ಷಕ ರೂಪದಲ್ಲಿ ಬಾಗಿನ ಸಲ್ಲಿಕೆಯ ಸ್ಥಳ ಸೇರಿದಂತೆ ಹಲ ವೃತ್ತಗಳು ಘಮಘಮಿಸುವ ಹೂ ಪೋರಣಗಳ ಅಲಂಕಾರದಿಂದ ಕಂಗೊಳಿಸಿ ಕೃಷ್ಣೆ ಜಲಧಿಗೆ ಪವಿತ್ರತೆಯ ಉತ್ಕಟ ಸ್ಥಾನಮಾನ ಸಾಕ್ಷೀಕರಿಸುತ್ತಿವೆ. ಹಸಿಯೋನ್ಮಾದ ಶೃಂಗಾರ ಕಾವ್ಯದ ಲಾಲೀತ್ಯದಲ್ಲಿ ಹೃನ್ಮನ ತಣಿಸುತ್ತಿವೆ. ಅಭೂತಪೂರ್ವ ಐತಿಹ್ಯ ನೋಟ ಬೀರುತ್ತಿವೆ. ತಂಪು ವಾತಾವರಣದ ಕಂಪಿನಲ್ಲಿ ಆಣೆಕಟ್ಟು ಮುಂಭಾಗದ ಹಾಗೂ ಅಕ್ಕಪಕ್ಕದ ಪರಿಸರ ಹಿತಮಯವಾಗಿ ಉನ್ಮಾದ ರಸಸ್ವಾದ ನೀಡುತ್ತಿವೆ.ಇನ್ನೊಂದೆಡೆ ಅಪಾರ ಜಲರಾಶಿ ತನ್ನೋಡಲೊಳು ತುಂಬಿಕೊಂಡಿರುವ ಕೃಷ್ಣೆಯ ಪರಂಪವಿತ್ರ ಜಲಧಿಯ ಸುಂದರ ದೃಶ್ಯ ವೈಭವೋಪೇತ ಅನ್ನದಾತರ ತೃಷೆಯ ಆಶಾಕಿರಣ ಇಮ್ಮಡಿಗೊಳಿಸುತ್ತಿದೆ. ಈ ಮಧ್ಯೆ ರಾಜ್ಯದ ದೊರೆಯ ಅಮೃತಹಸ್ತದಿಂದ ಶನಿವಾರ ಗಂಗಾಪೂಜೆ, ಬಾಗಿನ ಅರ್ಿಸಿಕೊಳ್ಳಲು ಕಾತರದಿಂದ ಕಾಯುತ್ತಿರುವಂತಿದೆ ಕೃಷ್ಣೆಯ ಜಲಧಿ. ಈ ಸುಕ್ಷಣಕ್ಕೆ ಸನ್ನದ್ಧ ಸ್ಥಿತಿಯಲ್ಲಿಗ ಕೃಷ್ಣೆ ಒಡಲು ಜಲಭರಪೂರ ವಯ್ಯಾರದ ಅಲೆಗಳು ಉಮ್ಮಳಿಸಿ ತೇಲಿ ಬರುತ್ತಿವೆ.
ಕರುನಾಡಿನ ಪ್ರತಿಷ್ಟಿತ ಆಲಮಟ್ಟಿ ಜಲಾಶಯದಲ್ಲಿ ಗರಿಷ್ಟ ಮಟ್ಟಕ್ಕೆ ನೀರು ಸಂಗ್ರಹಣೆಯಾದ ಪ್ರಯುಕ್ತ ಶನಿವಾರ ಆಲಮಟ್ಟಿ ಸ್ಮರಣೀಯ ನೋಟಕ್ಕೆ ಅಣಿಯಾಗುತ್ತಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 