ಅಧ್ಯಕ್ಷರಾಗಿ ಬಾಗೇವಾಡಿ, ಉಪಾಧ್ಯಕ್ಷರಾಗಿ ಇಂಗಳಗಿ ಅವಿರೋಧ ಆಯ್ಕೆ

Bagewadi as President and Ingalagi as Vice President elected unopposed

ದೇವರಹಿಪ್ಪರಗಿ 12: ತಾಲೂಕಿನ ಯಲಗೋಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸಾಯಿಬಣ್ಣ ಬಾಗೇವಾಡಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಇಂಗಳಗಿ ಅವಿರೋಧ ಆಯ್ಕೆಯಾಗಿದ್ದಾರೆ. 

ಒಟ್ಟು ಜನ12 ಸದಸ್ಯರ ಯಲಗೋಡ ಗ್ರಾಮದ ಪಿಕೆಪಿಎಸ್ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ಸಾಯಿಬಣ್ಣ ಬಾಗೇವಾಡಿ ಹಾಗೂ ಬಸವರಾಜ ಇಂಗಳಗಿ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಯಾರು ನಾಮಪತ್ರ ಸಲ್ಲಿಸದ ಕಾರಣ ಯಲಗೋಡ ಗ್ರಾಮದ ಸಾಯಿಬಣ್ಣ ಬಾಗೇವಾಡಿ ಹಾಗೂ ಉಪಾಧ್ಯಕ್ಷರಾಗಿ ಬಸವರಾಜ ಇಂಗಳಗಿ ಅವಿರೋಧ ಆಯ್ಕೆ ಎಂದು ಚುನಾವಣಾಧಿಕಾರಿ  ಶೈಲಾ.ಬಿ.ಪಾಟೀಲ ಘೋಷಣೆ ಮಾಡಿದರು.ಚುನಾವಣೆಯ ನಂತರ ನೂತನ ಅಧ್ಯಕ್ಷ  ಸಾಯಿಬಣ್ಣ ಬಾಗೇವಾಡಿ ಅವರು ಮಾತನಾಡಿ, ಸಹಕಾರಿ ಸಂಘಗಳು ರೈತರಿಗೆ ಸಹಾಯಕವಾಗಲಿದ್ದು, ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ರೈತರಿಗೆ ಮುಟ್ಟಿಸುವ ಮೂಲಕ ರೈತರ ಏಳಿಗೆಗೆ, ಸಹಕಾರಿ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುತ್ತದೆ. ಸಂಘದ ಏಳಿಗೆಗೆ ಆಡಳಿತ ಮಂಡಳಿಯ ಸರ್ವ ಸದಸ್ಯರ ಸಹಕಾರ ಅಗತ್ಯ. ಸಂಘ ಉತ್ತಮವಾಗಿ ಮುನ್ನಡೆಯುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ ಆಯ್ಕೆಗೆ ಸಹಕರಿಸಿದ ಸದಸ್ಯರಿಗೆ ಹಾಗೂ ಪ್ರತ್ಯಕ್ಷ, ಪರೋಕ್ಷವಾಗಿ ಬೆಂಬಲಿಸಿದ ಮುಖಂಡರಿಗೆ, ಗ್ರಾಮದ ಪ್ರಮುಖರಿಗೆ ಹಾಗೂ ಅಭಿಮಾನಿಗಳಿಗೆ ಧನ್ಯವಾದ ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಮುಖರಾದ ಸಂತೋಷ ಪಾಟೀಲ ಡಂಬಳ, ಸಿದ್ದು ಬುಳ್ಳಾ, ಶೇಖರಗೌಡ ಪಾಟೀಲ ಕೋರವಾರ, ಬಸವರಾಜ ಅಸ್ಕಿ, ಸಿಇಓ ಎಂ.ಎಸ್‌. ಹಿಕ್ಕನಗುತ್ತಿ, ಸದಸ್ಯರುಗಳಾದ ಮಲ್ಲಪ್ಪ ಹಿರೇಕುರುಬರ, ಸಂತೋಷ ಹಚ್ಯಾಳ, ರಾಜೆ ಪಟೇಲ ಮುಚಕೇಡ, ಲಕ್ಷ್ಮಿ ಮಾದರ, ಶಕುಂತಲಾ ಬೂದಿಹಾಳ, ಜಟ್ಟಪ್ಪ ಕೆಂಬಾವಿ ಹಾಗೂ ದೊಡ್ಡಮ್ಮಗೌಡ್ತಿ ವಂದಾಲ, ಮುಖಂಡರುಗಳಾದ ಉಮೇಶ ಇಂಗಳಗಿ, ನಿತ್ಯಾನಂದ ಕತ್ತಿ, ಸೋಮಶೇಖರ ಹೋಸಮನಿ, ಚಂದ್ರಶೇಖರ ಹಿರೇಕುರುಬರ, ರಫೀಕ ಕಣಮೇಶ್ವರ, ನಜೀರ ಪಟೇಲ ಕಣಮೇಶ್ವರ, ಅವಿನಾಶ ದೋಡಮನಿ, ಮೈಬೂಬ ಕಣಮೇಶ್ವರ, ಅಶೋಕ ಬೂದಿಹಾಳ ಸೇರಿದಂತೆ ಗ್ರಾಮದ ಪ್ರಮುಖರು, ಗಣ್ಯರು, ಸದಸ್ಯರು,ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.