ಬೆಳಗಾವಿ 21: ಪ್ರಪಂಚದ ಯಾತ್ರಾಸ್ಥಳ ನಮ್ಮ ಭಾರತ. ಭಾರತದೇಶವು ಅವತಾರಗಳ ತಾಣ. ಋಷಿಮುನಿ, ಸಾಧು ಸಂತರ, ಅವಧೂತರ ಮಹಾತಸ್ಸಿನಿಂದ ಈ ಧರೆಯು ಪಾವನಗೊಂಡಿದೆ. ಸಂಸಾರದಲ್ಲಿದ್ದು ಕಮಲಪತ್ರದಂತೆ ನಿರ್ಲಿಪ್ತವಾಗಿ ಬಾಳಿಬದ್ಧ ಜೀವಿಗಳನ್ನು ಉದ್ಧಾರಗೈದು, ತಾರಕ ಮಂತ್ರದ ದೀಕ್ಷೆ ಕೊಟ್ಟು ಅವಧೂತ ತತ್ವದಿಂದ ಭಕ್ತರಿಗೆ ಬೆಳಕಾಗಿ, ಮನುಕುಲಕ್ಕೆ ಹೊಲದ ಗರು ಪೂಜ್ಯ ಸದ್ಗುರು ಶ್ರೀ ನಾಗೇಂದ್ರ ಮಹಾಸ್ವಾಮಿಗಳವರ ಮಹಾಶಿವರಾತ್ರಿಯ ಜಾತ್ರೆಯು ಪ್ರತಿ ವರ್ಷದಂತೆ ಐದು ದಿನಗಳ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಗಳಿಂದ ಜರುಗಲಿದೆ. ಜಾತ್ರೆಯ ನಿಮಿತ್ತ ವಿಶೇಷ ಕಾರ್ಯಕ್ರಮಗಳು ಆಯೋಜನಗೊಂಡಿದ್ದು ಭಕ್ತರು ಆಗಮಿಸಿ ಪೂಜ್ಯ ಅಜ್ಜನವರ ಆಶೀರ್ವಾದ ಅನುಗ್ರಹಕ್ಕೆ ಪಾತ್ರರಾಗಿ ಕೃತಾರ್ಥರಾಗಬೇಕು.
5 ಐದು ದಿನಗಳ ಕಾರ್ಯಕ್ರಮಗಳು
ಮಂಗಳವಾರ ದಿನಾಂಕ 25-2-2025 ರಂದು ಸಾಯಂಕಾಲ 5 ಘಂಟೆಗೆ ಶ್ರೀ ಶಿವಯೋಗಿ ನಾಗೇಂದ್ರ ಮಹಾಸ್ವಾಮಿಗಳ ಸಂತಿಬಸ್ತವಾಡದ ಶ್ರೀ ಬಸವೇಶ್ವರ ದೇವಸ್ಥಾನದಿಂದ ಬರುವ ಧ್ವಜ, ಹಿಂದೊಳ್ಳಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಿಂದ ಶ್ರೀ ಬಸವಗುರು ಸೇವಾ ಭಜನಾ ಸಂಘದ ನೇತೃತ್ವದಲ್ಲಿ ಬರುವ ರಜ ಸೂತ್ರಗಳಿಂದ ಶ್ರೀ ಸದ್ಗುರು ನಾಗೇಂದ್ರ ಶಿವಯೋಗಿಗಳವರ ಮಠದ ಪರಂಪರೆಯ ಧರ್ಮಲಾಂಭನದ್ಯೋತಕವಾದ ಧ್ವಜಾರೋಹಣದೊಂದಿಗೆ ಜಾತ್ರೆಯ ಪ್ರಾರಂಭ
ಬುಧವಾರ ದಿನಾಂಕ 26-2-2025 ರಂದು ವಿಶ್ವಶಾಂತಿಗಾಗಿ ಶ್ರೀ ಮಠದಲ್ಲಿ ಮಹಾರುದ್ರಾಭಿಷೇಕ ನಂತರ ಮುಂ. 2-10 ಗಂಟೆಗೆ ಶ್ರೀ ವೇ. ಕಲಯ್ಯ ಶಾಸ್ತ್ರಿಗಳು ಉದೇಶಿಮಠ, ಹಿರೇಬಾಗೇವಾಡಿ ಹಾಗೂ ಸಂಗಡಿಗರು ಇವರ ನೇತೃತ್ವದಲ್ಲಿ ಹೋಮ, ಸಂಜೆ 4 ಗಂಟೆಗೆ ಪರಮಪೂಜ್ಯ ಶ್ರೀ ನಾಗೇಂದ್ರ ಸ್ವಾಮಿಗಳ ಪರಮ ಭಕ್ತರಾದ ತ್ರಿ ರುದ್ರಗೌಡ ಬ. ಪಾಟೀಲ ಮಾಸ್ತಮರ್ಡಿ ಇವರಿಂದ ನಿರ್ಮಿತವಾದ ಶ್ರೀ ನಾಗೇಂದ್ರ ಶಿವಾಲಯದಿಂದ ಪಲಕ್ಷ್ಮಿ, ಛತ್ರ ಚಾಮರ ಅಷ್ಟಾಗಿರಿ, ಬೆತ್ತ ಮತ್ತು ಅಂಬಲಿ-ಗುಗರಿಗಳಿಂದೊಡಗೂಡಿ ಭಕ್ತ ಸಮೂಹದೊಂದಿಗೆ ಆಗಮಿಸಿದ ಹಾಗೂ ತಾರೀಹಾಳ ಗ್ರಾಮದ ಶ್ರೀ
ದೇವಸ್ಥಾನದಿಂದ ಆಗಮಿಸಿದ ಪಲಕ್ಷಿಗಳನ್ನು ಶ್ರೀಗಳು ಹಾಗೂ ಮಠದ ಭಕ್ತರಿಂದ ವಾದ್ಯ ಮೇಳದೊಂದಿಗೆ ಬರಮಾಡಿಕೊಳ್ಳುವದು, ಮಾಸ್ತ ರ್ಮ ಹರಿಭಜನಾ ಮಂಡಳಿ ನೇತೃತ್ವದಲ್ಲಿ ಭಜನೆ, ಸುತ್ತಮುತ್ತಲಿನ ಗ್ರಾಮಗಳ ಪರಿಭಜನಾ ಮಂಡಳಿಗಳು ಪಾಲ್ಗೊಳ್ಳುವ ರಾತ್ರಿ 8-15 ಗಂಟೆಯಿಂದ ಹುಭಷ ಶ್ರೀ ಗಿರಮಲ್ಲ ಮಹಾರಾಜ ಹಾಗೂ ಮಂಡಳಿ, ಸಾಂಬ್ರಾ ಇವರಿಂದ ಕೀರ್ತನೆ ಮತ್ತು ಭಜನೆ ರಾತ್ರಿ 10-30 ಕ್ಕೆ ಆನಂದ ಸೌಂಡ್ನ ಹಿರೇಬಾಗೇವಾಡಿ ಇದರಿಂದ ನಗೆ ಹಬ್ಬ.
ಗುರುವಾರ ದಿನಾಂಕ 27-2-2025 ರಂದು ಬೆಳಿಗ್ಗೆ 8 ಗಂಟೆಯಿಂದ ಮಹಾರುದ್ರಾಭಿಷೇಕ, 11-30 ರಿಂದ ಶ್ರೀ ಗಳವರ ಪಾದಪೂಜೆ, ಮಧ್ಯಾಹ್ನ 1-00 ಘಂಟೆಗೆ ರಥೋತ್ಸವ ಮ. 2-30 ಕ್ಕೆ ಮಹಾಪ್ರಸಾದ, ಜಾತ್ರೆಯ ಐದು ಲಘು ಪ್ರಸಾದ ತಯಾರಕರು ಯರಡಾಲ ಗ್ರಾಮದ ಸಂಕರು ಸಂಜೆ 4 ಘಂಟೆಗೆ ಶ್ರೀ ಬಲಭೀಮ ಯುವಕ ಮಂಡಳ, ಯರವಳ್ಳಿ ಇವರಿಂದ ಸೈಕಲ್ ವೃತ್ತಾಕಾರ ಚಲನೆಯ ಕಾರ್ಯಕ್ರಮಗಳು, ಸಾ, 6-30 ಗಂಟೆಗೆ ಹಿರೇಬಾಗೇವಾಡಿ ಶಾಲಾ ಬಾಲಕ-ಬಾಲಕಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. ರಾತ್ರಿ 10-30 ಘಂಟೆಗೆ ಆನಂದ ಸೌಂಡ ಹಿರೇಬಾಗೇವಾಡಿ ಇವರಿಂದ ರಸಮಂಜರಿ ಕಾರ್ಯಕ್ರಮ.
ಶುಕ್ರವಾರ ದಿನಾಂಕ 28-2-2025 ರಂದು ಮುಂಜಾನೆ 10-30 ರಿಂದ ಸುತ್ತಮುತ್ತಲಿನ ಗ್ರಾಮಗಳ ಭಜನಾ ಮಂಡಳಿಗಳಿಂದ ಭಜನೆ ಮಧ್ಯಾಹ್ನ 3 ಗಂಟೆಗೆ ಹಿರೇಬಾಗೇವಾಡಿ ಭಕ್ತಾದಿಗಳ ನೇತೃತ್ವದಲ್ಲಿ ಬಯಲು ಕುಸಿಗಳು, ರಾತ್ರಿ 10-30 ಘಂಟೆಗೆ’ ಶ್ರೀ ದುರ್ಗಾದೇವಿ ಗಾಯನ ಸಂಘ, ಸಾ, ಹೊಸೂರು, ತಾ. ಬನಹಟ್ಟೆ ರಬಕವಿ ಮತ್ತು ಶ್ರೀ ಬಶ್ವೇಶ್ವರ ಗಾಯನ ಸಂಘ, ಸಾ. ಬಾಡಗಿ, ತಾ, ಬೀಳಗಿ ಇವರಿಂದ ಚೌಡಕಿ ಪದಗಳು,
ಶನಿವಾರ ದಿನಾಂಕ 1-3-2025 ರಂದು ಮಧ್ಯಾಹ್ನ 2-00 ಕ್ಕೆ ಪಲಕ್ಕಿ ಬೀಳ್ಕೊಡುವ ಸಮಾರಂಭ, ಸಂಜೆ 4 ಗಂಟೆಗೆ ಧ್ವಜಾವರೋಹಣದೊಂದಿಗೆ ಜಾತ್ರೆಯ ಮುಕ್ತಾಯವಾಗುವದೆಂದು ಪರಮ ಪೂಜ್ಯ ನಾಗಯ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9379788855, 8984842322, 9481562575, 9845614118, 9902033241, 9538110115 ಗೆ ಸಂಪರ್ಕಿಸಿರಿ.