ಬಾಗಲಕೋಟೆ: ಪ್ರಧಾನಿ ಮೋದಿ ಜೊತೆ ಜನವರಿ 20 ರಂದು ದೆಹಲಿಯಲ್ಲಿ ನಡೆಯಲಿರುವ ಪರೀಕ್ಷಾ ಪೇ ಚಚರ್ಾ ಕಾರ್ಯಕ್ರಮಕ್ಕೆ ಹುನಗುಂದ ತಾಲೂಕಿನ ಜಂಬಲದಿನ್ನಿ ಗ್ರಾಮದ ಸಕರ್ಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾಥರ್ಿ ಪೂಣರ್ಿಯಾ ರೇವಣಸಿದ್ದಪ್ಪ ನಾಶಿ ಆಯ್ಕೆಯಾಗಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಈ ವಿದ್ಯಾಥರ್ಿ ಪಾಲ್ಗೊಳ್ಳುತ್ತಿರುವುದು ಶಾಲೆಯ ಶಿಕ್ಷಕರಿಗೆ ಹಾಗೂ ಕುಟುಂಬದವರಿಗೆ ಸಂತಸ ತಂದಿದೆ. ಗ್ರಾಮೀಣ ಪ್ರತಿಭೆಗೆ ಈ ಅವಕಾಶ ಸಿಕ್ಕಿರೋದು ಜಿಲ್ಲೆ, ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ.
ಈ ವಿದ್ಯಾಥರ್ಿಜನವರಿ 16 ರಂದು ಬೆಂಗಳೂರಿಗೆ ತೆರಳಿ ವರದಿ ಮಾಡಿಕೊಳ್ಳುವಂತೆ ಇ-ಮೇಲ್ ಬಂದಿದ್ದು, ಇದೀಗ ಶಾಲೆಯ ಮುಖ್ಯಸ್ಥರು ಬಾಲಕಿಯ ಬಗ್ಗೆ ಮಾಹಿತಿ ಒಳಗೊಂಡ ಅಜರ್ಿಯನ್ನು ಭತರ್ಿ ಮಾಡಿ ಕಳುಹಿಸುವಂತೆ ಕನರ್ಾಟಕ ಸಮಗ್ರ ಶಿಕ್ಷಣದ ಕಾರ್ಯಕ್ರಮಾಧಿಕಾರಿ ರವಿಕುಮಾರ ವಿ.ಆರ್ ಇಮೇಲ್ ಮಾಡಿದ್ದಾರೆ.
ಪ್ರಧಾನಿ ಮೋದಿ ಅವರ ಪರೀಕ್ಷಾ ಪೆ ಚಚರ್ಾ ಸಂವಾದ ಕಾರ್ಯಕ್ರಮ ನಡೆಸುವ ಕುರಿತು ಆನ್ಲೈನ್ನಲ್ಲಿ ಕೆಲ ವಿಷಯಗಳನ್ನು ಕೊಟ್ಟಿದ್ದರು. ಅದರಲ್ಲಿ ಯಾವುದಾದರೂ ಒಂದು ವಿಷಯ ಆಯ್ಕೆ ಮಾಡಿಕೊಂಡು ಪ್ರಬಂಧ ಬರೆಯಬೇಕಿತ್ತು. ಕಳೆದ ಡಿಸೆಂಬರ 23 ರಂದು ಪೂಣರ್ಿಮಾ ಎಗ್ಝಾಮಿಂಗ್ ಎಗ್ಝಾಮ್ ವಿಷಯದ ಬಗ್ಗೆ ಇಂಗ್ಲೀಷನಲ್ಲಿ ಪ್ರಬಂಧ ಬರೆದು ವೆಬ್ಸೈಟ್ಗೆ ಅಪ್ಲೋಡ ಮಾಡಿದ್ದಳು. ಬಳಿಕ ಅಲ್ಲಿಂದ ಪ್ರಮಾಣ ಪತ್ರವೊಂದು ಬಂದಿತ್ತು. ಪ್ರಧಾನಿ ಮೋದಿಅವರ ಪರೀಕ್ಷಾ ಪೇ ಚಚರ್ಾ ಸಂವಾದಕ್ಕೆ ಆಯ್ಕೆ ಆಗಿದ್ದಾಗಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಚಿತ್ರ ಸಂತೆಯಲ್ಲಿ ಮುಧೋಳದ ಚಿತ್ರಕಲಾವಿದರು