ರಾಣೆಬೆನ್ನೂರು ವಕೀಲರ ಸಂಘದಲ್ಲಿ ಹೂಗುಚ್ಛ ನೀಡಿ ಮತಯಾಚಿಸಿದ ಬಾಗೇವಾಡಿ ಚನ್ನಬಸಪ್ಪ
Bagevadi Channabasappa offered a bouquet of flowers at the Ranebennur Bar Association and sought vot
ರಾಣೇಬೆನ್ನೂರು
: 7 ಮಾರ್ಚ್ 11, 2026 ರಂದು ಬುಧವಾರ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು -2026 ಇದರ ಚುನಾವಣೆ ನಡೆಯಲಿದೆ.
ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದ ಹೆಬ್ಬಾಗಿಲು, ವಾಣಿಜ್ಯ ಕೇಂದ್ರ ಸ್ಥಾನವಾದ ರಾಣೆಬೆನ್ನೂರು
ನಗರದ 300ಕ್ಕೂ ಹೆಚ್ಚು ಬಹು ಸದಸ್ಯರು ಹೊಂದಿರುವ
ವಕೀಲರ ಸಂಘಕ್ಕೆ ಈಗಾಗಲೇ ವಿವಿಧ ಸ್ಥಾನಗಳಿಗೆ ಸ್ಪರ್ಧಿಸಿರುವ ರಾಜ್ಯದ 50ಕ್ಕೂ ಹೆಚ್ಚು ಸ್ಪರ್ದಾಳುಗಳು
ಭೇಟಿ ನೀಡಿ ತಮ್ಮ ಮತ ಯಾಚಿಸಿದರು. ಹಲವು ಬಾರಿ ವಕೀಲರ ಸಂಘಕ್ಕೆ ಭೇಟಿ ನೀಡಿರುವ, ರಾಜ್ಯ ಪರಿಷತ್ತಿನ
ಸದಸ್ಯ ಸ್ಥಾನದ ಸ್ಪರ್ಧಿ, ಆಕಾಂಕ್ಷಿ ಬಾಗೇವಾಡಿ ಚನ್ನಬಸಪ್ಪ ಬಸವಣ್ಣಪ್ಪ ಅವರು ತಮ್ಮ ವಿನಮ್ರ ಮನವಿ
ಯಾಚಿಸಿ, ತಮ್ಮ ಗೆಲುವಿಗೆ ಸಹಕರಿಸುವಂತೆ ಕೋರಿದರು.
ಮಹಿಳಾ ಮೀಸಲಾತಿ, ಯುವ ವಕೀಲರಿಗೆ ಹೆಚ್ಚಿನ ಪ್ರೋತ್ಸಾಹ ಧನ, ಪಾರದರ್ಶಕ ಚುನಾವಣೆ, ರಾಜ್ಯದಲ್ಲಿ ವಕೀಲರ ಪಟ್ಟಿ ಪರಿಷ್ಕರಣೆ, ವಕೀಲರಿಗೆ ನ್ಯಾಯ ಬದ್ಧ ಹಕ್ಕು, ವಕೀಲರ ಕುಟುಂಬಕ್ಕೆ 10 ಲಕ್ಷ ರೂ ಸಾಮೂಹಿಕ ಆರೋಗ್ಯ ವಿಮೆ, ಮೃತ ಕುಟುಂಬದ ಸದಸ್ಯರಿಗೆ ಪರಿಹಾರ ನಿಧಿ ದ್ವಿಗುಣ, ಕೋರ್ಟ್ ಆವರಣದಲ್ಲಿ ಲಾಯರ್ಸ್ ಚೇಂಬರ್, ಮತ್ತಿತರ ಯೋಜನೆಗಳ ದೊರಕಿಸುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸಿರುವುದಾಗಿ ಲೋಕದರ್ಶನ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಬಾಗೇವಾಡಿ ಅವರು ವಕೀಲರ ಸಂಘದ ಪ್ರತಿಯೊಬ್ಬ ಸದಸ್ಯರಿಗೂ,
ಗುಲಾಬಿ ಹೂ ಗುಚ್ಛ ನೀಡಿ, ಅಂದಿನಿಂದ ಇಂದಿನವರೆಗೂ ಈ ಗುಲಾಬಿ
ಹೂ ಪರಂಪರೆ ಮುಂದುವರಿಸಿ, ಅವರು ಇಂದಿಗೂ ಮತ ಯಾಚಿಸಿದ್ದು,
ವಕೀಲ ಸಮುದಾಯದವರ ಪ್ರಸಂಸೆಗೆ ಪಾತ್ರವಾಗಿತ್ತು. ಇಂತಹ ಸರಳ ವ್ಯಕ್ತಿಗಳ ಆಯ್ಕೆ ಇಂದಿನ ಅಗತ್ಯ ಮತ್ತು
ಅನಿವಾರ್ಯವಾಗಿದೆ ಎನ್ನುವ ಮಾತುಗಳು ಸಮುದಾಯದಲ್ಲಿ ಕೇಳಿ ಬರುತ್ತಿದ್ದವು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 