ಲೋಕದರ್ಶನ ವರದಿ
ಬಾಗಲಕೋಟ 27: ತಾಲೂಕು ಮಟ್ಟದ ಬೇಸಿಗೆ ಸಂಭ್ರಮ ಕಾರ್ಯಕ್ರಮವು ಹಿರೇಶೆಲ್ಲಿಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಲಾಯಿತು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ವಿ.ಪಾಟೀಲರು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿ 'ಬೇಸಿಗೆ ರಜಾ ಅವಧಿಯಲ್ಲಿ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಆಯ್ದ ಶಾಲೆಗಳ ಮಕ್ಕಳಿಗಾಗಿ ಇದೇ 24 ರಿಂದ ಮೇ 28 ರವರೆಗೆ ಸ್ವಲ್ಪ ಓದು ಸ್ವಲ್ಪ ಮಜಾ ಕಾರ್ಯಕ್ರಮದಂತೆ ಬೇಸಿಗೆ ತರಬೇತಿ ಶಿಬಿರವನ್ನು ಉಚಿತವಾಗಿ ನಡೆಸಿಕೊಡಲಾಗುತ್ತಿದೆ ಎಂದರು.
ತಾಲೂಕಿನಲ್ಲಿ 6 ಮತ್ತು 7 ನೇ ತರಗತಿಗಳಲ್ಲಿ ಓದುತ್ತಿರುವ ಒಟ್ಟು 62 ಶಾಲೆಗಳಲ್ಲಿ ಈ ಕಾರ್ಯಕ್ರಮ ಜಾರಿಯಲ್ಲಿದೆ ಎಂದರು. ಬಿ.ಇ.ಓ. ದೊಡ್ಡಬಸಪ್ಪ ನೀರಲಕೇರಿಯವರ ಮಾರ್ಗದರ್ಶನದಲ್ಲಿ ಆಯ್ದ ಶಿಕ್ಷಕರಿಗೆ ತರಬೇತಿ ನೀಡಿ ಯೋಜನೆಯನ್ನು ಯಶಸ್ವೀಗೊಳಿಸಲು ತೀಳಿಸಲಾಗಿದೆ,ಒಟ್ಟು ಐದು ವಾರ ನಡೆವ ಶಿಬಿರದಲ್ಲಿ ಬೋಧನೆಯೊಂದಿಗೆ ಕ್ರೀಡೆ, ಸಾಂಸ್ಕೃತಿಕ ಆಟ ಪಾಠಗಳನ್ನು ನಡೆಸಲಾಗುತ್ತಿದೆ ಎಂದರು. ಜೊತೆಗೆ ಬಿಸಿ ಊಟದ ವ್ಯವಸ್ಥೆಯನ್ನು ನಿತಂರವಾಗಿಡಲಾಗಿದೆ ಎಂದರು. ಬಿ.ಆರ್.ಪಿ.ಗಳಾದ ರಾಜೇಶ ಮನಗೂಳಿ, ಶಿವಯ್ಯ ಸಾರಂಗಮಠ, ಮುಖ್ಯಗುರುಗಳಾದ ಬಳೂಲದ ಶಿಕ್ಷಕರಾದ ಗವಳಿ ಹಾಗೂ ಶಿಕ್ಷಕರು, ಬಿಸಿ ಊಟದ ಸಿಬ್ಬಂಧಿ ಉಪಸ್ಥಿತರಿದ್ದರು.