ಬಡಕುಂದ್ರಿ ಹೊಳೆಮ್ಮಾದೇವಿ ಜಾತ್ರಾ ಮಹೋತ್ಸವ

Badakundri Holemmadevi Jatra Mahotsava

ಬಡಕುಂದ್ರಿ ಹೊಳೆಮ್ಮಾದೇವಿ ಜಾತ್ರಾ ಮಹೋತ್ಸವ 

ಬಡಕುಂದ್ರಿ 06: ಕರ್ನಾಟಕ ಮತ್ತು ಮಹಾರಾಷ್ಟ್ರ ಭಕ್ತರ ಪ್ರಸಿದ್ಧ ಪುಣ್ಯಕ್ಷೇತ್ರ ಹುಕ್ಕೇರಿ ತಾಲೂಕು ಬಡಕುಂದ್ರಿ ಗ್ರಾಮದ ಶಕ್ತಿದೇವತೆ ಹೊಳೆಮ್ಮಾ(ಲಕ್ಷ್ಮೀ)ದೇವಿ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಭಾರತ ಹುಣ್ಣಿಮೆ ಅಂಗವಾಗಿ ಮಂಗಳವಾರ ಫೆ.11ರಿಂದ ಶುಕ್ರವಾರ ಫೆ.21ರವರೆಗೆ 11ದಿನಗಳ ಕಾಲ ಸಡಗರ ಸಂಭ್ರಮದಿಂದ ಜರುಗಲಿದೆ.  

ಜಾತ್ರೆಯ ನಿಮಿತ್ತ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೊಳೆಮ್ಮಾದೇವಿ ಟ್ರಸ್ಟ್‌ ಕಮೀಟಿಯವರು ಪ್ರಕಟಣೆಗೆ ತಿಳಿಸಿದ್ದಾರೆ.